ಅಪ್ಪನಿಗೆ ಮಗನನ್ನು ವಿಜ್ಞಾನಿ ಮಾಡ್ಬೇಕು ಎಂಬ ಆಸೆ ಇತ್ತು. ಅವರ ಕನಸಿಗೆ ತಕ್ಕಂತೆ ಮಗನಿಗೆ ಖಗೋಳ ಶಾಸ್ತ್ರದಲ್ಲಿ ಎಲ್ಲಿಲ್ಲದ ಆಸಕ್ತಿ. ಮಗನ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ತಂದೆ ಅಕಾಲಿಕ ಮರಣವನ್ನಪ್ಪಿದ್ರು ಅವರೊಂದಿಗೆ ವಿಜ್ಞಾನಿ ಆಗುವ ಕನಸು ನುಚ್ಚು ನೂರಾಯ್ತು…!
ವಿಜ್ಞಾನಿ ಆಗುವ ನಿಟ್ಟಿನಲ್ಲಿ ಪ್ರಯತ್ನ, ವಿದ್ಯಾಭ್ಯಾಸ ಮುಂದುವರೆಸಲು ಆಗಲಿಲ್ಲ. ಜೊತೆಗೆ ಇಷ್ಟದ ಇನ್ನೊಂದು ಕ್ಷೇತ್ರ ಸಾಹಿತ್ಯ ಹೊಟ್ಟೆಯ ಹಸಿವನ್ನು ನೀಗಿಸಲಾರದು ಎಂದು ಪತ್ರಿಕೋದ್ಯಮದ ದಾರಿ ಹಿಡಿಯಬೇಕಾಯಿತು…! ಇದು ದಿಗ್ವಿಜಯ ವಾಹಿನಿಯ ನಿರೂಪಕ ರಕ್ಷತ್ ಶೆಟ್ಟಿ ಅವರ ಲೈಫ್ ಸ್ಟೋರಿ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ರಕ್ಷತ್ ಅವರ ತಂದೆ ದಿ.ರಾಮಯ್ಯ ಶೆಟ್ಟಿ, ತಾಯಿ ಕುಸಮಾವತಿ, ತಂಗಿ ರಮ್ಯಾ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಉಪ್ಪಿನಂಗಡಿಯ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಪಡೆದರು. ಬಳಿಕ ಉಪ್ಪಿನಂಗಡಿ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ (ಪತ್ರಿಕೋದ್ಯಮ, ಇಂಗ್ಲಿಷ್) ವ್ಯಾಸಂಗ ಮಾಡಿದ್ರು.
ರಕ್ಷತ್ ಅವರ ತಂದೆ ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದವರು. ಆದರೆ, ಬದಲಾದ ಸನ್ನಿವೇಶದಲ್ಲಿ ಬಡತನವನ್ನು ಎದುರಿಸಬೇಕಾಯಿತು. ಕುಟುಂಬ ನಿರ್ವಹಣೆಗಾಗಿ ಶಾಲೆಯೊಂದರಲ್ಲಿ ಡಿ.ದರ್ಜೆಯ ನೌಕರರಾಗಿ ಸೇರಿದ್ರು. ಮಕ್ಕಳಿಬ್ಬರನ್ನು ಚೆನ್ನಾಗಿ ಓದಿಸಬೇಕೆಂದು ಕಷ್ಟಪಟ್ರು. ಬರುವ ಬಿಡಿಗಾಸು ಸಂಬಳದಲ್ಲೇ ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆ ಮಾಡ್ತಿದ್ರು…!
