ಟೀಂ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರಿಗೆ ಬಡ್ತಿ ಸಿಗ್ತಿದೆ. ಬಡ್ತಿ ಅಂದೊಡನೆ ಕ್ಯಾಪ್ಟನ್ ಶಿಪ್, ವೈಸ್ ಕ್ಯಾಪ್ಟನ್ಸಿ ಅಂತ ಅನ್ಕೋಬೇಡಿ. ಇದು ಅವರ ಪರ್ಸನಲ್ ಲೈಫ್ ನಲ್ಲಿ ಸಿಗ್ತಿರೋ ಪ್ರಮೋಷನ್.
ಹೌದು ಟೀಂ ಇಂಡಿಯಾದ ಆಟಗಾರರಾದ ರೋಹಿತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ತಂದೆಯಾಗಿ ಪ್ರೊಮೋಷನ್ ಪಡೀತಿದ್ದಾರೆ.
ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಮತ್ತು ಭುವನೇಶ್ವರ್ ಕುಮಾರ್ ಪತ್ನಿ ನುಪೂರ್ ಗರ್ಭಿಣಿ ಆಗಿದ್ದಾರೆ. ಶೀಘ್ರದಲ್ಲೇ ಇವರಿಬ್ಬರು ತಾಯಿ ಆಗಲಿದ್ದಾರೆ.
2015 ಡಿಸೆಂಬರ್ 13 ರಂದು ರೋಹಿತ್- ರಿತಿಕಾ, 2017 ನವೆಂಬರ್ 23 ರಂದು ಭುವಿ-ನುಪೂರ್ ಮದ್ವೆ ಆಗಿದ್ದರು.