ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಜಿಯೋ 4ಜಿ ಬಂದ್ಮೇಲಂತು ಟೆಲಿಕಾಂ ಸಂಸ್ಥೆಗಳು ಕೊಡುಗೆಗಳ ಮಹಾಕ್ರಾಂತಿಯನ್ನೆ ಗ್ರಾಹಕರಿಗೆ ನೀಡುತ್ತಾ ಬದ್ವು. ಜಿಯೋನಿಂದ ಎಚ್ಚೆತ್ತುಕೊಂಡ ಇನ್ನಿತರೆ ಟೆಲಿಕಾಂ ಸಂಸ್ಥೆಗಳಾದ ಏರ್ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳು ತಮ್ಮ ಗ್ರಾಹಕರಿಗೂ ಆಫರ್‍ಗಳು ಸುರಿಮಳೆಯನ್ನೆ ಸುರಿಸಿತ್ತು ಬಿಡಿ. ಆದ್ರೆ ಈಗ ವಿಷಯ ಏನಪ್ಪಾ ಅಂದ್ರೆ ರಿಲಾಯಾನ್ಸ್ ಜಿಯೋ4ಜಿ ವೆಲ್‍ಕಂ ಕೊಡುಗೆಯನ್ನು ಇನ್ನು ಮೂರು ತಿಂಗಳ ಕಾಲ ವಿಸ್ತರಿಸಲು ಮುಂದಾಗಿದೆಯಂತೆ..! ಅಂದ್ರೆ ಜಿಯೋ ವೆಲ್‍ಕಂ ಆಫರ್‍ನ್ನು ಡಿಸೆಂಬರ್ 31.ರವರೆಗು ದೊರಕಲಿದೆ ಎಂದು ಪ್ರಚಾರ ಮಾಡಿದ್ದ ಸಂಸ್ಥೆ ಇದೀಗ 2017ರ ಮಾರ್ಚ್ ತಿಂಗಳವರೆಗೂ ಬಂಪರ್ ಆಫರ್ ಕೊಡುವುದಾಗಿ ಹೇಳಿದೆಯಂತೆ..! ಜಿಯೋ ಅಕ್ಟೋಬರ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿತ್ತು. ಈ ಹಿನ್ನಲೆಯಲ್ಲಿ ಜಿಯೋ ಸಿಮ್ ಕೊಂಡು ಕೊಂಡರೆ ಮೂರು ತಿಂಗಳ ಕಾಲ ಅನ್‍ಲಿಮಿಟೆಡ್ ವಾಯ್ಸ್ ಕಾಲ್, ಇಂಟರ್‍ನೆಟ್ ಹಾಗೂ ಇತರೆ ಸೇವೆಗಳನ್ನ ಉಚಿತವಾಗಿ ನೀಡಲಾಗುವುದು ಎಂದು ಹೇಳಿತ್ತು.. ಅದರಂತೆ ಈಗ ಜಿಯೊ ಗ್ರಾಹಕರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಆದರೆ ಟ್ರಾಯ್ ನಿಯಮದ ಪ್ರಕಾರವಾಗಿ ಒಂದು ಟೆಲಿಕಾಂ ಸಂಸ್ಥೆ ತಮ್ಮ ಗ್ರಾಹಕರಿಗೆ 3 ತಿಂಗಳಗಳ ಕಾಲ ಮಾತ್ರ ಉಚಿತ ಆಫರ್‍ಗಳನ್ನು ನೀಡಬೇಕು ಎಂಬ ನಿಯಮವಿದೆ. ಹಾಗಾಗಿ ರಿಲಯಾನ್ಸ್ ಜಿಯೋ ಆಫರ್ ಡಿ.31ಕ್ಕೆ ಮುಗಿಯಲಿದೆ ಎಂದು ಭಾವಿಸಲಾಗಿತ್ತು.. ಆದ್ರೆ ಜಿಯೋ ಆಫರ್ ಡಿಸೆಂಬರ್‍ಗೆ ಮಾತ್ರ ಅಲ್ಲ ಮಾರ್ಚ್‍ವರೆಗೂ ವಿಸ್ತರಗೊಳ್ಳುತ್ತೆ ಎಂದು ಹೇಳಿದೆ.. ಇದಕ್ಕೆ ಟ್ರಾಯ್‍ನ ಅನುಮತಿ ಬೇಕಾಗಿಲ್ಲವಂತೆ.. 100 ಮಿಲಿಯನ್ ಗ್ರಾಹಕರನ್ನು ಹೊಂದುವ ಮುಖ್ಯ ಉದ್ದೇಶವನ್ನಿಟ್ಟುಕೊಂಡಿರುವ ಜಿಯೋ ಅದರ ಗುರಿ ತಲುಪುವ ಸಲುವಾಗಿಯೇ ತನ್ನ ಕೊಡುಗೆಯ ವಿಸ್ತರಣೆಯನ್ನು ಮಾರ್ಚ್‍ವರೆಗೆ ಹೆಚ್ಚಿಸಿದೆ.. ಕೇವಲ ಡಿಸೆಂಬರ್‍ವರೆಗೆ ಮಾತ್ರ ಆಫರ್ ಇರತ್ತೆ ಎಂದು ನಿರಾಸೆಯಲ್ಲಿದ್ದ ಗ್ರಾಹಕರು ಜಿಯೋ ಆಫರ್‍ನ್ನು ಇನ್ನು ಮೂರು ತಿಂಗಳು ಹೆಚ್ಚಿನ ಕಾಲ ಉಪಯೋಗಿಸಿಕೊಳ್ಳಬಹುದು…
Like us on Facebook The New India Times
POPULAR STORIES :
ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!