ಅಕ್ಕಿ ಕದ್ದ ಇಲಿಗೆ ಈತ ಕೊಟ್ಟ ಶಿಕ್ಷೆ ನೋಡಿ..!

admin
By admin
2 Min Read

ಅಪರಾಧ ಮಾಡಿ ಸಿಕ್ಕಿ ಬಿದ್ದಾಗ ನ್ಯಾಯಾಲಯ ಆತನಿಗೆ ಶಿಕ್ಷೆ ನೀಡೋದು ವಾಡಿಕೆ. ಕೆಲವೊಂದು ಸಂದರ್ಭದಲ್ಲಿ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಂಡ ಪ್ರಸಂಗವೂ ಕೂಡ ಇದೆ. ಇನ್ನು ಪ್ರಾಣಿಗಳ ವಿಷಯಕ್ಕೆ ಬರೋದಾದ್ರೆ ಹೊಲದಲ್ಲಿದ್ದ ಪೈರನ್ನು ನಾಶ ಮಾಡಿದ ಕಾರಣಕ್ಕೆ ದನಕರುಗಳನ್ನು ಕಟ್ಟಿ ಹಾಕಿ ಅದಕ್ಕೆ ತಕ್ಕ ಪಾಠ ಕಲಿಸೋದನ್ನ ನಾವು ನೋಡಿಯೆ ಇರ್ತೀವಿ. ಆದ್ರೆ ಇಲ್ಲೋರ್ವ ಮಹಾನುಭಾವ ಇಲಿ ತನ್ನ ಅಕ್ಕಿಯನ್ನು ಕದ್ದು ತಿಂದಿದೆ ಎಂಬ ಕಾರಣಕ್ಕೆ ವಿಚಿತ್ರವಾದ ಶಿಕ್ಷೆ ನೀಡಿದ್ದಾನೆ ನೋಡಿ..! ಈ ಘಟನೆ ನಡೆದಿದ್ದು ಚೀನಾದ ಗುಡ್ಗಾಂಗ್ ಪ್ರಾಂತ್ಯದ ಯಾಯೂನ್‍ನಲ್ಲಿ. ತನ್ನ ಅಂಗಡಿಯಲ್ಲಿ ಪ್ರತಿ ನಿತ್ಯವೂ ಅಕ್ಕಿಯನ್ನು ಕದ್ದು ತಿನ್ನುತ್ತಿದ್ದ ಇಲಿಗೆ ಸರಿಯಾದ ಪಾಠ ಕಲಿಸ್ಬೇಕು ಅಂತ ನಿರ್ಧಾರ ಮಾಡಿದ ಆತ ಸಮಯಕ್ಕಾಗಿ ಹೊಂಚು ಹಾಕ್ತಾನೆ. ಹೀಗೆ ಒಂದು ದಿನ ಹೇಗೋ ಸಾಹಸ ಮಾಡಿ ಅಕ್ಕಿ ಕದಿಯುತ್ತಿದ್ದ ಇಲಿಯನ್ನು ಜೀವಂತವಾಗಿ ಹಿಡಿಯುತ್ತಾನೆ. ಆದ್ರೆ ಆತ ಮುಂದೇನ್ಮಾಡಿದ್ದಾನೆ ಅನ್ನೋದೆ ಭಾರಿ ಇಂಟ್ರೆಸ್ಟಿಂಗ್ ಆಗಿರೋದು. ಇಲೀನ ಜೀವಂತವಾಗಿ ಹಿಡಿದ ಆತ ಅದನ್ನು ಸಾಯಿಸದೇ ಒಂದು ಘೋರ ಶಿಕ್ಷೆ ನೀಡಿದ್ದಾನೆ ನೋಡಿ..! ಆ ಇಲಿಗೆ ಒಂದು ರಟ್ಟಿನ ಬಾಕ್ಸ್ ಗೆ ಕಟ್ಟಿಹಾಕಿದ ಮಾಲಿಕ ಇನ್ನೆಂದು ನಾನು ಇಂತಹ ತಪ್ಪು ಮಾಡೋದಿಲ್ಲ ಅಂತ ಬರೆದಿರೋ ಬೋರ್ಡ್‍ನ್ನು ಇಲಿಯ ಕುತ್ತಿಗೆಗೆ ನೇತು ಹಾಕಿದ್ದಾನೆ ನೋಡಿ..!

ಇನ್ನು ಈ ಫೋಟೋ ವಾಟ್ಸಾಪ್, ಫೇಸ್ಬುಕ್‍ಗಳಲ್ಲೆಲ್ಲಾ ಭಾರಿ ಸದ್ದು ಮಾಡ್ತಾ ಇದ್ದು, ಇದನ್ನು ನೋಡಿದ ಕೆಲವರು ನಕ್ಕು ಸುಮ್ಮನಾಗಿದ್ದರೆ, ಪ್ರಾಣಿ ಹಿಂಸೆ ಮಹಾ ಪಾಪ ಅಂತ ಪ್ರಾಣಿ ಪ್ರೀಯರು ಆಕ್ರೋಶಗೊಂಡಿದ್ದಾರಂತೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?

ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್

ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!

LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?

ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?

Share This Article