ಈ ಸ್ಟೋರಿ ಓದಿದ್ರೆ ನಿಮ್ಮ ಮೈ ಜುಮ್ ಅನ್ನೋದಂತು ಗ್ಯಾರೆಂಟಿ. ಈತ ಬದುಕಿದ್ದೇ ಒಂದು ಪವಾಡ ಅಂದ್ರೂನು ತಪ್ಪಾಗೊಲ್ಲ ಬಿಡಿ.. ಅವನ ಹೊಟ್ಟೇಲಿ ಇದ್ದಿದ್ದು ಚಾಕ್ಲೇಟ್ ಪೀಸ್ ಅಲ್ಲಾ ರೀ… ಬರೋಬ್ಬರಿ 40 ನುಣುಪಾದ ಚಾಕುಗಳು…!
ಪಂಜಾಬಿನ ಗುರುದಾಸಪುರದವನಾದ ಈ ಹುಡುಗ ಮೂರು ಇಂಚಿನ ಬರೋಬ್ಬರಿ 40 ಚಾಕುಗಳನ್ನು ನುಂಗಿದ್ದ ನೋಡಿ… ಮಾನಸಿಕ ಅಸ್ವಸ್ಥನಾಗಿದ್ದ ಈ ಹುಡುಗ ಕೆಲವು ದಿನಗಳ ಹಿಂದೆ ತನಗೇ ಅರಿವಿಲ್ಲದಂತೆ ಇಷ್ಟೊಂದು ಚಾಕು ನುಂಗಿದ್ದಾನೆ ನೋಡಿ.. ಮೊದಲಿಗೆ ಆತನಿಗೆ ಯಾವ ತೊಂದರೆಯೂ ಕಾಣಿಸಿರಲಿಲ್ಲ ಆದರೆ ಸ್ವಲ್ಪ ದಿನಗಳ ಹಿಂದೆ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅಮೃತಸರದ ಆಸ್ಪತ್ರೆಯ ವೈದ್ಯರಿಗೆ ಭೇಟಿಯಾದಾಗ ವೈದ್ಯರು ಆತನನ್ನು ಸಿಟಿ ಸ್ಕ್ಯಾನ್‍ಗೆ ಒಳಪಡಿಸಿದ್ದರು. ಆಗಲೇ ಗೊತ್ತಾದದ್ದು ಪುಣ್ಯಾತ್ಮ ಚಾಕುಗಳನ್ನು ಚಾಕ್‍ಲೇಟ್ ರೀತಿ ನುಂಗಿದ್ದಾನೆ ಅಂತ. ಅದು ಒಂದಲ್ಲ ಎರಡಲ್ಲಾ ಸ್ವಾಮಿ.. ಬರೋಬ್ಬರಿ 40 ಚಾಕು..! ತಕ್ಷಣವೇ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ ವೈದ್ಯರು ಸುಮಾರು 5 ಗಂಟೆಗಳ ಕಾಲ ನಡೆಸಿದ ಆಪರೇಷನ್‍ನಿಂದ ಆತನ ಹೊಟ್ಟೆಯಲ್ಲಿದ್ದ 40 ಚಾಕುವನ್ನು ಹೊರತೆಗೆದಿದ್ದಾರೆ. ಕೆಲವು ಫೋಲ್ಡ್‍ಬಲ್ ಚಾಕುಗಳು ಹೊಟ್ಟೆಯೊಳಗೆ ತೆರೆದುಕೊಂಡಿದ್ದರಿಂದ ರಕ್ತಸ್ರಾವವಾಗಿತ್ತು. 36 ಚಾಕುಗಳು ಹೊಟ್ಟೆಯೊಳಗೆ ಹಾಗೂ 4 ಚಾಕುಗಳು ಕರುಳಲ್ಲಿ ಇತ್ತೆಂದು ವೈದ್ಯರು ಹೇಳಿದ್ದಾರೆ.
POPULAR STORIES :
ರಾಜಕೀಯ ಉದ್ದೇಶಕ್ಕಾಗಿ ಪವನ್‍ರನ್ನು ಮೀಟ್ ಮಾಡಿದ್ದಲ್ಲ: ಕುಮಾರಸ್ವಾಮಿ
Askme.Com ಅಂತರ್ಜಾಲ ತಾಣ ಮುಚ್ಚಲು ಚಿಂತನೆ..!
ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!
ಪತ್ರಕರ್ತನನ್ನು ನೋಡಿದ ಆ ರೋಗಿ ವಿಚಿತ್ರವಾಗಿ ಮಾತಾಡ್ತಾನೆ..! ‘ಅನ್ವೇಷಿ’ ನೋಡಿದ್ರೆ ಎಲ್ಲವೂ ಅರ್ಥವಾಗುತ್ತೆ..!
ಬೆಳ್ಳಿ ತಾರೆಗೆ ಬಿಎಂಡಬ್ಲ್ಯೂ ಕಾರು, ಸಾಕ್ಷಿಗೆ ವಿಮಾನ ಟಿಕೆಟ್ ಗಿಫ್ಟ್…!
ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….
ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!
ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!
ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!
ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.