ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಡಿಸಿ, ಪಾರ್ಟು ಗಿಟ್ಟಿಸಿ‌…!

Date:

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವೀಟರ್ ನಲ್ಲಿ ಟೀಕಿಸಿರುವ ನಟಿ, ಕಾಂಗ್ರೆಸ್ ನಾಯಕಿ ರಮ್ಯ ಅವರನ್ನು ನಟ, ರಾಜಕಾರಣಿ ಜಗ್ಗೇಶ್ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪ‌ ಗಣೇಶ್ ಟ್ವೀಟರ್ ನಲ್ಲಿ ಕಟುವಾಗಿ ಟೀಕಿಸಿದ್ದಾರೆ.


ಜಗ್ಗೇಶ್ ಅವರು ಒಂದು ಟ್ವೀಟ್ ನಲ್ಲಿ ‘ ಸ್ಟಾರ್ ಹೋಟೆಲ್ ನಲ್ಲಿ ಕೂತು ಅಪ್ಪ‌‌ನ ದುಡ್ಡಲ್ಲಿ ಪಾರ್ಟಿಕೊಟ್ಟು ಪಾರ್ಟು ಗಿಟ್ಟಿಸಿ! ಪ್ರತಿಚಿತ್ರದ ಕ್ಯಾಚ್ಗೆ ಅದೇ ಸ್ಟಾರ್ ಹೋಟಲ್ ಪಾರ್ಟಿ! ದೊಡ್ಡವರ ನೆರಳಿನಲ್ಲಿ ರಾಜಕೀಯ ಕ್ಯಾಚ್! ಆಮೇಲೆ ಮೆಟ್ಲೇರೋಕೆ ಹೆಡ್ಡಾಫೀಸ್ ಕ್ಯಾಚ್ ಹಾಕ್ದೋರ್ಗೆ ಮೋದಿ ಆದರೇನು, ಗಾಂಧಿ ಆದರೇನು ಯಾರಿಗೆ ಬೇಕಾದರೂ ಹಂಗಿಸ್ತಾರೆ…! ಕಾರಣ‌ ಶ್ರಮವಿಲ್ಲದೆ ಪಲ್ಲಂಗ ಎರ್ದೋರಲ್ಲವೆ! ಎಂದಿದ್ದಾರೆ.


ಇನ್ನೊಂದು ಟ್ವೀಟ್ ನಲ್ಲಿ ‘ದೊಡ್ಡವರ ಬಗ್ಗೆ ಮಾತಾಡ ಬೇಕಾದರೆ‌ ಮಾತಾಡುವ ಮಂದಿಗೆ ವಯಸ್ಸು, ಅನುಭವ‌‌, ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನು ತರ್ಕ ಎಂದು ಒಪ್ಪಿ ವಿಮರ್ಶೆ ಮಾಡಿ ನಿರ್ಣಯಿಸುತ್ತಾರೆ ಜನ. ವಿಶ್ವದ ಬಲಿಷ್ಠ ರಾಷ್ಟ್ರದ ನಾಯಕರೇ #modi ಯವರನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ‌ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ! ಎಂದು ಕಿಡಿಕಾರಿದ್ದಾರೆ‌.


ಶಿಲ್ಪಾ ಗಣೇಶ್ ಅವರು, ‘ ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತೆ’ ಎಂದು ಟ್ವೀಟ್ ಮಾಡುವ ಮೂಲಕ ರಮ್ಯಾ ಅವರು ಮೋದಿ ವಿರುದ್ಧ ಮಾಡಿರೋ‌ ಟೀಕೆ ಖಾರವಾದ ಪ್ರತಿ ಟೀಕೆ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...