ಬಾಲ್ಯದಲ್ಲೇ ನನ್ನ ಮದುವೆಯಾಯಿತು, ಬೆಳೆಯುತ್ತಾ ಯಾಕೋ ನನ್ನ ಕುಟುಂಬಕ್ಕೆ ಮೋಸ ಮಾಡುತ್ತಾ ಇದೇನಾ ಅನ್ನೋ ಅಪರಾಧ ನನ್ನಲ್ಲಿ ಆವರಿಸತೊಡಗಿತು

Date:

ನಾನು ಬೆಳೆದದ್ದು ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ. ನಮ್ಮ ಕುಟುಂಬ ತುಂಬಾ ಆಚಾರ ವಿಚಾರಗಳನ್ನು ಬಹುವಾಗಿ ನಂಬ್ತಾ ಇರೋದ್ರಿಂದ ನನಗೆ ಜಗತ್ತಿನ ಅರಿವಾಗುವುದಕ್ಕೂ ಮೊದಲು ನನ್ನನ್ನು ಗೃಹಾಶ್ರಮಕ್ಕೆ ತಳ್ಳಿಬಿಟ್ಟರು. ಎಲ್ಲರಿಗೂ ಅವರ ಜೀವನದ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವ ಅಧಿಕಾರ ಇದ್ದರೆ, ನಾನು ಆ ಅಧಿಕಾರದಿಂದ ವಂಚಿತನಾಗಿದ್ದೆ. ಸಂಸಾರ ಅನ್ನೋದು ಏನು ಅಂತ ತಿಳಿಯದೇ ನನ್ನ ಬಾಲ್ಯದ ಜೀವನ ಸಾಮಾನ್ಯ ಮಕ್ಕಳಂತೆ ಕಳೆದೆ, ಅಲ್ಲಿ ನನ್ನವಳು ಯಾರು ಎಂಬ ಅರಿವಿಲ್ಲದೆಯೇ…
ಬಾಲ್ಯದಿಂದ ಯವ್ವನಾವಸ್ಥಗೆ ಬರುವಾಗ ಎಲ್ಲಾ ಹುಡುಗರಿಗೂ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಸಹಜ.. ಅದು ಪ್ರಕೃತಿಯ ನಿಯಮವೂ ಹೌದು. ಆದರೆ ಅದು ನನ್ನ ಪಾಲಿಗೆ ಇರಲಿಲ್ಲ. ಇದನ್ನು ನನ್ನ ಕುಟುಂಬಸ್ಥರಿಗಾಗಲೀ ಅಥವಾ ನಮ್ಮ ಸ್ನೇಹಿತರಿಗಾಗಲೀ ಎಂದೂ ಹೇಳಿಕೊಳ್ಳದೇ ಮಾನಸಿಕವಾಗಿ ಖನ್ನತೆಗೆ ಒಳಗಾದೆ. ಪ್ರತಿದಿನ ಪ್ರತಿ ಗಳಿಗೆ ನನ್ನಲ್ಲಿ ಕಾಡ್ತಾ ಇದ್ದದ್ದು ಒಂದೇ.. ನನ್ನ ದೇಹ ಯಾಕೆ ಸಾಮಾನ್ಯರಂತೆ ಬದಲಾವಣೆ ಹೊಂದಿಲ್ಲ ಎಂದು. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನನಗೆ ಜಾಸ್ತಿ ಸಮಯವೇನು ಹಿಡಿಯಲಿಲ್ಲ. ಕೆಲವು ದಿನಗಳ ಬಳಿಕ ನನ್ನ ಈ ನೂನ್ಯತೆಗೆ ಕಾರಣ ತಿಳಿಯಲು ಒಬ್ಬ ವೈದ್ಯರ ಬಳಿ ಹೋದೆ, ಅಲ್ಲಿ ತನ್ನ ಸಮಸ್ಯೆಯ ಕುರಿತು ಸವಿಸ್ತಾರವಾಗಿ ಹೇಳಿಕೊಂಡೆ ಆದರೆ ಅಂದು ನನಗೆ ಆ ವೈದ್ಯರು ಒಂದು ಅಘಾತಕಾರಿ ಸುದ್ದಿಯನ್ನು