ಅವಳು ಅನುಪ್ರಿಯ,ತನ್ನ ಗಂಡನ ಪಾಲಿಗೆ ಎರಡನೇ ಹೆಂಡತಿ..! ಮದುವೆಯಾಗಿ ನಾಲ್ಕೈದು ವರ್ಷ ಆಗಿತ್ತಷ್ಟೇ..! ಅಮ್ಮಾ..ಅಮ್ಮಾ ಎಂದು ಕ್ಷಣವೂ ಬಿಡದೆ ಕೂಗುತ್ತಾ ಸೆರಗು ಹಿಡಿದು ಓಡಾಡುವ ಎರಡೇ ಎರಡು ವರ್ಷದ ಮಗು!
ನೋಡಲು ಇನ್ನೂ 22ರ ಅವಿವಾಹಿತೆಯಂತೆ ಕಾಣುತ್ತಿದ್ದ ಸ್ಪುರದ್ರುಪಿ..! ಗಂಡನ ಜೊತೆ ಸಂಸಾರ ನಡೆಸುತ್ತಿದ್ದಾಗಲೇ ಅವಳ ಆ ಸುಖಿ ಸಂಸಾರಕ್ಕೆ ಬರ ಸಿಡಿಲು ಬಡಿದಂತೆ ಆಗಿತ್ತು..! ಅದಕ್ಕೆ ಕಾರಣ ಸ್ವಂತ ತಾಯಿ ಮಹಾದೇವಿ…!
ಹೌದು, ಮಗಳ ಬದುಕಿಗೆ ಆಕೆಯ ತಾಯಿಯೇ ಬೆಂಕಿಯಿಟ್ಟಳು.
ಪಕ್ಕದಲ್ಲಿ ಮುತ್ತಿಂಥಾ ಚೆಲುವಾದ ಹೆಂಡತಿ ಅನುಪ್ರಿಯಾ ಇದ್ದರೂ ಅವಳ ಗಂಡನೆನೆಸಿಕೊಂಡ ಸುರೇಶನಿಗೆ ತನ್ನ ಅತ್ತೆಯ ಮೇಲೇ ಒಲವು ಜಾಸ್ತಿ..! ಅಂದ್ರೆ ಹೆಂಡತಿಗಿಂತ ಆಕೆಯ ತಾಯಿಯೇ ಅವನಿಗೆ ..?
ಹೇಳಿ ಕೇಳಿ ಪೊಲೀಸ್ ..! ಅದರೆ ಅಪಪೋಲಿ ಆ ಸುರೇಶನ ಅತ್ತೆಪ್ರೇಮಪ್ರಸಂಗ ಹೆಂಡತಿ ಅನುಪ್ರಿಯಾಗೆ ಗೊತ್ತಾಗಿದ್ದು ತಡವಾಯ್ತು..! ತಿಳಿಯುತ್ತಿದ್ದಂತೆ ಗಂಡನಿಗೆ ಗುಡ್ಬೈ ಹೇಳಿ ತವರಿಗೆ ಮರಳಿದಳು!
ಮಗಳಿಗಿಂತಲೂ ಆಗಾಗ ಬಂದು ಹೋಗುತ್ತಿದ್ದ ಅಳಿಯ ಬರದೇ ಆಶ್ಚರ್ಯಗೊಂಡ ಮಹಾದೇವಿ..ಕೇಳಿಯೇ ಬಿಟ್ಟಳು..ಪ್ರಿಯಾ…ಅಳಿಯಂದ್ರು ಎಲ್ಲೇ?
