ಚಂದನವನದಲ್ಲೀಗ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರಾದಮೇಲೆ ಒಬ್ಬರು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇದೀಗ ನಟ ರಘುಭಟ್ ಅವರ ಮದುವೆ ಸಡಗರ.
ನಾಳೆ ಮಂಗಳೂರಿನಲ್ಲಿ ರಘುಭಟ್ ವಿವಾಹ ನಡೆಯಲಿದೆ. ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರು, ಚಿತ್ರರಂಗದ ಆಪ್ತರು ರಘು ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆಪ್ಟೆಂಬರ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯುತ್ತದೆ. ಅಂದು ಚಿತ್ರರಂಗದ ಪ್ರಮುಖರು, ರಾಜಕೀಯ ನಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ರಘುಭಟ್ ಅವರ ಕೈ ಹಿಡಿಯುತ್ತಿರುವವರು ಸುಗುಣ ಬಿ.ಸಿ. ಇವರು ಎಂಕಾಂ ಪೂರೈಸಿದ್ದಾರೆ. ಮೂಲತಃ ನೆಲಮಂಗಲ ಮೂಲದವರಾದ ಸುಗುಣ ಅವರು ಕಾರ್ಯಕ್ರಮವೊಂದರಲ್ಲಿ ರಘುಭಟ್ ಅವರಿಗೆ ಪರಿಚಿತರಾಗಿದ್ದು, ಪರಿಚಯ ಸ್ನೇಹ, ಸ್ನೇಹ ಪ್ರೀತಿಗೆ ತಿರುಗಿ, ಕುಟುಂಬಸ್ಥರ ಒಪ್ಪಿಗೆ ಪಡೆದು ಇದೀಗ ಹೊಸಬಾಳಿಗೆ ಎಂಟ್ರಿಕೊಡ್ತಿದ್ದಾರೆ.
ರಘುಭಟ್, ಕೃಷ್ಣ ಲೀಲೆ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಬಾಲ ನಟನಾಗಿ ಕಾಣಿಸಿಕೊಂಡಿದ್ದ ರಘುಭಟ್ ಈಗ ಹಂತಹಂತವಾಗಿ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.
ರಾಮ ಕೃಷ್ಣ ಗೋವಿಂದ ಸಿನಿಮಾ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಇವರು, ಆ ನಂತರ ತಾರೆ , ಪಾರು ವೈಫ್ ಆಫ್ ದೇವದಾಸ್, ರಘುವೀರ ಚಿತ್ರಗಳಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
n
ಇತ್ತೀಚೆಗೆ ತೆರೆಕಂಡ ಅನ್ವೇಷಿ, ಡ್ರೀಂಗರ್ಲ್, ಲವ್ ಯು 2, ಎಂಎಂಸಿಎಚ್ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ. ದಾದಾ ಈಸ್ ಬ್ಯಾಕ್ ಸಿನಿಮಾದಲ್ಲಿ ನೆಗಿಟೀವ್ ಶೇಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಕರ್ವ, ನನ್ನ ನಿನ್ನ ಪ್ರೇಮಕಥೆ, ಬಕಾಸುರ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.