ವರುಣನ ರುದ್ರ ನರ್ತನಕ್ಕೆ ನಲುಗಿದ ಕೊಡಗಿಗೆ ರಾಜ್ಯದ ಎಲ್ಲೆಡೆಯಿಂದ ನೆರವಿನ ಮಹಾಪೂರ ಹರಿದು ಬಂದಿದೆ, ಬರುತ್ತಲೇ ಇದೆ.
ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸಹ ಸಹಾಯ ಹಸ್ತ ನೀಡಿದ್ದಾರೆ.
ಜಿಲ್ಲೆಯಲ್ಲಾದ ಅನಾಹುತ ನೋಡಿ ನಂಗೆ ಗಾಬರಿಯಾಗಿತ್ತು. ಘಟನೆ ನಡೆದಾಗ ನಾನು ಚಿತ್ರೀಕರಣದ ಸಲುವಾಗಿ ವಿದೇಶದಲ್ಲಿದ್ದೆ ಎಂದು ಕಿರಿಕ್ ಬೆಡಗಿ ತಿಳಿಸಿದ್ದಾರೆ.
ವಿರಾಜಪೇಟೆಗೆ ಸಂತ್ರಸ್ತರನ್ನು ಭೇಟಿ ಮಾಡಲು ಬಂದ ಅವರು ಸುದ್ದಿಗಾರೊಂದಿಗೆ ಮಾತಾಡಿದರು.
ಸಂತ್ರಸ್ತರನ್ನು ಭೇಟಿ ಮಾಡುವ ತುಡಿತ ನನ್ನಲ್ಲಿತ್ತು. ಆದಷ್ಟು ಬೇಗ ಬಂದೆ. ನನ್ನ ಕೈಲಾದ ಸಹಾಯ ಮಾಡ್ತೀನಿ ಎಂದರು.
31ಕುಟುಂಬಗಳಿಗೆ ತಲಾ 10ಸಾವಿರ ರೂ ಚೆಕ್ ನೀಡಿ ಮಾನವೀಯತೆ ಮೆರೆದರು.