ಅಳಿಯಂದ್ರು ಅಂತ ಕರೆದು ಸಂಬಂಧಗಳಿಗಿರೋ ಅರ್ಥವನ್ನು ಏಕೆ ಕೆಡಿಸ್ತೀಯಾ ಮಹಾದೇವಿ…ನಿನ್ನ ನಲ್ಲ ಬಂದಿಲ್ಲ ಅಂದುಬಿಡು ಅಂದಳು ಮಗಳು ಅನುಪ್ರಿಯಾ! ಅಮ್ಮಾ ಎಂದು ಕರೆಯಲು ನಾಚಿಗೆ ಆಗುತ್ತೆ, ನನಗೆ ಆ ನಿನ್ನ ಹೊಲಸು ಅಳಿಯನ, ಸಾರಿ ನಿನ್ನ ಪ್ರಿಯಕರ(ಅನುಪ್ರಿಯಾಳ ಗಂಡನ ಕುರಿತು ಅವಳೇ ಹೇಳುವ ಮಾತು)ನ ದುಡ್ಡು ಬೇಡ…ನಾನು ಅವನನ್ನು ಬಿಟ್ಟು ಬಂದಿದ್ದೇನೆ..! ಹಂಗಂತ ಇಲ್ಲೇ ಇರಲ್ಲ..! ನನಗೆ ನನ್ನ ಅಪ್ಪ, ನನಗಾಗಿ ಇಟ್ಟಿರುವ ದುಡ್ಡನ್ನು ಕೊಡು..ಹೇಗೋ ಹೊರಗೆ ಬದುಕ್ತೇನೆ…ಪುಟ್ಟ ಈ ಕಂದಮ್ಮನನ್ನು ಸಾಕುತ್ತೇನೆ ಎಂದಳು..!
ಮಗಳಿಗೆ ವಿಚಾರ ಗೊತ್ತಾಗಿದೆ ಎಂದು ತಿಳಿದ ಮಹಾದೇವಿ..ತನ್ನ ನೈಜರೂಪವನ್ನು ತೋರಿಸಿದ್ಲು..! ಅಪ್ಪಕೊಟ್ಟ ದುಡ್ಡೇ ಸತ್ತೋಗಿರೋ ಅವನ ಬಳಿಯೇ ಹೋಗು..ಕೊಡ್ತಾರೆ ಅಂದಳು..! ತಾಯಿ ಮಗಳಿಗೆ ಹೇಳೋ ಮಾತೆಂದ್ರೀ ಇದು..!
ಅನುಪ್ರಿಯಾ ಬಿಡಲಿಲ್ಲ ಗಲಾಟೆ ಮಾಡಿದ್ಲು..! ಪುಟ್ಟ ಮಗುವಿನ ಜೀವನಕ್ಕಾಗಿ. ದಿನಾ ಗಲಾಟೆ ಮಾಡುವುದೊಂದೇ ಬಂತು ಪ್ರಯೋಜನ ಆಗಲಿಲ್ಲ..!
ಬಾಲ್ಯದ ಗೆಳೆಯ, ಹತ್ತಿರದ ಸಂಬಂಧಿಯೂ ಆಗಿದ್ದ ಆನಂದ್ ಗೆ ಹೇಳಿದ್ಲು ಎಲ್ಲಾ ವಿಚಾರವನ್ನು ನಂಬಿ…! ರಾಜಕಾರಣಿಯೂ ಆಗಿದ್ದ ಆನಂದ್ ಸಹಾಯ ಮಾಡ್ತನೇ ಅಂತ..!
ಆದರೆ ಅವಳಿಗೆ ಅವನೂ ಬೆನ್ನಿಗೆ ಇರಿದ ..!
ಮಹಾದೇವಿ, ಸುರೇಶ್ ಗೆ ಎಲ್ಲಾ ವಿಚಾರವನ್ನೂ ತಿಳಿಸಿದ..! ಅನುಪ್ರಿಯಾ ಸಹಾಯ ಯಾಚಿಸಿ ಬಂದಿದ್ಲು , ಕೋರ್ಟ್ ಗೆ ಹೋಗೋ ಮೊದಲು ನಿಮ್ಮಿಂದ ಆದ್ರೂ ಸಹಾಯ ಆಗಲಿ ಅಂತ ಬಂದಿರೋದಾಗಿ ಹೇಳಿದ್ದಾಳೆ..! ನಾನು ಆಗಲ್ಲ ಎಂದು ಹೇಳಿ ಕಳುಹಿಸಿದ್ರೆ ಕೋರ್ಟ್ ಗೆ ಹೋಗ್ತಾ ಇದ್ಲು..! ಅದಕ್ಕಾಗಿ ನಾನೇ ಸರಿ ಮಾಡುವುದಾಗಿ ಹೇಳಿ ಕಳುಹಿಸಿದ್ದೇನೆ ಎಂದ..!
ಮಹಾದೇವಿ ತನ್ನ ಅಳಿಯನೊಂದಿಗೆ ಸಲಿಗೆ ಬೆಳೆಸಿಕೊಳ್ಳುವುದಕ್ಕೂ ಮೊದಲು ಆನಂದನನವಳು..!
