ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಗೆ ಸಿನಿಮಾ ನಟಿ ಆಗುವ ಆಸೆಯೂ ಇರಲಿಲ್ಲವಂತೆ, ರಾಜಕೀಯಕ್ಕೆ ಬರುವುದು ಕೂಡ ಇಷ್ಟ ಇರಲಿಲ್ಲವಂತೆ! ಹೀಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾನು ನಟಿ ಆಗಲು ಬಯಸಿರಲಿಲ್ಲ. ಆದರೆ ನಟಿಯಾದೆ. ರಾಜಕೀಯಕ್ಕೆ ಬರಲು ಕೂಡ ಇಚ್ಚಿಸಿರಲಿಲ್ಲ. ರಾಜಕೀಯಕ್ಕೆ ಬಂದೆ. ಲೈಫ್ ಹೇಗೆ ಕರ್ಕೊಂಡು ಹೋಗ್ತಿದೆಯೋ ಅದನ್ನೇ ನಾನು ಸ್ವೀಕರಿಸ್ತೀನಿ ಎಂದು ರಮ್ಯಾ ಹೇಳಿದ್ದಾರೆ.