ಡಿವೈಎಸ್ಪಿಗಳಾದ ಕಲ್ಲಪ ಹಂಡಿಬಾಗ್ ಹಾಗೂ ಗಣಪತಿ ಆತ್ಮಹತ್ಯೆ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಪಿಎಸ್ ಐ ಒಬ್ರು ಆತ್ಮಹತ್ಯೆ ಯತ್ನಿಸಿದ್ದಾರೆ. ವಿಜಯನಗರ ಠಾಣಾ ಪಿಎಸ್ ಐ ರೂಪಾ ಇನ್ಸ್ ಪೆಕ್ಟರ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಿನೇ ದಿನೇ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ವಿಜಯನಗರ ಠಾಣಾ ಮಹಿಳಾ ಪಿಎಸ್ ಐ ರೂಪಾ ತಂಗದ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ನಿನ್ನೆ ರಾಜಾಜಿನಗರದ ಪೊಲೀಸ್ ಕ್ವಾಟ್ರಸ್‌ನಲ್ಲಿ ಸಮವಸ್ತ್ರದಲ್ಲೇ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ 15 ಪ್ಯಾರಸಿಟಮಾಲ್, 10 ಡಾರ್ಟ್ ಮಾತ್ರೆ ಸೇರಿ ಒಟ್ಟು 25 ಮಾತ್ರೆಗಳನ್ನು ರೂಪಾ ನುಂಗಿದ್ದಾರೆ ಎನ್ನಲಾಗಿದೆ… ಬಳಿಕ ಅವ್ರ ಪತಿ ನಟರಾಜ 4 ಗಂಟೆಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು ತಕ್ಷಣವೇ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲು ಮಾಡಲಾಯ್ತು.
ಇನ್ನು ಆತ್ಮಹತ್ಯೆ ಯತ್ನಕ್ಕೆ ವಿಜಯನಗರ ಇನ್ಸಪೆಕ್ಟರ್ ಸಂಜೀವ್ ಗೌಡ ಕಿರುಕುಳ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಇನ್ಸಪೆಕ್ಟರ್ ಸಂಜೀವ್ ಗೌಡ ಹಾಗೂ ಎಸ್ ಐ ರೂಪಾ ಅವ್ರ ಮಧ್ಯೆ ಮೊಬೈಲ್ ಜಪ್ತಿ ವಿಚಾರವಾಗಿ ಮನಸ್ತಾಪ ಇತ್ತು ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ರೂಪಾಗೆ ಸಂಜೀವ್ ಗೌಡ ಕಿರುಕುಳ ನೀಡ್ತಿದ್ರು ಎನ್ನಲಾಗಿದೆ. ಮನನೊಂದಿದ್ದ ರೂಪಾ 3 ದಿನದಿಂದ ರಜೆ ಮೇಲಿದ್ರು. ಇವತ್ತು ಠಾಣೆಗೆ ಬಂದಾಗ ಸಂಜೀವ್ ಗೌಡ ಕರ್ತವ್ಯ ಲೋಪ ಎಂದು ಡೈರಿಯಲ್ಲಿ ಉಲ್ಲೇಖಿಸಿದ್ದರು. ಇದರಿಂದ ಮನನೊಂದು ಮನೆಗೆ ಬಂದು ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇನ್ನು ರೂಪಾ ಅವ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು ರಕ್ತದ ಪರೀಕ್ಷಾ ಮಾದರಿಯನ್ನು ಹೈದರಬಾದ್ ಗೆ ತಪಾಸಣೆಗಾಗಿ ಕಳುಹಿಸಲಾಗಿದೆ. ಎಲ್ಲಾ ರೀತಿಯ ಚಿಕಿತ್ಸೆಗೂ ರೂಪಾ ಸ್ಪಂದಿಸುತ್ತಿದ್ದು ಇನ್ನು ಮಾತ್ರೆಯ ಅಮಲಿನಲ್ಲೇ ಇದ್ದಾರೆ. ಇನ್ನು 36 ಗಂಟೆಗಳ ಕಾಲ ಐ ಸಿಯು ನಲ್ಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಕಾಫಿ ಡೇ ನಲ್ಲಿ ನಡೆದಿದ್ದ, ಮಹೇಶ್ ಹತ್ಯೆ ಕೇಸ್ ನಲ್ಲಿ ಸಂಜೀವ್ ಗೌಡ ಕರ್ತವ್ಯಲೋಪ ಎಸಗಿದ್ದರೆಂದು ಅಮಾನತು ಮಾಡಲಾಗಿತ್ತು. ಕರ್ತವ್ಯಕ್ಕೆ ಹಾಜರಾದ ದಿನವೇ ಪಿಎಸ್ ಐ ರೂಪಾಗೆ ಬೈದು, ಅವಮಾನಿಸಿದ್ದರು ಎಂದು ತಿಳಿದು ಬಂದಿದೆ. ಒಟ್ಟಾರೆ ದಿನದಿಂದ ದಿನಕ್ಕೆ ಇಂತ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಸೂಕ್ತ ವಿಚಾರಣೆಯ ನಂತರವಷ್ಟೇ ಸತ್ಯಾಸತ್ಯತೆ ತಿಳಿದು ಬರಲಿದೆ.
- ಶ್ರೀ
POPULAR STORIES :
ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?
ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!
ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!