ಶಿರಾಡಿಘಾಟ್ ನಲ್ಲಿ ಮೂರು ದಿನಗಳ ಹಿಂದೆ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಇನ್ನೂ ಚಾಲಕ ಸಂತೋಷ್ ಮೃತ ದೇಹ ಪತ್ತೆಯಾಗಿಲ್ಲ.
ಮೃತ ದೇಹ ಪತ್ತೆಗಾಗಿ ಸಂತೋಷ್ ಕುಟುಂಬಸ್ಥರು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಲ್ಲಿ ಮನವಿ ಮಾಡಿದ್ದಾರೆ.
ಮೃತದೇಹ ಪತ್ತೆ ಮಾಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ ರೋಹಿಣಿ ಅವರ ಮೊರೆ ಹೋಗಿದ್ದಾರೆ.

ಕುಟುಂಬಸ್ಥರಿಗೆ ಸಹಾಯ ಮಾಡುವುದಾಗಿ ಭರವಸೆ ಮಾಡಿದ ರೋಹಿಣಿ ಸಿಂಧೂರಿ ಅವರು ಅವರ ಅಳಲು ಕಂಡು ಭಾವುಕರಾದರು.
ಟ್ಯಾಂಕರ್ ಇಂಜಿನ್ ಜೊತೆಗೆ ನೀರಿನಲ್ಲಿ ಮುಳುಗಿದ್ದು, ಅದರಲ್ಲಿನ ಚಾಲಕ ಸಂತೋಷ್ ಮೃತ ದೇಹ 10 ಅಡಿ ಕೆಸರಲ್ಲಿ ಸಿಲುಕಿದೆ. ಆದ್ದರಿಂದ ಪತ್ತೆ ಕಾರ್ಯದಲ್ಲಿ ವಿಳಂಬವಾಗಿದೆ.