ಚಿಕ್ಕ ವಯಸ್ಸಲ್ಲಿ ಲಾರಿ ಡ್ರೈವರ್ ಆಗ್ಬೇಕು, ಜೆಸಿಬಿ ಆಪರೇಟರ್ ಆಗ್ಬೇಕು ಎಂದು ಆಸೆಪಟ್ಟಿದ್ದ ರಕ್ಷತ್ ಅವರಿಗೆ ಓದುವ ಆಸಕ್ತಿ ಬೆಳೆಸಿದ್ದು ಬಡತನ…! ಮನೆಯಲ್ಲಿ ಟಿವಿ ಇರ್ಲಿಲ್ಲ. ತಂದೆಗೆ ಓದುವ ಆಸಕ್ತಿ ಇತ್ತು. ಪುಸ್ತಕ, ದಿನಪತ್ರಿಕೆಗಳನ್ನು ತಪ್ಪಿಸುತ್ತಿರಲಿಲ್ಲ. ರಜೆಯಲ್ಲಿ ಸ್ನೇಹಿತರಾರು ಸಿಗದಿದ್ದಾಗ ಬಾಲಕ ರಕ್ಷತ್ ಅವರಿಗೆ ಸಿಗುತ್ತಿದ್ದುದು ಪುಸ್ತಕ. ತಂದೆ ಪುಸ್ತಕ ಓದುವ ಹುಚ್ಚನ್ನು ಹೆಚ್ಚಿಸಿದ್ರು. ನೀವು ನಂಬ್ತೀರೋ ಬಿಡ್ತಿರೋ ಸುಮಾರು 6 ಸಾವಿರ ಪುಸ್ತಕಗಳನ್ನು ಓದಿರುವ ರಕ್ಷತ್ 5ನೇ ತರಗತಿಯಲ್ಲಿರುವಾಗಲೇ ‘ಜೈಮಿನಿ ಭಾರತ’ ಓದಿದ್ರು…! ಹೀಗೆ ಬಡತನ ಸಾಹಿತ್ಯ ಆಸಕ್ತಿಯನ್ನು, ಓದುವ ಹುಚ್ಚನ್ನು ಹೆಚ್ಚಿಸಿತು.
ರಕ್ಷತ್ ಎಸ್ ಎಸ್ ಎಲ್ ಸಿ ಓದುವಾಗಲೇ ರಾಮಯ್ಯಶೆಟ್ಟಿ ಅವರು ಹೃದಯಾಘಾತದಿಂದ ಅಗಲಿದ್ರು. ಅವರ ಅಗಲುವಿಕೆ ಕುಟುಂಬಕ್ಕೆ ಎದುರಾದ ದೊಡ್ಡ ಆಘಾತ. ತಂದೆಯ ಮರಣ ನಂತರ ಕುಟುಂಬದ ಜವಬ್ದಾರಿ ರಕ್ಷತ್ ಮೇಲೆ ಬಿತ್ತು.
ಖಗೋಳ ಶಾಸ್ತ್ರದಲ್ಲಿ ಆಸಕ್ತಿ ಇದ್ದರೂ ಅದರಲ್ಲಿ ಮುಂದುವರೆಯಲು ಆಗಲಿಲ್ಲ. ಇನ್ನು ಸಾಹಿತ್ಯ ಕ್ಷೇತ್ರದ ಕಡೆಗೂ ಗಮನವಿತ್ತು. ಆದರೆ ಮೊದಲೇ ಹೇಳಿದಂತೆ ಕೆಲಸದ ಅನಿವಾರ್ಯತೆ ರಕ್ಷತ್ ಅವರನ್ನು ಪತ್ರಿಕೋದ್ಯಮಕ್ಕೆ ಎಳೆದು ತಂದಿತು.
2011ರಲ್ಲಿ ಪದವಿ ಮುಗಿಯುತ್ತಿದ್ದಂತೆ ಮಂಗಳೂರಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಗೆ ಟ್ರೈನಿಯಾಗಿ ಸೇರಿಕೊಂಡ್ರು. ಅಲ್ಲಿ ಐದಾರು ತಿಂಗಳು ಕೆಲಸ ಮಾಡಿದ ಬಳಿಕ ಉಡುಪಿಯ ‘ಸ್ಪಂದನ’ ಚಾನಲ್ ಮೂಲಕ ದೃಶ್ಯ ಮಾಧ್ಯಮ ಕ್ಷೇತ್ರಕ್ಕೆ ರಕ್ಷತ್ ಅವರ ಪ್ರವೇಶ.
