ಝೀ ಕನ್ನಡದಲ್ಲಿನ ‘ಕೋಟ್ಯಧಿಪತಿ’ ಕಾರ್ಯಕ್ರಮವನ್ನು ಮತ್ತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಡೋ ಸಾಧ್ಯತೆ ಇದೆ.
ಇಷ್ಟರವರೆಗೆ ಅಪ್ಪು ನಡೆಸಿಕೊಡ್ತಿದ್ದ ಈ ಕಾರ್ಯಕ್ರಮವನ್ನು ಈ ಬಾರಿ ರಮೇಶ್ ಅರವಿಂದ್ ನಡೆಸಿ ಕೊಡ್ತಿದ್ದಾರೆ . ಆದರೆ, ಮುಂದಿನ ಸಲದಿಂದ ಮತ್ತೆ ಅಪ್ಪು ನಡೆಸಿಕೊಡುವ ಸಾಧ್ಯತೆ ಹೆಚ್ಚಿದೆ.
Viacom ಸಂಸ್ಥೆ ಕೋಟ್ಯಧಿಪತಿ ಕಾರ್ಯಕ್ರಮ ಪಡೆದು ಕೊಂಡಿದ್ದು, ಈ ಸಂಸ್ಥೆಯ ಕಲರ್ಸ್ ನಲ್ಲಿ ಕೋಟ್ಯಧಿಪತಿ ಪ್ರಸಾರವಾಗಲಿದೆ. ಆದ್ದರಿಂದ ಫ್ಯಾಮಿಲಿ ಪವರ್ ಕಾರ್ಯಕ್ರಮದ ಮೂಲಕ ಕಲರ್ಸ್ ಫ್ಯಾಮಿಲಿ ಸೇರಿರೋ ಅಪ್ಪು ಕೋಟ್ಯಧಿಪತಿಯನ್ನು ಸಹ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.