ಕ್ರೂರಿಯೊಬ್ಬ ಜೀವಂತ ನಾಯಿಮರಿಯೊಂದನ್ನು ಮೊಸಳಗಳಿದ್ದ ಕೆರೆಗೆ ಎಸೆದು ನಿರ್ದಯಿತನ ಮೆರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರೋದು ಇಂಡೋನೇಷ್ಯಾದಲ್ಲಿ ಎಂದು ಹೇಳಲಾಗುತ್ತಿದೆ.

ಬ್ಯಾಗಿನಿಂದ ನಾಯಿಮರಿಯನ್ನು ತೆಗೆದು ಕೆರೆ ಕಡೆಗೆ ಓಡಿದ್ದಾನೆ. ಅದರ ಕತ್ತನ್ನು ಹಿಡಿದುಕೊಂಡು ನದಿಗೆ ಎಸೆದಿದ್ದಾನೆ. ಹಿಂದೆ ಇದ್ದವರು ನಗುತ್ತಾ, ಕಿರುಚಾಡುತ್ತಾ ಅವನಿಗೆ ಪ್ರೋತ್ಸಾಹ ನೀಡಿದ್ದಾರೆ. ನೀರಿಗೆ ಬಿದ್ದ ನಾಯಿಮರಿ ಈಜಿ ದಡ ಸೇರಲು ಪ್ರಯತ್ನಿಸಿದರೂ
ಸಾಧ್ಯವಾಗಿಲ್ಲ. ಅಷ್ಟೊತ್ತಿಗೆ ಮೊಸಳೆಯೊಂದು ಬಂದು ನಾಯಿಮರಿಯನ್ನು ತಿಂದಿದೆ. ಆ ನಿರ್ದಯಿ ಯಾರು…? ಆತ ಯಾಕೆ ಹೀಗೆ ಮಾಡಿದ ಅಂತ ತಿಳಿದು ಬಂದಿಲ್ಲ.







