ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗಿದ್ದು ಈಗಾಗಲೇ ನಿಮಗೆ ಗೊತ್ತಿದೆ.
ಆದರೆ ಇದಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದು ಯಾರು ಎಂದು ಗೊತ್ತೇ…? ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಪುನೀತ್ ಗೆ ವ್ಯವಸ್ಥೆ ಮಾಡಿಸಿದ್ದು ನವರಸ ನಾಯಕ ಜಗ್ಗೇಶ್.
ಇದನ್ನು ಸ್ವತಃ ಜಗ್ಗೇಶ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. “ನಾನೇ ಈ ಭೇಟೆಗೆ ವ್ಯವಸ್ಥೆ ಮಾಡಿಸಿದ್ದು,ಮಾರ್ಚ್ 17 ರಂದು ಹುಟ್ಟಿದ ನಾವಿಬ್ಬರೂ ಒಂದೇ ದಿನ ಭೇಟಿ ಮಾಡುವ ಉದ್ದೇಶ. ಅಪ್ಪು ನಮ್ಮ ಯಜಮಾನರ ಮುದ್ದಿನ ಮಗ. ನನ್ನ ನೆಚ್ಚಿನ ಸಹೋದರ” ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನಾನೆ ಈ ಬೇಟಿಗೆ ವ್ಯೆವಸ್ಥೆ ಮಾಡಿಸಿದ್ದು..
ಮಾರ್ಚ17 ಹುಟ್ಟಿದ ನಾವಿಬ್ಬರು ಒಂದೆ
ದಿನ ಬೇಟಿಮಾಡುವ ಉದ್ದೇಶ..
ಅಪ್ಪು ನಮ್ಮ ಯಜಮಾನರ ಮುದ್ದಿನ ಮಗ..ನನ್ನ ನೆಚ್ಚಿನ ಸಹೋದರ.. https://t.co/vKHsHdwsvo— ನವರಸನಾಯಕ ಜಗ್ಗೇಶ್ (@Jaggesh2) May 4, 2018
ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುನೀತ್ ಹಾಗೂ ಅವರ ಪತ್ನಿ ಅಶ್ವಿನಿ ಇತ್ತೀಚೆಗೆ ಭೇಟಿ ಮಾಡಿದ್ದರು. ಡಾ. ರಾಜ್ ಕುಮಾರ್ ಅವರ ಬಗ್ಗೆ ಅಪ್ಪು ತಾವು ಬರೆದ ಪುಸ್ತಕವನ್ನು ಮೋದಿ ಅವರಿಗೆ ನೀಡಿದ್ದರು.
Just had the glorious opportunity to meet our dynamic Prime Minister Shri. Narendra Modiji along with my wife Ashwini….
Posted by Puneeth Rajkumar on Thursday, May 3, 2018