ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಯುವಕರು ಘೇರಾವ್ ಹಾಕಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದಲ್ಲಿ ನಡೆದಿದೆ. ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆ MLAಗೆ ಯುವಕರು ತರಾಟೆ ತೆಗೆದುಕೊಂಡಿದ್ದು, ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಮತದಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ನನಗೆ ನಿಮ್ಮ ವೋಟ್ ಬೇಡ, ಯಾರಿಗಾದ್ರೂ ಹಾಕೊಳ್ಳಿ ಎಂದು ಸಮಸ್ಯೆ ಹೇಳಿಕೊಂಡ ಮತದಾರರಿಗೆ ರವೀಂದ್ರ ಶ್ರೀಕಂಠಯ್ಯ ಅವಾಜ್ ಹಾಕಿದ್ರು. ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲು ಶಾಸಕರು ಗ್ರಾಮಕ್ಕೆ ಬಂದಿದ್ದರು. 4 ವರ್ಷ 7 ತಿಂಗಳ ಬಳಿಕ ನಮ್ಮ ಊರಿಗೆ ಬಂದಿದ್ದೀರಿ, ನಮ್ಮೂರಲ್ಲಿ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್ ಹೋಗಿದೆ. ಈ ವಿದ್ಯುತ್ ಲೈನ್ನಿಂದ ಸಾವು-ನೋವು ಸಂಭವಿಸುತ್ತಿದೆ, ಅನಾಹುತ ಆಗುವುದನ್ನ ತಪ್ಪಿಸಿ ಎಂದು ಮತದಾರರ ಮನವಿ ಮಾಡಿದ ಮನು ಎಂಬುವರ ಮೇಲೆ ಶಾಸಕ ರವೀಂದ್ರ ಶ್ರೀಕಂಠಯ್ಯ ಎಗರಿ ಬಿದ್ದಿದ್ದಾರೆ. ಏನಪ್ಪ ನಿಂದು, ಸುಮ್ನೆ ನಡಿ.. ನಿನ್ನ ಗೂಂಡಾಗಿರಿ ನನ್ನತ್ರ ನಡೆಯಲ್ಲ. ನಿನ್ನ ವೋಟ್ ನನಗೆ ಬೇಡ, ಬೇರೆಯವರಿಗೆ ಹಾಕೋ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಯುವಕನಿಗೆ ಅವಾಜ್ ಹಾಕಿದ್ದಾರೆ. ಈ ವೇಳೆ ಗ್ರಾಮಸ್ಥರನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ.
ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಯುವಕರು ಘೇರಾವ್
Date: