ಎಷ್ಟೋ ಜನ ಏನೇನೋ ಓದಿ, ಒಳ್ಳೆಯ ಕೆಲಸವನ್ನೂ ಗಿಟ್ಟಿಸಿಕೊಂಡು ಕೈ ತುಂಬಾ ಸಂಬಳವನ್ನೂ ಪಡೆಯುತ್ತಿರ್ತಾರೆ..! ಆದರೆ ಕೆಲವೊಮ್ಮೆ ತಮ್ಮ ವೃತ್ತಿಯ ಆಯ್ಕೆಯನ್ನೇ ಬದಲಾಯಿಸಿಕೊಳ್ತಾರೆ…! ಶಿಕ್ಷಣಪಡೆದಿದ್ದೇ ಬೇರೆ ಅವರ ವೃತ್ತಿ ಬದುಕೇ ಬೇರೆ ಆಗುತ್ತೆ..! ಒಳ್ಳೆಯ ಕೆಲಸ ಬಿಟ್ಟು ತಮ್ಮ ಆಸಕ್ತಿಯ ಕೆಲಸದಲ್ಲಿ ಮುಂದುವರೆಯುತ್ತಾರೆ..! ಅಂಥಾ ಇಬ್ಬರ ಸ್ಟೋರಿ ಇಲ್ಲಿದೆ.
ಅಕ್ಷತಾ ಶೆಟ್ಟಿ ಮತ್ತು ಪೀಯೂಷ್ ಗೋಸ್ವಾಮಿ ಕರ್ನಾಟಕದ ಎನ್ಐಟಿ ಇಂಜಿನಿಯರಿಂಗ್ ಪದವಿ ಪಡೆದವರು. ಕಾರ್ಪೋರೇಟ್ ವಲಯದಲ್ಲಿ ಎರಡು ವರ್ಷ ದುಡಿದರು. ಆಮೇಲೆ ಯಾಕೋ ಈ ಕೆಲಸ ಬೇಡ ಅಂತ ಅವರಿಗೇ ಅನಿಸಿತು..! ಕೆಲಸಕ್ಕೆ ರಾಜೀನಾಮೆ ಕೊಟ್ಟರು.
ಪಿಯೂಷ್ ಫೋಟೋಗ್ರಫಿ ಮತ್ತು ಡಾಕ್ಯುಮೆಂಟರಿ ಫಿಲ್ಮ್ಮೇಕಿಂಗ್ (ಸಾಕ್ಷ್ಯಾಚಿತ್ರ ನಿರ್ಮಾಣ)ದಲ್ಲಿ ತೊಡಗಿದರು. ಹಾಗೆಯೇ ಅಕ್ಷತಾ `ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಕೆಲಸ ಮಾಡೋಕೆ ಶುರುಮಾಡಿದ್ರು..!
2013ರಲ್ಲಿ ಅವರು ತಮ್ಮ ಕೆಲಸವನ್ನು ಬಿಟ್ಟು `ರೆಸ್ಟ್ ಆಫ್ ಮೈ ಫ್ಯಾಮಿಲಿ ಮೂಲಕ ತಮ್ಮ ಆಸಕ್ತಿದಾಯಕ ಕೆಲಸವನ್ನು ಮಾಡಲು ಶುರುಮಾಡ್ತಾರೆ..!
ಕಳೆದ ಐದು ವರ್ಷಗಳಿಂದ ಅವರಿಬ್ಬರೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಸಿ ಸಾಮಾಜಿ ಸಮಸ್ಯೆಗಳು ಮತ್ತು ಮಾನವಸಕ್ತ ಸ್ಟೋರಿಗಳನ್ನು ದಾಖಲಿಸಿಕೊಳ್ಳುತ್ತಾ ಬಂದಿದ್ದಾರೆ. ನಿಧಾನವಾಗಿ ಅಲ್ಲಿನ ಜನರನ್ನು ಭೇಟಿಯಾಗಿ ನಂತರ ಅವರ ಕುಟುಂಬದವರನ್ನೂ ಕಂಡು ಅವರಲ್ಲಿ ಇವರೂ ಒಬ್ಬರಾಗಿ ಗ್ರಾಮೀಣ ಬದುಕು ಮತ್ತು ಜನಪದವನ್ನು ತಿಳಿದರು..! ಅಲ್ಲಿನ ಜನರೇ ಅವರ ಸಂಸ್ಕೃತಿ, ಅವರ ಬದುಕಿನ ಕಥೆಯನ್ನು ಇವರಿಗೆ ವಿವರಿಸಿದರು..!
