ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಜೊತೆ ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಹುಲ್ ಗಾಂಧಿ ಅದಿತಿ ಸಿಂಗ್ ಜೊತೆಗಿರುವ ಫೋಟೋಗಳು ಸಖತ್ ವೈರಲ್ ಆಗಿವೆ. ಇದೇ ತಿಂಗಳು ಮದುವೆ ಎಂಬ ಸುದ್ದಿ ಹಬ್ಬಿದೆ. ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಅದಿತಿ ಅವರು ಮಾತನಾಡಿ, ಇವೆಲ್ಲಾ ಸುಳ್ಳು.ಇದರಿಂದ ನನಗೆ ಬೇಸರವಾಗಿದೆ. ರಾಹುಲ್ ನನ್ನ ‘ರಾಖಿ’ ಸಹೋದರ ಎಂದು ಹೇಳಿದ್ದಾರೆ.
29ವರ್ಷದ ಅದಿತಿ ರಾಯ್ ಬರೇಲಿ ಶಾಸಕಿ. ಪ್ರಿಯಾಂಕ ಗಾಂಧಿಯವರ ಆಪ್ತರು ಎನ್ನಲಾಗಿದೆ. ಇವರು ಯು ಡ್ಯೂಕ್ ವಿವಿಯಲ್ಲಿ ಮ್ಯಾನೇಜ್ಮೆಂಟ್ ಸ್ಟಡೀಸ್ ವ್ಯಾಸಂಗ ಮಾಡಿದ್ದಾರೆ.