ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿರುವ ಜಾಹಿರಾತು ವಿರುದ್ಧ ಕಾಳಿಮಠದ ರಿಷಿಕುಮಾರ ಸ್ವಾಮಿ ತಿರುಗಿ ಬಿದ್ದಿದ್ದಾರೆ.
ದಕ್ಷಿಣ ಭಾರತದ ಹೆಸರಾಂತ ವಸ್ತ್ರ ಮಾರಾಟ ಸಂಸ್ಥೆ ಪೋತೀಸ್ ಸಂಸ್ಥೆಯ ಜಾಹಿರಾತು ವಿರುದ್ಧ ರಿಷಿಕುಮಾರ ಸ್ವಾಮೀಜಿ ಅವರು ಸಿಟ್ಟಾಗಿದ್ದಾರೆ.
ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು ಸಕಲ ವ್ಯವಸ್ಥೆ ಮಾಡಿದ್ದರೂ ತನ್ನ ರಾಣಿಗೆ ಕಷ್ಟವಾಗುವಂತಹ ಉಡುಪು ವಸ್ತ್ರಗಳ ಮಳಿಗೆಯನ್ನು ಕಟ್ಟಿಸಲಾಗಲಿಲ್ಲ. ಪೋತೀಸ್ ಸಂಸ್ಥೆಯವರು ವಸ್ತ್ರಗಳ ಮಾರಾಟ ಮಳಿಗೆಯನ್ನು ನೀಗಿಸಿ ರಾಜ ರಾಣಿಯರನ್ನು ಸಂತೋಷ ಪಡಿಸಿದ್ರ ಎಂಬ ಜಾಹಿರಾತು ಇದು.
ಈ ಜಾಹಿರಾತು ವಿರುದ್ಧ ರಿಷಿಕುಮಾರ ಸ್ವಾಮೀಜಿ ದನಿ ಎತ್ತಿದ್ದಾರೆ. ಇದನ್ನು ಹಿಂಪಡೆಯದೇ ಇದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ. ಜೊತೆಗೆ ಉಗ್ರ ಹೋರಾಟ ಮಾಡುವುದಾಗಿಯೂ ತಿಳಿಸಿದ್ದಾರೆ.
ಕೆಂಪೇಗೌಡರನ್ನು ಬಳಸಿಕೊಳ್ಳುವುದರ ಮೂಲಕ ಬೆಂಗಳೂರಿನೊಂದಿಗೆ ಪೋಥೀಸ್ ನವರದ್ದು ಐತಿಹಾಸಿಕ ಸಂಬಂಧವಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬುದು ಸ್ವಾಮಿಗಳ ಆಕ್ರೋಶಕ್ಕೆ ಕಾರಣ.