ಬಿಚ್ಚಿಟ್ಟರು. ನೀವು ಥರ್ಡ್ ಜಂಡರ್ ಅಂದರೆ ತೃತೀಯ ಲಿಂಗಿ. ನಿಮ್ಮಲ್ಲಿ ಯಾವುದೇ ತರಹದ ರೀಪ್ರೊಡಕ್ಟೀವ್ ಸಿಸ್ಟಮ್ ಬೆಳವಣಿಗೆಯಾಗುವುದಿಲ್ಲ ಎಂದರು. ಆ ಮಾತು ಕೇಳಿದ ಕೂಡಲೇ ಒಮ್ಮೆಲೆ ಕುಸಿದು ಬಿದ್ದೆ.. ಅಯ್ಯೋ ಈ ವಿಷಯ ಯಾರ ಬಳಿ ಹೇಳಿಕೊಳ್ಳಲಿ.. ಮನೆಯವರಿಗೆ ಏನೆಂದು ಹೇಳಲಿ.. ಈ ಸಮಾಜದಲ್ಲಿ ನಾನು ಯಾರೆಂದು ಗುರುತಿಸಿಕೊಳ್ಳಲೀ ಎಂಬ ಯಕ್ಷ ಪ್ರಶ್ನೆ ನನ್ನಲ್ಲಿ ಕಾಡತೊಡಗಿತು. ಸುಮಾರು ದಿನಗಳ ಕಾಲ ಈ ವಿಷಯ ನನ್ನ ಸಂಗಾತಿಯೊಂದಿಗೆಯಾಗಲೀ ಅಥವಾ ಕುಟುಂಬಸ್ಥರಲ್ಲಾಗಲೀ ಹೇಳಿಕೊಂಡಿತರಲಿಲ್ಲ. ನನಗಾಗ 22 ವರ್ಷ. ಇನ್ನೆಷ್ಟು ದಿನ ನನ್ನ ಜೊತೆಗಾರ್ತಿಗೆ ಮೋಸ ಮಾಡಲೀ.. ಆಕೆಯೊಂದಿಗೆ ಲೈಂಗಿಕ ಸಂಬಂಧವಾದರೂ ಹೇಗೇ.. ನಾನೊಬ್ಬ ತೃತೀಯ ಲಿಂಗಿ ಎಂಬ ಕಪ್ಪು ಚುಕ್ಕೆ ನನ್ನಲ್ಲಿ.. ನನ್ನಿಂದ ಸಾಧ್ಯವಾಗ್ತಾನೇ ಇರ್ಲಿಲ್ಲ.. ಎಷ್ಟು ದಿನಾ ಅಂತ ಆಕೆಗೆ ಮೋಸ ಮಾಡಲಿ ಅದೆಷ್ಟು ದಿನಾ ಅಂತ ನಮ್ಮ ಕುಟುಂಬಕ್ಕೆ ತಿಳಿಸದೇ ಮರೆಮಾಚಲಿ.. ಇಲ್ಲ ಈಗಲೇ ನನ್ನ ವೈಫಲ್ಯದ ಬಗ್ಗೆ ಹೇಳಿಕೊತ್ತೇನೆ ಎಂದು ನಿರ್ಧರಿಸಿ ಕುಟುಂಬಸ್ಥರಲ್ಲಿ ನನ್ನ ಸ್ಥಿತಿಯ ಬಗ್ಗೆ ವಿಸ್ತರಿಸಿದೆ. ಅಲ್ಲದೇ ನನ್ನನ್ನೇ ನಂಬಿಕೊಂಡು ಬಂದಿದ್ದ ನನ್ನವಳಿಗೂ ಇದರ ಅರ್ಥ ಮಾಡಿಸಿ ನನ್ನ ಬಗ್ಗೆ ಚಿಂತಿಸುವ ಬದಲು ಹೊಸ ಜೀವನವನ್ನು ಆರಂಭಿಸು. ನಿನ್ನ ಗಂಡನಾಗಿ ಇರಲು ಯಾವ ಅರ್ಹತೆಯೂ ನನ್ನಲ್ಲಿಲ್ಲ ಕ್ಷಮಿಸು, ಎಂದೇಳಿ ಅಲ್ಲಿಂದ ಹೊರಟೆ.. ನನ್ನನ್ನು ನೋಡಿ ನನ್ನ ಕುಟುಂಬವೇ ತಾತ್ಸಾರದಿಂದ ನೋಡತೊಡಗಿದ ಮೇಲೆ ಅಲ್ಲಿನ ಸಮಾಜ ನನ್ನನ್ನು ಕಾಣುವ ಬಗೆ ಹೇಗಿರುತ್ತೇ ಎಂದೆಲ್ಲಾ ಆಲೋಚನೆಗಳು ಮೂಡಿ ಅಲ್ಲಿಂದ ಬಹು ದೂರ ಪ್ರಯಾಣ ಬೆಳೆಸಿದೆ.. ತಾನು ಎಲ್ಲಿ ಹೊರಟಿದ್ದೇನೆ..