IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನಿಯುಕ್ತಿಯಾಗಿ ಬಂದಾಗ 40 ದಿನಗಳ ಕಾಲ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಲ್ಲಿ ಉಳಿದು ಕೊಂಡಿದ್ರು.

ಬಳಿಕ ಡಿಸಿ ನಿವಾಸಕ್ಕೆ ರೋಹಿಣಿ ಸಿಂಧೂರಿ ಶಿಫ್ಟ್ ಆಗುವಾಗ ಆಡಳಿತ ತರಬೇತಿ ಕೇಂದ್ರ ಅತಿಥಿ ಗೃಹದಿಂದ 12 ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಸಾಮಾಗ್ರಿಗಳ ವಾಪಸ್ಗೆ 2020ರಿಂದ ATI ಬರೆದಿರುವ 3 ಪತ್ರಕ್ಕೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಮೈಸೂರು ಡಿಸಿಗೆ ATI ಅಧಿಕಾರಿಗಳು ಮತ್ತೊಂದು ಪತ್ರ ಬರೆದಿದ್ದು, ಟೆಲಿಫೋನ್ ಟೇಬಲ್, ಬೆತ್ತದ ಚೇರ್ ಸೇರಿ 12 ಸಾಮಾಗ್ರಿ DC ವಸತಿ ಗೃಹದಲ್ಲಿ ಇದ್ದರೆ ವಾಪಸ್ ಕೊಡಿ ಎಂದು ಕೇಳಿದ್ದಾರೆ.







