ಮಾಜಿ ಸಂಸದೆ, ನಟಿ ರಮ್ಯಾ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ…! ಮಂಡ್ಯದ ಹುಣಸೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ರಮ್ಯಾ ಮಂಡ್ಯದಲ್ಲಿ ನೂತನ ಮನೆಯೊಂದನ್ನು ಖರೀದಿಸಿದ್ದಾರೆ.
ಮಂಡ್ಯದಲ್ಲಿ 5 ಕೋಟಿ 40 ಲಕ್ಷ ರೂ ನೀಡಿ ಕಾಂಗ್ರೆಸ್ ಮುಖಂಡರೊಬ್ಬರಿಂದ ರಮ್ಯಾ ಮನೆ ಖರೀದಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಮನೆ ಮಾಡಿದ್ದು, ತಾವು ಕಣಕ್ಕಿಳಿಯಲಿಚ್ಚಿಸಿರೋ ಹುಣಸೂರು ಕ್ಷೇತ್ರದಲ್ಲಿ ಕ್ರೀಯಾಶೀಲವಾಗಿ ಗುರುತಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.