ಸಾರ್.., ನಮ್ಮ ಜನಗಳಿಗೇನಾಗಿದೆ..?! ಸಾಮಾಜಿಕ ಜಾಲತಾಣಗಳನ್ನು ನಮ್ಮಲ್ಲಿನ ಬಹುಪಾಲು ಜನ ತಮ್ಮ ಕ್ರೂರತೆಯನ್ನು ಪ್ರದರ್ಶಿಸುವ ಅಡ್ಡವನ್ನಾಗಿ ಮಾಡ್ಕೊಂಡ್ ಬಿಟ್ಟಿದ್ದಾರಲ್ಲಾ..!? ದಿನಾಲೂ ಈ ಸೋಶಿಯಲ್ ಮೀಡಿಯಾದಲ್ಲೇ ಮುಳುಗಿರುವಾಗ, ಕೆಲವು ಜನರ ಅಮಾನವೀಯತೆಯ ಗುಣ, ಕ್ರೂರ ಮತ್ತು ನೀಚ ಮನಸ್ಥಿತಿಗಳನ್ನು ನೋಡ್ತಾ ಇರ್ತೀವಿ..!?
ಇಲ್ಲೋ ಫೋಟೋಗ್ರಫಿ ಇದೆ, ಇದು `ಮಂಗವೊಂದಕ್ಕೆ’ ಚಿತ್ರಹಿಂಸೆ ನೀಡ್ತಾ ಇರುವುದರ ಫೋಟೋಗ್ರಫಿ..!
ಮುಂಬೈನ ರೆಸಿಡೆನ್ಸಿಯಲ್ ಕಾಲೋನಿಯಲ್ಲಿ ಸುಮಾರು 6 ತಿಂಗಳಿಂದ ಈ ಮಂಗ ಆಹಾರ ಕಿತ್ಕೊಂಡ್ ಹೋಗೋದು ಮಾಡ್ತಾ ಇತ್ತಂತೆ..! ಇದರ ಕಾಟ ತಡೆಯಲಾಗದೇ ಈ ಮಂಗನನ್ನು ಹಿಡಿದು ಹಿಂಗೆ ಹಿಂಸೆ ಕೊಡ್ತಾ ಇದ್ದೀವಂತ ಹೇಳ್ತಾರೆ, ಅಲ್ಲಿನ ಸ್ಥಳೀಯರು..!
ಅಲ್ಲಾ ಸ್ವಾಮಿ, ಈ ಫೋಟೋ ನೋಡಿ, ಈ ಮೂಖ ಪ್ರಾಣಿಯ ಕೈಗಳಳನ್ನು ಹಿಂದಕ್ಕೆ ಕಟ್ಟಿ, ಕಾಲುಗಳನ್ನೂಕಟ್ಟಿ ಹಾಕಿದ್ದಾರೆ..! ಇದನ್ನು ನೋಡಿದ್ರೆನೇ ಅಯ್ಯೋ ಅನ್ಸಲ್ವೇನ್ರೀ..!? ಕಾಡನ್ನು ಕಡಿದು ಊರು ಮಾಡ್ಕೊಂಡಿದ್ದೀವಿ, ನಗರ ಮಾಡ್ಕೊಂಡಿದ್ದೀವಿ, ಹಿಂಗಿರುವಾಗ ಕಾಡನಲ್ಲಿರ ಬೇಕಾದ ಮಂಗ ಊರಿಗೆ ಬರ್ಲೇ ಬೇಕಲ್ವಾ..?! ದಾರಿತೋಚದೆ ಮಂಗ ಬಂದು ತೊಂದ್ರೆ ಕೊಡ್ತಾ ಇದ್ದಿದ್ದು ನಿಜವೇ ಇರ್ಬಹುದು..!? ಆದರೆ ಅದನ್ನು ಹಿಡಿದುಕಾಡಿಗೆ ಬಿಟ್ಟು ಬರುವ ಕೆಲಸ ಮಾಡೋ ಬದ್ಲು, ಈ ರೀತಿ ಕಟ್ಟಾಕಿಂಸೆ ಕೊಡ್ತಾ ಇದ್ದಾರೆಂದ್ರೆ..?! ಇವರೇನು ಮನುಷ್ಯರೋ, ಇಲ್ಲ..?! ಮಾನವೀಯತೆಯೇ ಇಲ್ಲದೇ ವರ್ತಿಸ್ತಾ ಇದ್ದಾರಲ್ಲಾ..?! ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಇಂಥಾ ಚಿತ್ರವನ್ನು ಪೋಸ್ಟ್ ಮಾಡಿ, ಎಲ್ಲಾ ಕಡೆ ಹರಡುವಂತೆ ಮಾಡೋದು ತಪ್ಪಲ್ಲ..! ಇದರ ಉದ್ದೇಶ ಜಾಗೃತಿ ಮೂಡಿಸೋದು ಆಗಿರ್ಬೇಕಲ್ಲವೇ..?! ಅದ್ಬಿಟ್ಟು ಇಂಥಾ ಫೋಟೋ ಇಟ್ಕೊಂಡು ತಮಾಷೆ ಮಾಡೋರು ಖಂಡಿತಾ ಮಾನವೀಯತೆಯನ್ನು ಕಳ್ಕೊಂಡಿದ್ದಾರೆ..! ಸರಿ, ಇಷ್ಟೆಲ್ಲಾ ಹಿಂಸೆಗಳು ಕಣ್ಣಿಗೆ ಕಾಣ್ತಾ ಇದ್ರೂ, ಪ್ರಾಣಿದಯಾಸಂಘದವರು, ಅರಣ್ಯ ಇಲಾಖೆ ಸಿಬ್ಬಂದಿಗಳೆಲ್ಲಾ ಎಲ್ಲೋದ್ರು ಸ್ವಾಮಿ..?! ಈ ಫೋಟೋನ್ನ ನೋಡಿ, ಅಯ್ಯೋ ಅನಿಸದೇ ಇದ್ರೆ ಅವರು ಮನುಷ್ಯರೇ ಅಲ್ಲ..! ನಮ್ಮಂತೆಯೇ ಈ ಮೂಖ ಪ್ರಾಣಿಗಳಲ್ಲವೇ..!? ಈ ಮಂಗನನ್ನು ಕಟ್ಟಾಕಿದಂತೆ, ಮನುಷ್ಯರನ್ನು ಕಟ್ಟಾಕಿದಿದ್ರೆ..?! ಇಷ್ಟೊತ್ತಿಗೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಜೋರಾಗಿ ಸದ್ದಾಗ್ತಾ ಇತ್ತು..
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com