ರೈನ್ ಬೋ ಲೇಔಟ್ ನಲ್ಲಿ ಕಳ್ಳರ ಹಾವಳಿ

Date:

ಕಳ್ಳತನ ಕಡಿಮೇ ಆಯ್ತು ಅನ್ನುವಷ್ಟರಲ್ಲಿ , ಸರಣಿಗಳ್ಳತನ ಪ್ರಕರಣ ಬೆಳಕಿಗೆ ಬಂದಿದೆ . ಬೆಂಗಳೂರಿನ ರೈನ್ ಬೋ ಲೇಔಟ್​ನಲ್ಲಿ ಸರಣಿ ಕಳ್ಳತನವಾಗಿದ್ದು, ಐಶಾರಾಮಿ ಮನೆಗಳಲ್ಲಿದ್ದ ಚಿನ್ನಾಭರಣ ಕಳ್ಳರು ದೋಚಿದ್ಧಾರೆ. ಮನೆಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ, ಕರೆಂಟ್​ ಇಲ್ಲದೇ ಇರುವ ವೇಳೆ ಮನೆಗೆ ನುಗ್ಗಿ ಕಳವು ಮಾಡಿದ್ಧಾರೆ. ಸಿಸಿಟಿವಿ ವರ್ಕ್ ಆಗ್ತಿಲ್ಲ ಅನ್ನೋದನ್ನ ಖಾತ್ರಿ ಮಾಡ್ಕೊಂಡು ಲೂಟಿ ಮಾಡಿದ್ದಾರೆ.
ಮನೆಯವರು ವಾಪಸ್ ಬಂದು ನೋಡಿದಾಗ ಕಳ್ಳತನ ಪತ್ತೆಯಾಗಿದೆ. ಬೆಳ್ಳಂದೂರು ಪೊಲೀಸ್​ ಠಾಣೆ ವ್ಯಾಪ್ತಿಯ ರೈನ್​​ ಬೋ ಲೇಔಟ್​ನ ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಉದ್ಯಮಿ ಧರ್ಮತೇಜ್​​, IT ಸಿಬ್ಬಂದಿ ಮಂಜುನಾಥ್​​, ಉದಯ ಭಾಸ್ಕರ್​ ಮನೆ ಲೂಟಿ ಮಾಡಿದ್ಧಾರೆ. ಖತರ್ನಾಕ್​​ ಕಳ್ಳರು ಫ್ಲಾಟ್​ಗಳಲ್ಲಿ ಕಳವು ಮಾಡಿದ್ಧಾರೆ. ಎರಡು ವಜ್ರದ ಬಳೆ, ಡೈಮೆಂಡ್​ ಚೈನ್​​, ಮೂರು ಓಲೆ , 10 ಜೊತೆ ಚಿನ್ನದ ಓಲೆ, ಚಿನ್ನದ ಬಳೆ, ಗೋಲ್ಡ್​ ಬ್ರಾಸ್ಲೆಟ್​, 2 ಗೋಲ್ಡ್​ ಪೆಂಡೆಂಟ್​, 3 ಚಿನ್ನದ ಉಂಗುರ, ವಜ್ರ ಸಹಿತ ಚಿನ್ನದ ಸರ ಕಳ್ಳತನವಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...