ಇದು ಪಾಪ, ಅನುಪ್ರಿಯಾ ಗೆ ಗೊತ್ತಿರ್ಲಿಲ್ಲ..!
ಈ ಮೂವರೂ ಕ್ರಿಮಿಗಳು ಒಂದೆಡೆ ಸೇರಿ ಅನುಪ್ರಿಯಾಳನ್ನು ಮುಗಿಸುವ ಸ್ಕೆಚ್ ಹಾಕಿಬಿಟ್ರು..!
‘ಪೊಲೀ’ಸ್ ಸುರೇಶ ನಾನು ನೋಡಿಕೊಳ್ತೀನಿ..ನೀನು ಆ್ಯಕ್ಸಿಡೆಂಟ್ ನಡೆದ ರೀತಿಯಲ್ಲಿ ಕೊಂದುಬಿಡು ಎಂದು ಹೆಂಡತಿಯನ್ನೇ ಕೊಲ್ಲಲು ಸುಫಾರಿ ಕೊಟ್ಟ..! ಕೊಲೆ ಮಾಡ್ತಾ ಇರೋದು ಫಸ್ಟ್ ಟೈಮ್ ಆದ್ರೂ ಜೊತೆಗೆ ಪೊಲೀಸ್ ಬೆಂಬಲ ಇದೆಯಲ್ಲಾ ಎಂಬ ನಂಬಿಕೆಯಿಂದ ..ಒಂದುದಿನ ಅನುಪ್ರಿಯಾ ಮನೆಗೆ ಬಂದಾಗ ಊಟ ಹಾಕಿ ನಗು ನಗುತ್ತಾ ಮಾತನಾಡಿ , ರಾತ್ರಿ ಆಯ್ತು ಒಬ್ಳೇ ಮನೆಗೆ ಹೋಗ್ಬೇಡ ಎಂದು ತನ್ನ ಬೈಕ್ನಲ್ಲೇ ಬಿಡುವುದಾಗಿ ಹೇಳ್ತಾನೆ..! ಬೇಡ ಅಂದ್ರೂ ಕೇಳಲ್ಲ..! ಪಾಪ, ಆನಂದನ ಮನೆಯವರೂ ಹಾಗೇ ಹೇಳ್ತಾರೆ..ನೋಡು ಪ್ರಿಯಾ ಆನಂದ್ ಬಿಟ್ಟು ಬರ್ತಾನೆ..! ನೀನೊಬ್ಬಳೇ ಈ ಮಗು ಕರ್ಕೊಂಡು ಇಷ್ಟ್ ಹೊತ್ನಲ್ಲಿ ಹೋಗಬೇಡ..!
ಅವರ ಮಾತಿಗೆ ಪ್ರಿಯ ಹ್ಞೂಂ ಎಂದ್ಲು..!
ಎರಡು ವರ್ಷದ ಮಗನನ್ನು ಎತ್ತಿಕೊಂಡ್ಲು..ಆಗ…ಆನಂದ ಐದು ವರ್ಷದ ಮಗಳು ಆಂಟಿ ಬೆಳಗ್ಗೆ ಬೇಗ ಬನ್ನಿ ಪಾಪು ನಾ ಇಲ್ಲೇ ಬಿಟ್ಟೋಗಿ ಅನ್ತು..! ಹಠ ಮಾಡಿದ್ಲು.
ಅದೇನು ಅನ್ನಿಸ್ತೋ ಅನುಪ್ರಿಯಾಗೆ ಆ ಪುಟ್ಟ ಮಗುವನ್ನು ಮೊದಲ ಬಾರಿಗೆ ಬಿಟ್ಟು ಹೊರಟಳು..!
