ಬೆಂಗಳೂರಿನ ಹಲವೆಡೆ ಧಾರಾಕಾರವಾಗಿ ವರುಣ ಆರ್ಭಟ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರತಿನಿತ್ಯ ಬೆಂಗಳೂರಿನ ಜನರಿಗೆ ಮಳೆರಾಯ ದರ್ಶನ ನೀಡುತ್ತಿದ್ದು, ಮಳೆಯಿಂದಾಗಿ ಹೈರಾಣಾಗಿದ್ದಾರೆ. ಅದರಂತೆ ನಗರದ ಮಹದೇವಪುರದ ರೈನ್ ಬೋ ಲೇಔಟ್ ನಲ್ಲಿ ಎರಡು ದಿನವಾದರೂ ಮಳೆ ನೀರು ತಗ್ಗದೇ, ಬಡಾವಣೆ ಒಳಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಕೆರೆ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಹಬ್ಬದ ದಿನದಂದು ಬಡಾವಣೆ ನಿವಾಸಿಗಳು ಆತಂಕದಲ್ಲೇ ಇದ್ದು, ಟ್ರಾಕ್ಟರ್ ಮೂಲಕ ಬಡಾವಣೆಗೆ ಹೋಗಿ ಬರುತ್ತಿದ್ದಾರೆ. ನಿನ್ನೆಯ ಪರಿಸ್ಥಿತಿ ಇಂದು ಕೂಡ ಮುಂದುವರಿದಿದ್ದು, ಗೇಟ್ ಮುಂಭಾಗದಲ್ಲಿ ಎರಡುವರೆ ಅಡಿಗೂ ಹೆಚ್ಚು ನೀರು ತುಂಬಿ ಬರುತ್ತಿದೆ. ಇಡೀ ಬಡಾವಣೆ ಮುಂಭಾಗದಲ್ಲಿ ಕೆರೆಯಂತೆ ನೀರು ತುಂಬಿದ್ದು, ಜಿರಿ ಜಿರಿ ವಾತಾವರಣದಲ್ಲಿ ನಿವಾಸಿಗಳ ಕಷ್ಟ ಹೇಳತ್ತೀರದ್ದಾಗಿದೆ.
ವರುಣ ಆರ್ಭಟಕ್ಕೆ ಬೆಂಗಳೂರು ತತ್ತರ
Date: