ವಿಶ್ವವಿದ್ಯಾನಿಲಯಗಳಲ್ಲಿ ಫಸ್ಟ್ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಗುತ್ತೆ. ಇದು ಎಲ್ಲರಿಗೂ ಗೊತ್ತಿರೋ ವಿಷಯ. ವಿವಿಯ ಗೋಲ್ಡ್ ಮೆಡಲ್ ಪಡೆಯಲು ಬೇಕಾದ ಅರ್ಹತೆ ಏನು..? ಯಾವ ಮಾನದಂಡದಲ್ಲಿ ಗೋಲ್ಡ್ ಮೆಡಲ್ ನೀಡ್ತಾರೆ..?
ಇದೇಕೆ ಹಿಂಗೆ ಪ್ರಶ್ನೆ ಮಾಡ್ತಿದ್ದೀರಿ.. ಇದೂ ಗೊತ್ತಿಲ್ವಾ..? ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ ಕೊಡ್ತಾರೆ ಎಂದು ನೀವು ಹೇಳಿದರೆ? ನಿಮ್ಮ ಉತ್ತರ ತಪ್ಪು..!
ಅಲ್ಲ ಸ್ವಾಮಿ, ಅತಿಹೆಚ್ಚು ಅಂಕ ಪಡೆದ ರ್ಯಾಂಕ್ ವಿದ್ಯಾರ್ಥಿಗೆ ತಾನೆ ಗೋಲ್ಡ್ ಮೆಡಲ್ ನೀಡೋದು? ಅಂತ ನೀವು ಹೇಳಬಹುದು..! ಆದರೆ, ಈಗ ರ್ಯಾಂಕ್ ಪಡೆಯಲು ಅಂಕ ಒಂದೇ ಮಾನದಂಡವಲ್ಲ..! ವಿವಿಯ ರ್ಯಾಂಕ್ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿ ಸಸ್ಯಹಾರಿ ಆಗಿರಬೇಕು..! ಅಷ್ಟೇಅಲ್ಲ ಆತ ಮದ್ಯಪಾನ ಮಾಡದವನಾಗಿರಬೇಕು…!
ಮದ್ಯಪಾನ ಮಾಡಬಾರದು ಎಂದು ಹೇಳಿದ್ರೆ ಓಕೆ ಅನ್ನಬಹುದು..! ಆದರೆ, ರ್ಯಾಂಕ್ ಪಡೆಯುವ ವಿದ್ಯಾರ್ಥಿ ಸಸ್ಯಹಾರಿ ಆಗಿರಬೇಕು..! ಎನ್ನುವುದು ಸರಿಯಲ್ಲ..! ಅದೇನೇ ಇರಲಿ, ಈಗ ಇಂತಹದ್ದೊಂದು ರೂಲ್ಸ್ ಜಾರಿ ಮಾಡಿದೆ ಪುಣೆ ವಿಶ್ವವಿದ್ಯಾಲಯ..!
ಹೌದು, ಪುಣೆ ಸಾವಿತ್ರಿಭಾಯಿ ಪುಲೆವಿವಿ ಸಸ್ಯಹಾರಿ, ಮದ್ಯಪಾನ ಮಾಡದ ವಿದ್ಯಾರ್ಥಿಗೆ ಮಾತ್ರ ರ್ಯಾಂಕ್ ನೀಡುವುದಾಗಿ ಹೇಳಿದೆ..! ಮಹರ್ಷಿ ಕೀರ್ತಂಕರ್ ಶೀರಲ್ ಮಾಮ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿ ಹೇಗಿರಬೇಕು ಎಂದು 10 ನಿಯಮಗಳನ್ನು ಸುತ್ತೋಲೆಯಲ್ಲಿ ಪ್ರಕಟಿಸಿದೆ..! ಈ ಪದಕ ಪಡೆಯುವ ವಿದ್ಯಾರ್ಥಿ ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿರಬೇಕು ಎಂಬ ಉದ್ದೇಶದಿಂದ ಈ ನಿಯಮ ತರಲಾಗಿರುವುದಾಗಿ ವಿವಿ ಹೇಳಿಕೊಂಡಿದೆ.
ರ್ಯಾಂಕ್ ಚಿನ್ನದ ಪದಕ ಪಡೆಯೋ ವಿದ್ಯಾರ್ಥಿ ಸಸ್ಯಹಾರಿ ಆಗಿರಬೇಕು, ಮದ್ಯಪಾನ ಮಾಡಬಾರದು ಎಂಬ ನಿಯಮಗಳ ಜೊತೆಗೆ ಆತ/ಕೆ ರಕ್ತದಾನ ಶಿಬಿರ, ಶ್ರಮದಾನ, ಪರಿಸರ ರಕ್ಷಣೆ, ಮಾಲಿನ್ಯ ನಿಯಂತ್ರಣ ಕೆಲಸ, ಸಾಹಿತ್ಯ, ಸ್ವಚ್ಛತೆ, ಏಡ್ಸ್ ಜಾಗೃತಿ ಮೊದಲಾದ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ನಿಯಮಗಳಿಗೆ ಶಿವಸೇನೆ, ಎನ್‍ಸಿಪಿ ಆಕ್ಷೇಪ ವ್ಯಕ್ತಪಡಿಸಿದ್ದವು. ಎಲ್ಲೆಡೆ ವಿರೋಧಗಳು ಕೇಳಿಬಂದಿದ್ದರಿಂದ ಈಗ ವಿವಿ ಸುತ್ತೋಲೆಯನ್ನು ಹಿಂಪಡೆದಿದೆ.