ಇಲ್ಲಿ ಇವರು ನಡೆಸಿಕೊಡ್ತಿದ್ದ ‘ತಿರುಗು ಬಾಣ’ ಸೂಪರ್ ಹಿಟ್ ಆಗಿತ್ತು. ಕರಾವಳಿ ಭಾಗದಲ್ಲಿ ಮನೆಮಾತಾಗಿದ್ದ ಕಾರ್ಯಕ್ರಮವಿದು.
ಅಂದು ಕೆ.ಎಸ್ ಈಶ್ವರಪ್ಪ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು ಒಂದೆರಡು ದಿನವಾಗಿತ್ತಷ್ಟೇ. ಅವರು ಉಡುಪಿಗೆ ಬಂದಾಗ ಸ್ಪಂದನ ಚಾನಲ್ ನ ತಿರುಗುಬಾಣ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಂದಿದ್ರು. ಅವತ್ತು ರಕ್ಷತ್ ಈಶ್ವರಪ್ಪ ಅವರ ಇಂಟರ್ ವ್ಯೂ ಮಾಡಿದ್ರು…! ಇಂಟರ್ ವ್ಯೂ ಗೂ ಮುನ್ನ ರಕ್ಷತ್ ಅವರನ್ನು ನೋಡಿದ ಈಶ್ವರಪ್ಪ ಈ ಹುಡ್ಗ ನನ್ನ ಇಂಟರ್ ವ್ಯೂ ಮಾಡ್ತಾನ…? ಅಂತ ಉದ್ಗರಿಸಿದ್ರು…! ಯಾಕಂದ್ರೆ, ರಕ್ಷತ್ ಆಗ ಅಷ್ಟೊಂದು ಚಿಕ್ಕವರಿದ್ರು. ಇಂಟರ್ ವ್ಯೂ ಮುಗಿದ ಮೇಲೆ ಅದೇ ಈಶ್ವರಪ್ಪ ಮೆಚ್ಚಿ ಬೆನ್ನುತಟ್ಟಿದ್ರು…! ತುಂಬಾ ಎತ್ತರಕ್ಕೆ ಬೆಳಿತೀಯ ಅಂತ ಭವಿಷ್ಯ ನುಡಿದಿದ್ರು.
ಸ್ಪಂದನದಲ್ಲಿ ಸುಮಾರು 4 ವರ್ಷಗಳ ಕಾಲ ಕೆಲಸ ಮಾಡಿದ್ರು. ವಿಶ್ವವಾಣಿ ದಿನಪತ್ರಿಕೆ ಆರಂಭವಾದಾಗ ಬೆಂಗಳೂರು ಕಡೆಗೆ ಬಂದ್ರು. ವಿಶ್ವವಾಣಿ ಆರಂಭದ ದಿನಗಳಿಂದಲೂ ಅಲ್ಲಿದ್ರು. ಕೆಂಪಣ್ಣ ಆಯೋಗದ ಬಗ್ಗೆ ಇವರು ಮಾಡಿದ ಸಾಕಷ್ಟು ವರದಿಗಳು ವಿಧಾನಸಭೆಯಲ್ಲಿ ಚರ್ಚೆಯಾಗಿವೆ…! ಇದು ಹಲ್ಲಿಲ್ಲದ ಹಾವು ಎಂದು ರಕ್ಷತ್ ಬರೆದಿದ್ದರು. ಅವರು ಅಂದು ಕೆಂಪಣ್ಣ ಆಯೋಗದ ಬಗ್ಗೆ ಏನ್ ಬರೆದಿದ್ರೋ ಅವೆಲ್ಲಾ ಇಂದು ನಿಜವಾಗಿದೆ…!