ದಾರಿ ಮಧ್ಯೆ ಸುರೇಶ ಬೈಕ್ ನಿಲ್ಲಿಸಿದ..! ಯಾಕೆ ಅಣ್ಣಾ ಎಂದಿದಷ್ಟೇ…ಮತ್ತೆ ಅವಳು ಮಾತಾಡಿಲ್ಲ…ಅಷ್ಟೊತ್ತಿಗೆ ಬೈಕ್ ನಲ್ಲಿದ್ದ ಮಚ್ಚನ್ನು ತೆಗೆದು ಹೊಡೆದುಬಿಟ್ಟಿದ್ದ..! ರಕ್ತದ ಮಡುವಿನಲ್ಲಿ ಅನುಪ್ರಿಯ ಸತ್ತುಬಿದ್ದಳು..! ಮಚ್ಚನ್ನು ಪಕ್ಕದಲ್ಲಿದ್ದ ಗಿಡಗಂಟಿಗಳ ಮಟ್ಟಲ್ಲಿ ಬಚ್ಚಿಟ್ಟು ತಡಮಾಡದೆ ಮನೆಯತ್ತ ಹೋದ ..!
ಮನೆಯವರು,ಇಷ್ಟುಬೇಗ ಬಿಟ್ಟು ಬಂದ್ಯಾ ಎಂದು ಕೇಳುವಷ್ಟರಲ್ಲಿ ಅನುಪ್ರಿಯಳ ಸ್ಕೂಟಿ ತೆಗೆದುಕೊಂಡು ಹೊರಟ..! ಅವನ ವರ್ತನೆ ಮನೆಯವರಿಗೆ ಅರ್ಥ ಆಗಲೇ ಇಲ್ಲ..! ಅನುಪ್ರಿಯಾಳ ಸ್ಕೂಟಿ ತೆಗೆದುಕೊಂಡು ಹೋದವನೇ ರಕ್ತದ ಮಡುವಿನಲ್ಲಿದ್ದ ಅವಳ ಪಕ್ಕದಲ್ಲಿ ಬೀಳಿಸಿ..ಆ ಗಾಡಿಯನ್ನು ಸ್ವಲ್ಪ ಪುಡಿ ಮಾಡಿದ..ನುಜ್ಜು ಮಾಡಿದ..!
ಅವನೇ ಇಲ್ಲೊಂದು ಅಪಘಾತ ಆಗಿದೆ ಎಂದು ಪೊಲೀಸರಿಗೆ, ಅಂಬುಲೆನ್ಸ್ ಗೂ ಫೋನ್ ಮಾಡ್ದ..! ಸತ್ತು ಬಿದ್ದಿದ್ದ ಅವಳನ್ನು ನೋಡಿದ ಕೂಡಲೇ ಆ ಅಂಬುಲೆನ್ಸ್ ಡ್ೈವರ್ ಹೇಳಿಯೇ ಬಿಟ್ಟ ಇದು ಆಕ್ಸಿಡೆಂಟ್ ಅಲ್ಲ..ಕೊಲೆ..!
ನಾನು ಇದನ್ನು ಮುಟ್ಟಲ್ಲ..ಎಂದು ವಾಪಸ್ಸು ಹೋದ..!
ಪೊಲೀಸರು ತನಿಖೆ ಆರಂಭಿಸಿದ್ರು..!
‘ಪೋಲೀ’ಸ್ ಸುರೇಶ, ಮಹಾದೇವಿ, ಆನಂದ್ ನನ್ನು ಬಂದಿಸಿದ್ರು.!
ಸುರೇಶ ಎರಡನೇ ಆರೋಪಿ ಎಂು ಮಾಡಿದ್ರು..! ಅನುಪ್ರಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲ್ತಾ ಇದ್ಲು..! ಹಿಂಸಿಸ್ತಾ ಇದ್ಲು..! ಗಂಡನಿಗೆ, ತಾಯಿಗೆ ಚಿತ್ರ ಹಿಂಸೆ ಕೊಡ್ತಾ ಇದ್ಲು ..! ಮಗುವನ್ನು ಉಪವಾಸ ಕೆಡವುತ್ತಿದ್ದಳು . .ಹೀಗೆ ಅವಳ ವರ್ತನೆಯಿಂದ ಬೇಸತ್ತು ಕೊಲೆಮಾಡಿರೋದಾಗಿ ಹೊಸ ಕಥೆಯೊಂದು ನಿರ್ಮಾಣ ಆಯ್ತು..! ಪಾಪಿಗಳ ಲೋಕದಲ್ಲಿ ಅವಳಿಗೆ ನ್ಯಾಯವೇ ಇಲ್ಲದಾಯ್ತು..! ಪ್ರಕರಣ ಮುಚ್ಚೇ ಹೋಯ್ತು..!

- ರಘು ಭಟ್
POPULAR STORIES :
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!