ನನ್ನ ಒಪ್ಪತಿನ ಊಟಕ್ಕೆ ಯಾರೊಂದಿಗೆ ಕೈ ಚಾಚಲಿ…? ಜೊತೆಯಲ್ಲಿದ್ದ ಕುಟುಂಬವೇ ನನ್ನನ್ನು ನಿರ್ಲಕ್ಷಿಸಿದಾಗ ಈ ಸಮಾಜ ನನ್ನನ್ನು ಒಪ್ಪಿಕೊಳ್ಳತ್ತದೆಯೇ..? ನನ್ನ ಮುಂದಿನ ಜೀವನ ಹೇಗೆ ಎಂದೆಲ್ಲಾ ಪ್ರಶ್ನೆಗಳನಾಕಿಕೊಳ್ಳುತ್ತಾ ಬಹುದೂರ ಸಾಗಿದೆ. ಕೊನೆಗೆ ಒಂದು ಪ್ರದೇಶದಲ್ಲಿ ನೆಲೆನಿಂತೆ. ಅದು ನನ್ನಂತೆಯೇ ನೂರಾರು ಜನರಿರುವ ಕುಟುಂಬದಲ್ಲಿ ನಾನೂ ಒಬ್ಬ ಸದಸ್ಯನಾಗಿ ಹೋದೆ. ಎಲ್ಲಾ ತೃತೀಯ ಲಿಂಗಿಗಳಂತೆ ನಾನೂ ಸಹ ಮದುವೆ, ಮುಂಜಿಗಳಲ್ಲಿ ಭಾಗವಹಿಸಿ ಹಾಡು ಹೇಳುವ ಮೂಲಕ, ನೃತ್ಯಗಳ ಮೂಲಕ ಎಲ್ಲರನ್ನು ರಂಜಿಸುತ್ತಾ ಅಲ್ಲಿನ ಹೊಸ ವಧುವರರನ್ನು ಆಶಿರ್ವಾಧಿಸುವದೇ ನನ್ನ ಕೆಲಸವಾಗಿತ್ತು. ಅದೇ ಕಸುಬು ನನಗೆ ನೆಮ್ಮದಿಯನ್ನು ಸಹ ನೀಡಿತ್ತು. ಯಾವ ಸಮಾಜ ನನ್ನುನ್ನು ತಿರಸ್ಕಾರದಿಂದ ಕಂಡಿತ್ತೋ ಅದೇ ಸಮಾಜ ಇಂದು ನನ್ನನ್ನು ಹುಡುಕಿಕೊಂಡು ಬರ್ತಾ ಇದೆ.. ಹೀಗೇ ನನ್ನ ಜೀವನ ನನ್ನಂತೆ ಇರುವ ತೃತೀಯ ಲಿಂಗಿಗಳೊಂದಿಗೆ ಸಾಗ್ತಾ ಇರುವಾಗ ಅದೊಂದು ದಿನ ಮುಂಜಾನೆ ನನ್ನ ಹೆಂಡತಿ ಒಂದು ಪುಟ್ಟ ಮಗುವಿನೊಂದಿಗೆ ಮನೆಯ ಬಾಗಿಲಿನ ಮುಂದೆ ನಿಂತಿದ್ದಳು.. ನಾನು ಬಿಟ್ಟು ಬಂದ ನಂತರ ಮತ್ತೊಂದು ಮದುವೆಯಾದ ಈಕೆ ಸಂಸಾರದಲ್ಲಿ ಸುಖವನ್ನೇ ಕಾಣಲಿಲ್ಲ. ಎರಡನೇ ಗಂಡ ಪ್ರತಿದಿನ ಕುಡಿದುಕೊಂಡು ಆಕೆಗೆ ಚಿತ್ರ ಹಿಂಸೆ ನೀಡುತ್ತಿದ್ದ. ಆತ ಕೇವಲ ಕುಡಿತಕ್ಕೆ ದಾಸಿಯಾಗಿರದೇ ಹೆಣ್ಣುಮಕ್ಕಳ ಚಟವೂ ಆತನಿಗಿತ್ತು. ದುಡಿದದ್ದನ್ನೆಲ್ಲಾ ಹೆಣ್ಣಿಗೆ, ಹೆಂಡಕ್ಕೆ ಖರ್ಚು ಮಾಡುತ್ತಿದ್ದ ಆತ ಎಂದು ಕೂಡ ಹೆಂಡತಿ ಮಕ್ಕಳಿಗೆಂದು ದುಡಿದವನಲ್ಲ. ಆಕೆಯ ಸ್ಥಿತಿಯನ್ನು ಕಂಡು ಇನ್ನೆಂದೂ ನೀನು ಆತನ ಬಳಿ ಹೋಗಬೇಡ. ನಿನ್ನ ಗಂಡನಿಗೆ ಡೈವೋರ್ಸ್ ನೀಡಿ ಬೇರೆ ಇರು, ನಾನು ನಿನ್ನನ್ನು ನೋಡಿಕೊಳ್ಳುತ್ತೆನೆ ಎಂದು ಸಮಾಧಾನ ಹೇಳಿದೆ.
