ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ವಿರುದ್ಧ ರಾಷ್ಟ್ರದ್ರೋಹದ ಕೇಸ್ ದಾಖಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಮೇಣದ ಪ್ರತಿಮೆ ಮೇಲೆ ‘ ಚೋರ್’ ಎಂದು ಬರೆಯುತ್ತಿರುವಂತೆ ತೋರಿಸಲಾದ ಚಿತ್ರವನ್ನು ರಮ್ಯಾ ಟ್ವೀಟ್ ಮಾಡಿದ್ದರು. ಇದೇ ಕಾರಣಕ್ಕೆ ವಕೀಲ ಸೈಯ್ಯದ್ ರಿಜ್ವಾನ್ ರಮ್ಯಾ ವಿರುದ್ಧ ಕೇಸ್ ದಾಖಲಿಸಿದ್ದಾರೆ
.
ತಿರುಚಲಾದ ಮೋದಿ ಫೋಟೋವನ್ನು ಅಪ್ ಲೋಡದ ಮಾಡುವ ಮೂಲದ ರಮ್ಯಾ, ಪ್ರಧಾನಿಯ ಘನತೆಗೆ ಚ್ಯುತಿ ತಂದಿದ್ದಾರೆ. ಪ್ರಜಾಪ್ರಭುತ್ವ ಭವ್ಯ ವ್ಯವಸ್ಥೆಯಲ್ಲಿ ಆಯ್ಕೆಯಾದ ಪ್ರಧಾನಿಯನ್ನು ಅಪಮಾನಿಸಲಾಗಿದೆ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ದಕ್ಕೆಯಾಗಿದೆ ಎಂದು ರಿಜ್ವಾನ್ ದೂರಿನಲ್ಲಿ ತಿಳಿಸಿದ್ದಾರೆ.