ಈ ವಿಷಯವನ್ನೆಲ್ಲಾ ತಿಳಿದು ಗೋಸ್ವಾಮಿ ಮತ್ತು ಅಕ್ಷತಾ ಶೆಟ್ಟಿ ಅವರು ಕಂಡ ಹಳ್ಳಿಯ ಬದುಕಿನ ಬಗ್ಗೆ ಬರೆಯಲಾರಂಭಿಸಿದರು..! ಅವರು ಅಲ್ಲಿ ಕಳೆದ ಒಂದುರೀತಿಯ ಹೋರಾಟದ ಬದುಕು ಮತ್ತು ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಅಲ್ಲೇ ಸಾಯಬೆಕಾಗಿರುವ ಆ ಜನರ ಕಷ್ಟಗಳ ಬಗ್ಗೆ ಅವರ ಬದುಕಿನ ಸ್ಥಿತಿಯ ಬಗ್ಗೆ ಬರೆದರು..! ಅಷ್ಟೇ ಅಲ್ಲದೇ ಅವರ ಬದುಕನ್ನು ಬದಲಾಯಿಸುವುದೇಗೆ ಎಂಬುದನ್ನು ಯೋಚಿಸಿದರು..!
ಅಲ್ಲಿನ ಸಮಸ್ಯೆಗಳನ್ನು ಹೈಲೆಟ್ ಮಾಡುವುದರ ಜೊತೆಗೇ ಸಮರ್ಥವಾದ ವ್ಯವಸ್ಥೆಯನ್ನು ರೂಪಿಸಲು ನಿರ್ಧರಿಸ್ತಾರೆ. ಅವರ ಬೆಂಬಲಕ್ಕೂ ನಿಂತು, ಭೇಟಿಯಾದ ಎಲ್ಲರ ಬಗ್ಗೆಯೂ ದಾಖಲಿಸಿಕೊಳ್ತಾರೆ..! ಅಲ್ಲಿನವರ ಉದ್ಧಾರಕ್ಕಾಗಿ ನಿರ್ದಿಷ್ಟವಾದ ಯೋಜನೆಯನ್ನೂ ರೂಪಸಿಯೇ ಬಿಡ್ತಾರೆ..!
ಯೋಜನೆಯ ಮೊದಲನೇ ಹೆಜ್ಜೆಯಾಗಿ ಭಾರತದ ಬೇರೆ ಬೇರೆ ಪ್ರದೇಶಗಳಿಗೆ ಹೋಗ್ತಾರೆ..! ಒಂದು ವರ್ಷಗಳ ಕಾಲ ನಿರಂತರವಾಗಿ ಈ ರೀತಿ ದೇಶದ ಉದ್ದಗಲಕ್ಕೂ ಪ್ರಯಾಣಿಸುತ್ತಾರೆ. ಸಮಸ್ಸೆಗಳು ಮತ್ತು ಸಮುದಾಯಗಳು ಸ್ಥಳದಿಂದ ಸ್ಥಳಕ್ಕೆ ಬದಾಲಗುತ್ತಿರುತ್ತವೆ. ಇವರು ಅಲ್ಲಿನ ಸಮಸ್ಯೆಗಳನ್ನೆಲ್ಲಾ ಅರಿತು ಎಲ್ಲರಿಗೂ ಸಹಾಯ ಮಾಡುತ್ತಾರೆ. ಗ್ರಾಮೀಣ ಭಾರತದ ಬೇರೆ ಬೇರೆ ಪ್ರದೇಶಗಳ ಸಮಸ್ಯೆಗಳನ್ನು ದಾಖಲಿಸಿ ಬರೆಯುವ ಮೂಲಕ ಎಹಚ್ಚು ಜನರಿಗೆ ಆಯಾ ಪ್ರದೇಶಗಳ ಸಾಮಾಜಿಕ ಸ್ಥಿತಿಗಳು ಗೊತ್ತಾಗುವಂತೆ ಮಾಡುತ್ತಿದ್ದಾರೆ. ತಮ್ಮ ಬರಹದಿಂದ ಬಂದ ಹಣ ಮತ್ತು ಇನ್ನೂ ಅಗತ್ಯವಿದ್ದರೆ ದಾನಿಗಳ ಮೂಲಕ ಹಣ ಸಂಗ್ರಹಿಸಿ ಆ ಜನರಿಗೆ ಸಹಾಯ ಮಾಡ್ತಾ ಇದ್ದಾರೆ..! ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇವರ ಫೇಸ್ ಬುಕ್ ಪೇಜ್ RestOfMyFamily ನೋಡಿ.
ಒಳ್ಳೆಯ ಸಂಬಳದ ಕೆಲಸವನ್ನು ಬಿಟ್ಟು ಜೀವನ ಅಂದ್ರೆ ಸಮಾಜ ಸೇವೆ ಮಾಡೋದು ಎಂಬ ಒಳ್ಳೇ ಭಾವನೆಯಿಂದ ಗ್ರಾಮೀಣ ಜನರ ಬದುಕನ್ನು ಕಟ್ಟಿಕೊಡುತ್ತಿರುವ ಇವರಿಗೆ ಒಳ್ಳೆಯದಾಗಲೀ ಅಂತ ಹಾರೈಸಿ.