ಭಾರತದ ರಸ್ತೆಯಲ್ಲಿ ಸಂಚರಿಸೋ ಯಾವುದೇ ಮೋಟಾರು ವಾಹನಗಳ ಮುಂದಿನ ಜಾಗದಲ್ಲಿ ಹಾಗೂ ಹಿಂದಿನ ಜಾಗದಲ್ಲಿ ಕಡ್ಡಾಯವಾಗಿ 2 ನಂಬರ್ ಪ್ಲೇಟ್ ಗಳನ್ನು ಅಳವಡಿಸಲೇಬೇಕು. ವೆಹಿಕಲ್ ರಿಜಿಸ್ಟ್ರೇಷನ್ ಪ್ಲೇಟ್ ಎಂಬುದಾಗಿಯೂ ನಂಬರ್ ಪ್ಲೇಟನ್ನು ಕರೆಯಲಾಗುತ್ತದೆ,ಹಾಗೂ ಇವುಗಳನ್ನು ನಮಗೆ ಪೂರೈಸುವ ಅಧಿಕಾರವು ಆಯಾ ಜಿಲ್ಲಾಡಳಿತಕ್ಕೆ ಒಳಪಟ್ಟಿರೋ ಆರ್.ಟಿ.ಓ ಬಳಿ ಇರುವುದು.ಸಾಮಾನ್ಯವಾಗಿ ಇದು ನಮಗೆಲ್ಲಾರಿಗೂ ತಿಳಿದಿರೋ ವಿಚಾರವೇ ಸರಿ.. ಆದರೆ ಕೆಲವೊಮ್ಮೆ ನಾವು ಹಲವು ಬಗೆಯ ನಂಬರ್ ಪ್ಲೇಟ್ ಗಳನ್ನು ನೋಡಿರುತ್ತೇವೆ. ಅವುಗಳ್ಯಾಕೆ ಬಗೆಬಗೆಯ ಕಲರ್ ಗಳಲ್ಲಿವೆ ಎಂಬುದರ ಬಗೆಗೆ ಬಹುಶಃ ಹಲವರಿಗೆ ತಿಳಿದಿರಲಿಕ್ಕಿಲ್ಲ, ಹಾಗಿದ್ದರೆ ನಾವು ಈ ತರದ ನಂಬರ್ ಪ್ಲೇಟ್ ಗಳ ಬಗೆಗಿನ ಒಂದು ಕಿರುಪರಿಚಯ ನೋಡೋಣ.
ಸಾಮಾನ್ಯವಾಗಿ ಇಂದು 6 ವಿಧದ ನಂಬರ್ ಪ್ಲೇಟ್ ಗಳು ಚಾಲ್ತಿಯಲ್ಲಿವೆ.
1.ಕಪ್ಪು ಪ್ಲೇಟ್ ನಲ್ಲಿ ಹಳದಿ ಬಣ್ಣದ ಬರಹ
ಈ ವಿಧದ ನಂಬರ ಪ್ಲೇಟ್ ಹೊಂದಿರೋ ಗಾಡಿಗಳು ಕಮರ್ಷಿಯಲ್ ಗಾಡಿಗಳಾಗಿದ್ದು, ಇವುಗಳು ಸ್ವಯಂ ಚಾಲನೆಗಾಗಿ ಬಾಡಿಗೆಗೆ ದೊರಕುತ್ತದೆ.ಜೂಮ್ ಕಾರ್ ಹಾಗೂ ಜಸ್ಟ್ ರೈಡ್ ಸ್ಟಾರ್ಟ್ ಅಪ್ಸ್ ಗಳು ಈ ವಿಭಾಗದಡಿ ಕಂಡು ಬರುತ್ತದೆ.
2.ಹಳದಿ ನಂಬರ್ ಪ್ಲೇಟ್ ನಲ್ಲಿ ಕಪ್ಪು ಬರಹ
ಎಲ್ಲಾ ವಿಧದ ಕಮರ್ಷಿಯಲ್ ಗಾಡಿಗಳಾದ,ಆಟೋ,ಟ್ಯಾಕ್ಸಿ ಹಾಗೂ ಟ್ರಕ್ಸ್ ಗಳು ಹಳದಿ ಬಣ್ಣದ ಪ್ಲೇಟ್ ಅನ್ನು ಹೊಂದಿರುತ್ತದೆ.
