ಮಳೆ ನೀರು ತುಂಬಿದ್ದ ರೈಲ್ವೆ ಅಂಡರ್ ಪಾಸ್ ನಲ್ಲಿ ಶಾಲಾ ಬಸ್ ವೊಂದು ಮುಳುಗಿರುವ ಘಟನೆ ಉತ್ತರ ಪ್ರದೇಶದ ಖಾರ್ಕೋಡ್ ನಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿದ ಮಳೆಗೆ ಚಾಂದ್ ಸರ ಸಮೀಪದ ಅಂಡರ್ ಪಾಸ್ ಕೆಸರು ಮಿಶ್ರಿತ ನೀರಿನಿಂದ ತುಂಬಿದ್ದು, ಚಾಲಕ ಬಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳುವ ಹೊತ್ತಿಗೆ ಸೈಲೆನ್ಸರ್ , ಎಂಜಿನ್ ಗೆ ನೀರು ನುಗ್ಗಿದೆ. ಅಷ್ಟೊತ್ತಿಗೆ ನೀರಿನ ಮಟ್ಟ ಹೆಚ್ಚಾಗಿದೆ. ಮಕ್ಕಳು ಅಳಲಾರಂಭಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕ ಮಕ್ಕಳನ್ನು ಹೊರತರಲು ಯತ್ನಿಸಿದ್ದಾರೆ. ಮಕ್ಕಳ ಅಳು ಕೇಳಿ ಬಂದ ಗ್ರಾಮಸ್ಥರು ಚಾಲಕ, ನಿರ್ವಾಹಕನ ಜೊತೆ ಸೇರಿ ಕಿಟಕಿ, ಗಾಜು ಒಡೆದು ರಕ್ಷಣಾ ಕಾರ್ಯದಲ್ಲಿ ತೊಡಗಿ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ನಲ್ಲಿದ್ದ ಎಲ್ಲಾ 21 ಮಕ್ಕಳೂ ಸಹ ಅಪಾಯದಿಂದ ಪಾರಾಗಿದ್ದಾರೆ.
ಮಳೆ ನೀರಿನಲ್ಲಿ ಮುಳುಗಿದ ಸ್ಕೂಲ್ ಬಸ್
Date: