ಬಿಜೆಪಿ ತಮಗೆ ಬೇಕಾದಂತೆ ವಾರ್ಡ್ ವಿಂಗಡಣೆ ಮಾಡಿಕೊಂಡಿದೆ

admin
1 Min Read

ಬೆಂಗಳೂರು : ಬಿಜೆಪಿ ತಮಗೆ ಬೇಕಾದಂತೆ ವಾರ್ಡ್ ವಿಂಗಡಣೆ ಮಾಡಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವಾರ್ಡ್ ವಿಂಗಡಣೆ ಮಾಡಿದ್ದರ ಕುರಿತು ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಬಂದಿದ್ದವು. ವಿಂಗಡಣೆ ಅವೈಜ್ಞಾನಿಕವಾಗಿ ಮಾಡಲಾಗಿದೆ. ಹಲವು ಕ್ಷೇತ್ರಗಳಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ. ನನ್ನ ಕ್ಷೇತ್ರದಲ್ಲೂ ವಾರ್ಡ್ ವಿಂಗಡಣೆಯಾಗಿದೆ. ಜಯನಗರದಲ್ಲೂ ವಾರ್ಡ್ ವಿಂಗಡಣೆಯಾಗಿದೆ. ಸರಿಯಾದ ಮಾದರಿಯಲ್ಲಿ ವಾರ್ಡ್ ವಿಂಗಡಿಸಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. 35 ಸಾವಿರಕ್ಕೆ ಅನುಗುಣವಾಗಿ ಮಾಡಿದ್ದಾರೆ, ಕೆಲವು ಕಡೆ 39 ಸಾವಿರ ಜನಸಂಖ್ಯೆಯಿದೆ. ಬಿಜೆಪಿ ಶಾಸಕರಿರುವ ಕಡೆ 20 ಕ್ಕೆ ಮಾಡಿಕೊಂಡಿದ್ದಾರೆ. ವಾರ್ಡ್ ಗಳಿಗೆ ಹೆಸರು ಬದಲಾವಣೆ ಮಾಡಿದ್ದಾರೆ. ಹೆಸರು ಬದಲಾಯಿಸುವುದು ಸರ್ಕಾರಕ್ಕಿದೆ. ಆದರೆ ವಾರ್ಡ್ ವಿಂಗಡಿಸಿದವರೆ ಹೆಸರು ಬದಲಾವಣೆ ಮಾಡಿದ್ದಾರೆ. ಬಿಜೆಪಿ ತಮಗೆ ಬೇಕಾದಂತೆ ಅವರು ವಿಂಗಡಿಸಿದ್ದಾರೆ ಎಂದು ರಾಮಲಿಂಗಾರೆಡ್ಡಿ ಆರೋಪ ಮಾಡಿದ್ದಾರೆ.

Share This Article
Leave a Comment