ಪವರ್ ಸ್ಟಾರ್ ಮಾಡಿದ ಮೊದಲ ಟ್ವೀಟ್ ಇದು…!

admin
By admin
0 Min Read

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವೀಟರ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದು ಇತ್ತೀಚೆಗೆ. ಇವರ ಮೊದಲ ಟ್ವೀಟ್ ಏನಿರಬಹುದು? ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ.

ಅಪ್ಪು ತಮ್ಮ ಟ್ವೀಟ್ ರ್ ಖಾತೆಯಲ್ಲಿ ‘ಕವಲುದಾರಿ’ ಸಿನಿಮಾದ ಟೀಸರ್ ಅಪ್ ಲೋಡ್ ಮಾಡಿದ್ದಾರೆ. ಇದು ನನ್ನ #FirstTweet  #PRKProductions, First Movie #Kavaludaari ಟೀಸರ್ ಅಂತಾ ಹ್ಯಾಶ್​​ ಟ್ಯಾಗ್​ ಮಾಡಿದ್ದಾರೆ.‌ 2018 ರ ಅಕ್ಕ ಸಮ್ಮೇಳನದಲ್ಲಿ ಲಾಂಚ್ ಮಾಡಿದ್ವಿ. ನೋಡಿ ಪ್ರೋತ್ಸಾಹಿಸಿ ಎಂದು ಬರೆದುಕೊಂಡಿದ್ದಾರೆ.
ಕವಲು ದಾರಿ ಪುನೀತ್ ನಿರ್ಮಾಣದ ಸಿನಿಮಾ. ಇದರ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ತಯಾರಾಗಿದೆ.

Share This Article