RCB ಯಲ್ಲಿ ಮಹತ್ತರ ಬದಲಾವಣೆ…! ನೀವಿದನ್ನು ಇನ್ನೂ ಗಮನಿಸಿಲ್ವಾ?

Date:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್ ನ ಅತ್ಯಂತ ಬಲಾಢ್ಯ ತಂಡಗಳಲ್ಲೊಂದು.‌ ಟೀಮ್ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್‌ ಕೊಹ್ಲಿ ಆರ್ ಸಿ ಬಿಯನ್ನು ಮುನ್ನಡೆಸುತ್ತಿರುವುದೇ ದೊಡ್ಡ ಬಲ..! ಎ ಬಿ ಡಿವಿಲಿಯರ್ಸ್ ಸೇರಿದಂತೆ‌ ಸ್ಟಾರ್ ಆಟಗಾರರ ದಂಡೇ ನಮ್ಮ ಆರ್ ಸಿಬಿಯಲ್ಲಿದೆ. ಆದರೆ ಪ್ರತೀ ವರ್ಷ ಅಭಿಮಾನಿಗಳು ‘ಈ ಸಲ ಕಪ್ ನಮ್ದೆ’ ಎಂದು ಪ್ರೀತಿಯಿಂದ ಐಪಿಎಲ್ ಸೀಸನ್ ಅನ್ನು ಬರಮಾಡಿಕೊಳ್ಳುವುದು ಬಿಟ್ಟರೆ , ತಂಡದ ಪ್ರದರ್ಶನದಿಂದ ಬರೀ ನಿರಾಸೆಯೇ ಮೂಡಿದೆ.‌

ಕಳೆದ 12 ಸೀಸನ್ ಗಳಲ್ಲಿ ಒಮ್ಮೆಯೂ‌ ಚಾಂಪಿಯನ್ ಆಗದ ಆರ್ ಸಿ ಬಿ ಈ ಬಾರಿ ಚಾಂಪಿಯನ್ ಆಗಲೇ ಬೇಕೆಂದು ಪಣತೊಟ್ಟಿದೆ.
ಈ ನಡುವೆ ದಿಢೀರ್ ಎಂಬಂತೆ ಮಹತ್ತರ ಬದಲಾವಣೆಯನ್ನು ಮಾಡಿದೆ. ಇದ್ದಕ್ಕಿದ್ದಂತೆ ಸೋಶಿಯಲ್ ‌ಮೀಡಿಯಾದ ಹಳೆಯ ಪೋಸ್ಟ್ ಗಳನ್ನೆಲ್ಲಾ ಡಿಲೀಟ್ ಮಾಡಿದ್ದ ಆರ್ ಸಿಬಿ ಇಂದು ಹೊಸ ಲೋಗೋವನ್ನು ಪರಿಚಯಿಸಿದೆ. ಕಳೆದ ಬಾರಿ ಹೆಸರಿಂದ ತೆಗೆದಿದ್ದ ಬೆಂಗಳೂರು ಎಂಬ ಪದವನ್ನು ಮತ್ತೆ ಸೇರಿಸಲಾಗಿದೆ. ಹೀಗೆ ಹೊಸತನದೊಂದಿಗೆ ಈ ಸಲ ನಮ್ಮ ಆರ್ ಸಿ ಬಿ ಕಣಕ್ಕಿಳಿಯುತ್ತಿದೆ.
ಮಾರ್ಚ್ 29 ರಿಂದ ಐಪಿಎಲ್ ಹಬ್ಬ ಶುರುವಾಗಲಿದ್ದು, ಈ ಸಲ ಕಪ್ ನಮ್ಮದೇ ಆಗಲಿ ಎನ್ನುವುದು ಆರ್ ಸಿ ಬಿ ಅಭಿಮಾನಿಗಳ ಮಹದಾಸೆ ಹಾಗೂ ಹಾರೈಕೆ.

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...