ವಿಶ್ವವಾಣಿ ಒಂದು ವಸಂತ ಪೂರೈಸಿದ ಬಳಿಕ ತನ್ನಲ್ಲಿ ಪ್ರಕಟವಾದ ಅತ್ಯುತ್ತಮ 6 ವರದಿಗಳ ಪಟ್ಟಿ ಮಾಡಿತ್ತು. ಅದರಲ್ಲಿ ರಕ್ಷತ್ ಮಾಡಿದ್ದ 2-3 ವರದಿಗಳಿದ್ದವು…!
ಒಮ್ಮೆ ಇದ್ದಕ್ಕಿದ್ದಂತೆ ರಕ್ಷತ್ ಬೆಂಗಳೂರು ಬಿಟ್ಟು ಊರಿಗೆ ಹೋಗಲು ಡಿಸೈಡ್ ಮಾಡಿದ್ರು. ಆಗ ಅವರನ್ನು ಕರೆದು ಮಾತಾಡಿಸಿದ ವಿಶ್ವವಾಣಿಯ ಸಾರಥಿ ವಿಶ್ವೇಶ್ವರ ಭಟ್, ರಾಜೀನಾಮೆ ಪತ್ರವನ್ನು ತೆಗೆದುಕೊಳ್ಳದೆ, ‘ನೀನು ರಜೆ ಮೇಲೆ ಊರಿಗೆ ಹೋಗಿ ಬಾ. ಬೆಂಗಳೂರು ಬಿಟ್ಟು ಊರಲ್ಲೇ ಸೆಟಲ್ ಆಗ್ಬೇಡ. ಇಲ್ಲಿದ್ರೆ ನಿನಗೆ ಒಳ್ಳೆಯ ಭವಿಷ್ಯವಿದೆ. ನೀನು ಬೆಳೆಯಬೇಕು ಅಂದಿದ್ರು…! ಅವತ್ತು ಭಟ್ಟರ ಮಾತಿಗೆ ಬೆಲೆಕೊಟ್ಟು ರಜೆ ಮೇಲೆ ಊರಿಗೆ ಹೋಗಿ ವಾಪಸ್ಸು ಕೆಲಸಕ್ಕೆ ಹಾಜಾರಿಗಿದ್ರು.
ನಂತರ ಒಂದೆರಡು ತಿಂಗಳು ವಿಶ್ವವಾಣಿಯಲ್ಲಿ ಕೆಲಸ ಮಾಡಿದ್ರಷ್ಟೇ. ‘ದಿಗ್ವಿಜಯ’ ಚಾನಲ್ ನಿಂದ ಆಫರ್ ಬಂತು. ರಕ್ಷತ್ ವಿಶ್ವೇಶ್ವರ ಭಟ್ಟರ ಛೇಂಬರ್ ಗೆ ಹೋದ್ರು. ‘ಸರ್, ಹೀಗೊಂದು ಆಫರ್ ಇದೆ’ ಅಂದ್ರು. ಹೋಗು ಒಳ್ಳೆಯ ಕಡೆ ಕೆಲಸ ಸಿಕ್ಕಿದೆ. ಬೆಳಿ ಎಂದು ಹಾರೈಸಿ ಕಳುಹಿಸಿದ್ರು ಭಟ್ಟರು.
