45 ದಿನದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ..!

0
70

ಸಾಮಾನ್ಯವಾಗಿ ಒಂದು ಮನೆ ನಿರ್ಮಿಸಲು ಐದಾರು ತಿಂಗಳು ಬೇಕೇ ಬೇಕು. ಅದರಲ್ಲೂ ಬಹುಮಹಡಿ ಕಟ್ಟಡ ನಿರ್ಮಿಸಬೇಕೆಂದರೆ ಮುಗಿದೇ ಹೋಯ್ತು. ಕನಿಷ್ಟ ಒಂದು ವರ್ಷವಾದರೂ ಬೇಕೇ ಬೇಕು. ಆದರೆ ಅದೇ ಬಹುಮಹಡಿ ಕಟ್ಟಡವನ್ನು ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ನಿರ್ಮಿಸಿದರೆ ಹೇಗೆ..? ಯೆಸ್ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿ ಜಯ ಸಾಧಿಸಿದ್ದಾರೆ ಮುಂಬೈನ ಇಂಜಿನಿಯರ್ ಗಳು.
ಕಳೆದ ವರ್ಷ ಚೀನಿ ಇಂಜಿನಿಯರ್ ಗಳು ಕೇವಲ 19 ದಿನಗಳಲ್ಲಿ 57 ಮಹಡಿಗಳ ಕಟ್ಟಡವನ್ನು ನಿರ್ಮಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು. ಅದಕ್ಕಾಗಿ ಬೃಹತ್ ಗಾತ್ರದ ಯಂತ್ರಗಳು, ಕ್ರೇನ್ ಗಳನ್ನು ಬಳಸಿಕೊಳ್ಳಲಾಗಿತ್ತು. ಆದರೆ ಮುಂಬೈನಲ್ಲಿ ನಿರ್ಮಿಸಿದ ಈ ಕಟ್ಟಡವನ್ನು 47 ದಿನಗಳಲ್ಲಿ ಮುಗಿಸಲಾಗಿದೆ. ಆದರೆ ಇದರ ತಂತ್ರಜ್ಞಾನ ಸಂಪೂರ್ಣವಾಗಿ ಭಾರತೀಯರದ್ದಾಗಿದ್ದು, ಉತ್ತಮ ಗುಣಮಟ್ಟದಿಂದಲೂ ಕೂಡಿದೆ.

ಹೇಗೆ ನಿರ್ಮಾಣವಾಯಿತು..?

ಈ ಬೃಹತ್ ಕಟ್ಟಡ ನಿರ್ಮಿಸುವ ಮುನ್ನ ಅವಳಿ ಗೋಪುರಗಳನ್ನು ಕಟ್ಟಲಾಗಿತ್ತು. ನಂತರ ಅದರ ಸುತ್ತಲೂ ಕಬ್ಬಿಣ ಕಂಬಗಳನ್ನು ನಿರ್ಮಿಸಲಾಯಿತು. ಇದರ ಮೇಲೆ ಇಟ್ಟಿಗೆಗಳನ್ನು ಸುಸಜ್ಜಿತವಾಗಿ ಜೋಡಿಸುತ್ತಾ ಕಟ್ಟಡ ನಿರ್ಮಿಸುತ್ತಾ ಹೋಗಲಾಗಿದೆ. ವಿಶೇಷವೆಂದರೆ ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ರಾತ್ರಿ ವೇಳೆಯಲ್ಲಿ ನಡೆದಿದ್ದು, ಹಗಲು ಸಮಯದಲ್ಲಿ ಇನ್ನಿತರೆ ಕಾರ್ಯಗಳನ್ನು ಮಾಡಲಾಗಿದೆ. ವಿಶೇಷವೆಂದರೆ ಇದು ಸಂಪೂರ್ಣ ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಲಾಗಿದೆ. ಇದರಿಂದ ಕಟ್ಟಡವು ಸುರಕ್ಷಿತ ಎನ್ನುತ್ತಾರೆ ಇಂಜಿನಿಯರ್ ಗಳು.
ಆದರೆ, ಈ ಕಟ್ಟಡ ನಿರ್ಮಾಣದ ಬಗ್ಗೆ ಅಪಸ್ವರಗಳೂ ಕೇಳಿ ಬರುತ್ತಿವೆ. ಅದರ ಬಗ್ಗೆಯೂ ಒಂದು ಕಂಪ್ಲೇಂಟ್ ದಾಖಲಾಗಿತ್ತು. ಅದೇನೆಂದರೆ ಕಟ್ಟಡ ನಿರ್ಮಾಣಕ್ಕೆ ಅಕ್ರಮ ಹಣ ಸರಬರಾಜಾಗುತ್ತಿದೆ. ಅಲ್ಲದೇ ಕಟ್ಟಡ ಕಾಮಗಾರಿಗೂ ಕಾನೂನು ಬಾಹಿರವಾಗಿದೆ. ಇದನ್ನು ಹತ್ತಿರದ ನಿವಾಸಿಗಳಿಗೆ ಮತ್ತು ವಠಾರಗಳ ಬಗ್ಗೆ ಕನಿಷ್ಟ ಕಾಳಜಿ ಇಲ್ಲದೆಯೂ ನಿರ್ಮಿಸಲಾಗಿದೆ ಎಂಬುದು ಆ ಕಂಪ್ಲೇಂಟ್ ನ ಸಾರವಾಗಿತ್ತು. ಅಲ್ಲದೇ ಈ ಮಾದರಿಯ ಕಟ್ಟಡಗಳನ್ನು ಮೂರು ಅಂತಸ್ತಿಗೆ ಸೀಮಿತಗೊಳಿಸಬೇಕಿತ್ತು ಎಂಬ ಕೂಗು ಕೂಡಾ ಕೇಳಿ ಬರುತ್ತಿದೆ. ಇನ್ನು ಕಟ್ಟಡವನ್ನು ವೇಗವಾಗಿ ಕಟ್ಟುವ ಭರದಲ್ಲಿ ಭದ್ರತಾ ವಿಷಯಗಳನ್ನು ಮರೆಯಲಾಗಿದೆ ಎನ್ನಲಾಗುತ್ತಿದೆ. ಆದ್ದರಿಂದ ಕಟ್ಟಡದ ಮಾಲೀಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಏನೇ ಆಗಲಿ, ಚೀನಾಕ್ಕೆ ಸೆಡ್ಡು ಹೊಡೆಯುವಂತೆ ಭಾರತದಲ್ಲಿ ಅತಿ ವೇಗವಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆದದ್ದು ಶ್ಲಾಘನಾರ್ಹ.

  • ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

.ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!

ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!

ಮೊದಲ ಮಗುವಿಗೂ ಎರಡನೇ ಮಗುವಿಗೂ ಅಂತರ ಕೇವಲ ನಾಲ್ಕೇ ತಿಂಗಳು..!

ಅಜ್ಜ, ಅಜ್ಜಿ, ಜೀವಂತ ಶವದಂತಿರುವ ಮಗ..! ಕಲ್ಲು ಹೃದಯವನ್ನೂ ಕರುಗಿಸುವ ರಿಯಲ್ ಸ್ಟೋರಿ..!

ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?

ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?

ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

LEAVE A REPLY

Please enter your comment!
Please enter your name here