ಪತ್ನಿ ತನ್ನಿಂದ ದೂರಾದ ಮೇಲೆ ತನ್ನ ಕಾಮತೃಷೆಗಾಗಿ ತಂದೆಯೊಬ್ಬ ತನ್ನ ಮಗಳನ್ನೇ ಬಳಸಿಕೊಂಡ ಪ್ರಕರಣ ಲೂಧಿಯಾನದಲ್ಲಿ ಬೆಳಕಿಗೆ ಬಂದಿದೆ.
32 ವರ್ಷದ ಈ ಆರೋಪಿ ಸ್ಕೂಟರಿನ ಬಿಡಿಭಾಗಗಳ ತಯಾರಿಕಾ ಕಾರ್ಖಾನೆಯಲ್ಲಿ ಕಳೆದ ಒಂದು ವರ್ಷಗಳಿಂದ ಕಾರ್ಮಿಕನಾಗಿದ್ದಾನೆ.
ಕಳೆದ 9ವರ್ಷದ ಹಿಂದೆ ಮದುವೆಯಾಗಿದ್ದ. ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಹೆಂಡ್ತಿಯನ್ನು ಬಿಟ್ಟು ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿ ಕಾನ್ಪುರದ ಗ್ರಾಮವೊಂದರಲ್ಲಿ ನೆಲೆಸಿದ್ದಾನೆ. ಈತ ಬಿಟ್ಟು ಹೋದ ಮೇಲೆ ಈತನ ಪತ್ನಿ ಎರಡನೇ ಮದುವೆಯಾಗಿ ಹೊಸಬದುಕು ಕಟ್ಟಿಕೊಂಡಿದ್ದರು.
ಇತ್ತೀಚೆಗೆ ಮಾರ್ಕೆಟ್ ನಲ್ಲಿ ಈತ ಮಾಜಿ ಪತ್ನಿಯನ್ನು ಭೇಟಿಯಾಗಿದ್ದಾನೆ. ಆಗ ಆಕೆ ತನ್ನ ಮಕ್ಕಳನ್ನು ನೋಡಲು ಬಯಸಿದ್ದಾರೆ. ಅದಕ್ಕಾತ ಒಪ್ಪಿಗೆ ನೀಡಿದ್ದ. ಮಕ್ಕಳನ್ನು ಭೇಟಿಯಾದಾಗ ಹಿರಿಮಗಳು ತನ್ನ ಮೇಲೆ ಅಪ್ಪ ಎಸಗಿದ ಅತ್ಯಾಚಾರದ ಬಗ್ಗೆ ಹೇಳಿ ಅಳಲು ತೋರಿಕೊಂಡಿದ್ದಾಳೆ. ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ.
ವಿಷಯ ತಿಳಿದ ತಾಯಿ ಮಗಳನ್ನು ಕರೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.