ಚಿರತೆಯೊಂದು ನಾಯಿಯನ್ನು ಹಿಡಿಯಲು ಹೋಗಿ ದನದ ಕೊಟ್ಟಿಗೆಯಲ್ಲಿ ಸಿಕ್ಕಿಬಿದ್ದಿರೋ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಗ್ರಾಮಕ್ಕೆ ಇಂದು ಬೆಳಗಿನ ಜಾವ ಕಾಡಿನಿಂದ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದಿದ್ದು, ನಾಯಿಯನ್ನು ತಿನ್ನಲು ಹೋಗಿದೆ.
ಆ ನಾಯಿ ತಪ್ಪಿಸಿಕೊಂಡು ಹೋಗಿ ಗ್ರಾಮದ ರವಿ ಎನ್ನುವವರ ಮನೆಯ ದನದ ಕೊಟ್ಟಿಗೆಗೆ ಹೋಗಿದೆ. ನಾಯಿಯನ್ನು ಹಿಂಬಾಲಿಸಿದ ಚಿರತೆ ಕೊಟ್ಟಿಗೆಗೆ ನುಗ್ಗಿದೆ.
ಚಿರತೆ ದನದ ಕೊಟ್ಟಿಗೆಗೆ ನುಗ್ಗಿದ್ದನ್ನು ಕಂಡ ರವಿ ಅದು ತಪ್ಪಿಸಿಕೊಂಡು ಹೋಗದಂತೆ ಬಾಗಿಲು ಹಾಕಿದ್ದಾರೆ.
ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು , ಸಿಬ್ಬದಿ ಅರವಳಿಕೆ ನೀಡಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.