ಆರು ತಿಂಗಳ ನಂತರ ಕೋರ್ಟ್ ಅವರಿಬ್ಬರ ವಿಚ್ಛೇದನಕ್ಕೆ ಅನುಮತಿ ಸೂಚಿಸಿತು. ನಾನೊಂದು ಸಣ್ಣ ಫ್ಲಾಟ್ ಖರೀದಿಸಿಕೊಟ್ಟೆ..  ತಿಂಗಳಿಗೆ 20 ಸಾವಿರ ಹಣ ಖರ್ಚಿಗೂ ಕೊಟ್ಟೆ, ಆತನನ್ನು ನನ್ನ ಒಡ ಹುಟ್ಟಿದ ಮಗನಂತೆ ಭಾವಿಸಿ ಒಂದು ಒಳ್ಳೆಯ ಕಾಲೇಜಿನಲ್ಲಿ ಶಿಕ್ಷಣ ಕಲ್ಪಿಸಿದೆ. ಎಂಬಿಎ ಪದವೀಧರನಾದ ನನ್ನ ಮಗನಿಗೆ ಕೆಲವು ದಿನಗಳ ಹಿಂದೆ ಎಲ್ಲಾ ಕುಟುಂಬಗಳಂತೆ ಬಹಳ ಅದ್ಧೂರಿಯಾಗಿ ಮದುವೆ ಮಾಡಿಸಿದ್ದೇನೆ. ಈಗ ತಾಯಿ ಮಗ, ಸೊಸೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ.. ನನಗಂತೂ ತುಂಬಾ ಸಂತೋಷವಾಗ್ತಾ ಇದೆ.. ಒಬ್ಬ ಸಾಮಾನ್ಯ ಮನುಷ್ಯನಂತೆ ನನ್ನ ಕರ್ತವ್ಯವನ್ನು ಪೂರೈಸಿದ್ದೇನೆ ಎಂಬ ಹೆಮ್ಮೆ ನನಗಿದೆ…
ನಾನು ಒಬ್ಬ ತಂದೆಗೆ ಒಳ್ಳೆಯ ಮಗನಾಗಿ ಇರೋಕಾಗಿಲ್ಲಾ, ಒಬ್ಬ ಪತ್ನಿಗೆ ಒಂದೊಳ್ಳೆ ಪತಿಯಾಗಿರಲು ಸಾಧ್ಯವಾಗಿಲ್ಲ ಆದರೆ ಒಬ್ಬ ಮಗನಿಗೆ ಒಂದೊಳ್ಳೆ ತಂದೆಯಾಗಿರುವ ಭಾಗ್ಯ ಆ ದೇವರು ನನಗೆ ಕರುಣಿಸಿದ್ದಾನೆ.. ದೇವರು ಒಬ್ಬ ಮಗನನ್ನು ಪಡೆಯುವ ಭಾಗ್ಯ ಕಲ್ಪಿಸದಿದ್ದರೂ ನನ್ನ ಜೀವನದಲ್ಲಿ ಪುನಃ ನನ್ನ ಹೆಂಡತಿ ಮತ್ತು ಒಬ್ಬ ಮಗನನ್ನು ವಾಪಾಸ್ಸು ಕೊಟ್ಟಿದ್ದಾನೆ. ಅದಷ್ಟು ಸಾಕು ನನ್ನ ಜೀವನಕ್ಕೆ….

  • ಪ್ರಮೋದ್ ಲಕ್ಕವಳ್ಳಿ

POPULAR  STORIES :

ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!

ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ

ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.

ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !

ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!

ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!

ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...