ದಿಗ್ವಿಜಯ ಚಾನಲ್ ನಲ್ಲಿ ಮೊದಲ ದಿನದಿಂದಲೂ ರಕ್ಷತ್ ಇದ್ದಾರೆ. ನಡುವೆ ಒಮ್ಮೆ ಪ್ರಜಾ ಟಿವಿಗೆ ಹೋಗಿ 2017ರ ಡಿಸೆಂಬರ್ ನಲ್ಲಿ ದಿಗ್ವಿಜಯಕ್ಕೆ ಮರಳಿದ್ದಾರೆ. ನ್ಯೂಸ್, ಡಿಸ್ಕಷನ್ಸ್ ಎಲ್ಲವನ್ನೂ ನಡೆಸಿಕೊಡ್ತಾರೆ. ‘ಯುದ್ಧಕಾಂಡ’ ಇಲ್ಲಿವರ ಸಿಗ್ನೇಚರ್ ಪ್ರೋಗ್ರಾಂ. ಚೇತನ್ ಮತ್ತು ಶ್ರೀನಿವಾಸ್ ಸೇರಿದಂತೆ ಇಡೀ ದಿಗ್ವಿಜಯ ಬಳಗ ನೀಡೋ ಪ್ರೋತ್ಸಾಹವನ್ನು ರಕ್ಷತ್ ನೆನೆಯುತ್ತಾರೆ.
ರಕ್ಷತ್ 2015-16ರಲ್ಲಿ ವಿಶ್ವವಾಣಿ ವರದಿಗಾರರಾಗಿ ಬೆಂಗಳೂರಿಗೆ ಬರುವ ಮುನ್ನವೇ 2013ರಲ್ಲಿ ಬೆಂಗಳೂರಿಗೆ ಬಂದು ಚಾನಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ರು. ಒಂದು ದಿನ ಅಮ್ಮನಿಗೆ ಹುಷಾರಿಲ್ಲ ಊರಿಗೆ ಹೋಗ್ಬೇಕು ಅಂತ ರಜೆ ಕೇಳಿದಾಗ ಮುಖ್ಯಸ್ಥರು ರಜೆ ನೀಡಲು ನಿರಾಕರಿಸಿದ್ರು…!
ತನಗೆ ಅಮ್ಮನಿಗಿಂತ ಹೆಚ್ಚು ಯಾರೂ ಇಲ್ಲ. ಈ ಕೆಲಸ ಇಲ್ದೆ ಇದ್ರೆ ಉಪ್ಪಿನಂಗಡಿಗೆ ಹೋಗಿ ಟೊಮ್ಯಾಟೋ ಮಾರುತ್ತೇನೆ. ನಿಮ್ಮ ಕೆಲಸ ಯಾರಿಗೆ ಬೇಕು? ಅಂತ ಐಡಿ ಕಾರ್ಡ್ ಮುಖದ ಮೇಲೆ ಎಸೆದು ಊರಿಗೆ ಹೋಗಿದ್ರು…! ಕರುಣೆ, ಮಾನವೀಯತೆ ಇಲ್ಲದ ಮಾಧ್ಯಮ ಜಗತ್ತಿನ ಕೆಲವು ಮುಖಗಳ ದರ್ಶನ ಆಗಿದ್ದು ಅವತ್ತೇ…!
ರಕ್ಷತ್ ಅವರೇ ಹೇಳುವಂತೆ ರಕ್ಷತ್ ಹಣ ಸಂಪಾದಿಸಿಲ್ಲ. ಸಂಪಾದಿಸಿದ್ದು ಸ್ನೇಹಿತರನ್ನು. ರಕ್ಷತ್ ಸ್ನೇಹ ಜೀವಿ. ಅಮ್ಮ ಎಂದರೆ ಪ್ರಾಣ. ಬೆಂಗಳೂರಿಗೆ ವಾಪಸ್ಸು ಮರಳಲು ಕಾರಣ ತಂಗಿ ರಮ್ಯಾ. ನೀನು ಬೆಂಗಳೂರಿಗೆ ಹೋಗು ಅಂತ ದಬ್ಬಿದ್ದು ತಂಗಿಯೇ. ಆಕೆ ತನ್ನ ಮೊದಲ ಎಡಿಟರ್, ನನಗೊಬ್ಬ ಗುರು ಎನ್ನುತ್ತಾರೆ.
