ಭಾರತೀಯ ಮೂಲದ ಸಂಶೋಧಕನ ಹೊಸ ಆವಿಷ್ಕಾರಕ್ಕೆ ಎಂಐಟಿ ಸಂಸ್ಥೆ ಐದು ಲಕ್ಷ ಯುಎಸ್ ಡಾಲರ್ ಉಡುಗೊರೆ ನೀಡಿದ್ದು, ಇದು ಇಲ್ಲಿಯವರೆ ಎಮ್‍ಐಟಿ ಸಂಸ್ಥೆ ನೀಡಿದ ಅತೀ ದೊಡ್ಡ ಮೊತ್ತದ ಉಡುಗೊರೆ ಎಂಬ ಹೆಗ್ಗಳಿಕೆಗೆ ಭಾರತೀಯ ವಿಜ್ಞಾನಿ ಪಾತ್ರರಾಗಿದ್ದಾರೆ. ಈ ಹಿಂದೆ ಈ ಬಹುಮಾನವನ್ನು ಕಂಪ್ಯೂಟರ್ ಮೌಸ್‍ನ್ನು ಕಂಡು ಹಿಡಿದ ಡೌಗ್ಲಾಸ್ ಎಂಜೆಲ್‍ಬರ್ಟ್, ಹಾಗೂ ಎಲ್‍ಇಡಿ ಸಂಶೋಧಕರಾದ ಲೆರೋಯ್ ಹುಡ್ ಮತ್ತು ನಿಕ್ ಹೊಲೊನ್ಯಾಕ್ ಅವರಿಗೆ ಈ ಪ್ರಶಸ್ತಿ ದೊರಕಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರವನ್ನು ಮಾಡುವ ವಿಶ್ವದ ಪ್ರಖ್ಯಾತ ವಿಜ್ಞಾನಿಗಳಿಗೆ ಮಸ್ಸಾಚುಸೆಟ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಆಯೋಜಿಸುವ ಎಂಐಟಿ ವಾರ್ಷಿಕ ಲೆಮೆಲ್ಸನ್ ಕಾರ್ಯಕ್ರಮದಲ್ಲಿ ಈ ಬಹುಮಾನ ನೀಡಲಾಗುತ್ತದೆ. ಅದರಂತೆ ಈ ಬಾರಿ ಭಾರತೀಯ ಮೂಲದ ವಿಜ್ಞಾನಿ ರಮೇಶ್ ರಸ್ಕರ್ ಅವರು ಆಯ್ಕೆಯಾಗಿದ್ದಾರೆ.
ಎಮ್‍ಐಟಿ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತರುವ ರಮೇಶ್ ಅವರು ‘ಅಲ್ಟ್ರಾ ಸ್ಕ್ಯಾನಿಂಗ್ ಕ್ಯಾಮರಾ’ವನ್ನು ಪ್ರಚುರ ಪಡಿಸಿದ್ದು, ಈ ಕ್ಯಾಮರಾ ಸಹಾಯದಿಂದ ಕಡಿಮೆ ಬೆಲೆಯ ಐ ಕೇರ್ ಸೆಲ್ಯೂಷನ್ ಮತ್ತು ಈ ಕ್ಯಾಮರಾ ಸಹಾಯದಿಂದ ಒಂದು ಪುಸ್ತಕದ ಮೊದಲ ಕೆಲವು ಪುಸ್ತಕದ ಹಾಳೆಯ ಪದಗಳನ್ನು ಪುಸ್ತಕ ಮುಚ್ಚಿಕೊಂಡೇ ಓದುವ ವಿಭಿನ್ನ ತಂತ್ರಗಾರಿಕೆಯ ಕ್ಯಾಮರಾವನ್ನು ಇವರು ಸಂಶೋಧನೆ ಮಾಡಿದ್ದಾರೆ
ಮೂಲತಃ ನಾಸಿಕ್‍ನವರಾದ ರಮೇಶ್ ಅವರು ಇಂದಿಗೂ ಸಹ ತಮ್ಮ ಮೂಲ ಪ್ರದೇಶದಲ್ಲೆ ವಾಸ ಮಾಡುತ್ತಿದ್ದಾರೆ. ಕೆಲವು ಬಾರಿ ಮಾತ್ರ ಅಮೇರಿಕಾ ಪ್ರಯಾಣ ಬೆಳೆಸುತ್ತಾರೆ. ತಮ್ಮ ರಾಜ್ಯದಲ್ಲಿ 2015ರ ಕುಂಭಮೇಳ ಸಂದರ್ಭದಲ್ಲಿ ಇವರು ಹಾಗೂ ಕೆಲವು ವ್ಯಕ್ತಿಗಳ ಸಹಯೋಗದೊಂದಿಗೆ ನಾಸಿಕ್‍ನಲ್ಲಿ ಕೊಂಭಾಥೋನ್ಸ್ ಎಂಬ ಸಂಶೋಧನಾ ಶಿಬಿರವನ್ನು ಆಯೋಜಿಸಿದ್ದರು. ಈ ಶಿಭಿರದ ಮುಖ್ಯ ಗುರಿ ಭಾರತದ ಸ್ಮಾರ್ಟ್ ಸಿಟಿ ಬೆಳವಣಿಗೆಗೆ ಯಾವ ಯಾವ ರೀತಿಯ ಆಲೋಚನೆಯನ್ನು ನೀಡಬಹುದು ಹಾಗೂ ಕುಂಭಮೇಳ ಸಂದರ್ಭದಲ್ಲಿ ಉಂಟಾಗುವ ನೈರ್ಮಲ್ಯ ತಡೆಗಟ್ಟಲು ಉಪಾಯಗಳೇನು, ಅಥಿತಿಗಳಿಗೆ ವಸತಿ ಸೌಲಭ್ಯ, ಹಾಗೂ ಸಾರಿಗೆ ವ್ಯವಸ್ಥೆ ಹೇಗೆ ಒದಗಿಸಿಕೊಡಬೇಕೆಂದು ತಿಳಿಸಿಕೊಟ್ಟಿದ್ದರು.
ಇನ್ನು ನಾಸಿಕ್‍ನಲ್ಲಿ ಹೊಸ ಹೊಸ ವಿದ್ಯಾರ್ಥಿಗಳನ್ನು ಹುಟ್ಟು ಹಾಕಿದ್ದ ರಮೇಶ್ ಅವರಿಗಾಗಿಯೇ ಪ್ರತ್ಯೇಕ ಪ್ರಯೋಗ ಶಾಲೆಗಳನ್ನು ತೆರೆದಿದ್ದಾರೆ. ಅಷ್ಟೇ ಅಲ್ಲ ತರುಣ ಸಂಶೋದಕರ ಹೊಸ ಹೊಸ ಆವಿಷ್ಕಾರಕ್ಕಾಗಿ ಹಾಗೂ ವಿದೇಶಕ್ಕೆ ಪ್ರಯಾಣ ಬೆಳೆಸುವ ಯಂಗ್ ಸೈಂಟಿಸ್ಟ್‍ಗಳಿಗೆ ಸಹಾಯಧನ ನೀಡುತ್ತಿದ್ದಾರೆ.
- ಪ್ರಮೋದ್ ಲಕ್ಕವಳ್ಳಿ
POPULAR STORIES :
ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.