3. ಬಿಳಿ ನಂಬರ್ ಪ್ಲೇಟ್ ನಲ್ಲಿ ಕಪ್ಪು ಬರಹ
ಈ ನಂಬರ್ ಪ್ಲೇಟ್ ಗಳನ್ನು ಜನ ಸಾಮಾನ್ಯರ ಖಾಸಗೀ ವಾಹನಗಳಿಗಾಗಿ ಉಪಯೋಗಿಸಲಾಗುತ್ತದೆ.
4.ಕೆಂಪು ನಂಬರ್ ಪ್ಲೇಟ್ ನಲ್ಲಿ ಬಿಳಿ ಬರಹ
ಇವುಗಳನ್ನು ಸಾಮಾನ್ಯವಾಗಿ ವಾಹನ ಮಾರಾಟ ಕಂಪನಿಗಳು ಟೆಸ್ಟಿಂಗ್ ಹಾಗೂ ಹೊಸ ಗಾಡಿಗಳ ಮಾರಾಟದ ಜಾಹೀರಾತು ಕೆಲಸಗಳಿಗಾಗಿ ಬಳಸಲಾಗುತ್ತದೆ.
5.ಮೇಲಕ್ಕೆ ಗುರುತಿಸಲ್ಪಟ್ಟ ಏರೋ ಮಾರ್ಕ್ ನ್ನು ಒಳಗೊಂಡ ನಂಬರ್ ಪ್ಲೇಟ್ ಗಳು.
ಎಲ್ಲಾ ಮಿಲಿಟರಿ ಗಾಡಿಗಳಿಗೆ ವಿಶೇಷ ನಂಬರ್ ಪ್ಲೇಟ್ ವ್ಯವಸ್ಥೆಯನ್ನು ಒದಗಿಸಲಾಗಿದೆ.ಈ ಗಾಡಿಗಳು ನ್ಯೂದೆಹಲಿಯ ಮಿನಿಸ್ಟ್ರಿ ಆಫ್ ಡಿಫೆನ್ಸ್ನಲ್ಲಿ ದಾಖಲಾಗುತ್ತವೆ.ಮಿಲಿಟರಿ ಗಾಡಿಗಳು ಕಪ್ಪ್ಪು ನಂಬರ್ ಪ್ಲೇಟ್ ಗಳನ್ನು ಹೊಂದಿದ್ದು,ಅದರಲ್ಲಿ ಬಿಳಿ ಬರಹವನ್ನು ಬರೆಯಲಾಗಿದೆ.ಮೊದಲ / ಮೂರನೆಯ ಬರಹದಲ್ಲಿ ಮೇಲಕ್ಕೆ ತೋರಿಸೋ ಏರೋ ಮಾರ್ಕ್ ನ್ನು ಕಾಣ ಬಹುದಾಗಿದೆ.ಇದನ್ನು ಬ್ರಾಡ್ ಏರೋ ಎನ್ನುತ್ತಾರೆ.
6.ನೀಲಿ ನಂಬರ್ ಪ್ಲೇಟನಲ್ಲಿ ಬಿಳಿ ಬರಹ
ಎಲ್ಲಾ ವಿದೇಶೀಯ ಅಧಿಕಾರಿಗಳ ಗಾಡಿಗಳಿಗೆ ನೀಲಿ ನಂಬರ್ ಪ್ಲೇಟ್ ನ್ನು ಅಳವಡಿಸಲಾಗುತ್ತದೆ.ಈ ನಂಬರ್ ಪ್ಲೇಟ್ ಗಳಿಗೆ (UN)UNITED NATIONS,(CC)CONSULAR CORPS HAAGOO(CD)DIPLOMATIC CORPS ಎಂಬ ಸ್ಪೆಷಲ್ ಕೋಡ್ಸ್ ಗಳಿರುತ್ತದೆ.
- ಸ್ವರ್ಣಲತ ಭಟ್
POPULAR STORIES :
ಬೆಂಗಳೂರಿಗೂ ಬಂತು 3D ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?
ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!
ಪತ್ರಕರ್ತನನ್ನು ನೋಡಿದ ಆ ರೋಗಿ ವಿಚಿತ್ರವಾಗಿ ಮಾತಾಡ್ತಾನೆ..! ‘ಅನ್ವೇಷಿ’ ನೋಡಿದ್ರೆ ಎಲ್ಲವೂ ಅರ್ಥವಾಗುತ್ತೆ..!
ಬೆಳ್ಳಿ ತಾರೆಗೆ ಬಿಎಂಡಬ್ಲ್ಯೂ ಕಾರು, ಸಾಕ್ಷಿಗೆ ವಿಮಾನ ಟಿಕೆಟ್ ಗಿಫ್ಟ್…!
ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….
ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!
ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!
ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!
ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.