ರಕ್ಷತ್ ಗೆ ಸಾಕುಪ್ರಾಣಿಗಳೆಂದ್ರೆ ತುಂಬಾ ಪ್ರೀತಿ. ತನ್ನ ಮುದ್ದಿನ ನಾಯಿ ರಾಕಿ ಸತ್ತೋದಾಗ ರಕ್ಷತ್ ಆಫೀಸಲ್ಲಿ ಅತ್ತಿದ್ರು…! ಎಲ್ಲರ ಜೊತೆ ಜಾಲಿಯಾಗಿರೋ, ಸೀರಿಯಸ್ ಆಗಿ ಇರಬೇಕಾದಾಗ ಸೀರಿಯಸ್ ಆಗಿರೋ ರಕ್ಷತ್ ಅತ್ತಿದ್ದು ದಿಗ್ವಿಜಯದಲ್ಲಿ ಅವರ ಸಹೋದ್ಯೋಗಿಗಳಿಗೆ ಅಚ್ಚರಿ ತರಿಸಿತ್ತು.
ಮೀಡಿಯಾದಲ್ಲಿ ಬ್ಯುಸಿ ಆಗಿರೋ ರಕ್ಷತ್ ಸಾಹಿತ್ಯ ಕ್ಷೇತ್ರದ ಬಗೆಗಿನ ತುಡಿತ ಕಡಿಮೆ ಮಾಡಿಕೊಂಡಿಲ್ಲ. ‘ಹಿಂದುತ್ವವನ್ನು ಹೊರತು ಪಡಿಸಿ ಶಿವಾಜಿ ಮತ್ತು ಸಾವರ್ಕರ್’ ಎಂಬ ಪುಸ್ತಕ ಬರೆಯುತ್ತಿದ್ದಾರೆ. ರಾಜ್ಯದ ರಾಜಕೀಯ ಸ್ಥಿತ್ಯಂತರಗಳ ಬಗ್ಗೆ ಪುಸ್ತಕ ಒಂದನ್ನು ಹೊರತರುವ ತಯಾರಿಯಲ್ಲಿದ್ದಾರೆ.
ರಕ್ಷತ್ ಶಾಲಾ-ಕಾಲೇಜು ದಿನಗಳಲ್ಲಿ ಎಂದೂ ವೇದಿಕೆ ಹತ್ತಿದವರಲ್ಲ. ಅವರಲ್ಲಿನ ದೈತ್ಯ ಓದುವ ಅದ್ಭುತ ನಿರೂಪಕನನ್ನಾಗಿ ರೂಪಿಸಿದೆ. ಧೈರ್ಯ ಮತ್ತು ಆತ್ಮವಿಶ್ವಾಸ ರಕ್ಷತ್ ಅವರ ಸಾಧನೆಯ ಪ್ರಮುಖ ಅಸ್ತ್ರಗಳು.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್
61) 12ಜನವರಿ 2018 :ನೀತಿ ಶ್ರೀನಿವಾಸ್
62) 13ಜನವರಿ 2018 :ರಕ್ಷಾ ವಿ
ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
63) 15ಜನವರಿ 2018 : ಸುಮ ಸಾಲಿಯಾನ್
64) 16ಜನವರಿ 2018 : ಶಕುಂತಲ
ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
65) 19 ಜನವರಿ 2018 : ವಸಂತ್ ಕುಮಾರ್ ಗಂಗೊಳ್ಳಿ
ಜನವರಿ 20 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
66) 21 ಜನವರಿ 2018 : ಮುದ್ದು ಮೀನ
67) 22 ಜನವರಿ 2018 : ಪ್ರಜ್ವಲ ಹೊರನಾಡು
ಜನವರಿ 23, 24 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
68) 25 ಜನವರಿ 2018 : ಮಂಜುನಾಥ್ ದಾವಣಗೆರೆ
ಜನವರಿ 26 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
69) 27 ಜನವರಿ 2018 : ರಕ್ಷತ್ ಶೆಟ್ಟಿ