ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಂಧರ ಕ್ರಿಕೆಟ್ ಪರ ಬ್ಯಾಟ್ ಬೀಸಿದ್ದಾರೆ.
ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ಮಾನ್ಯತೆ ನೀಡಬೇಕು, ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿನ್ ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಭಾರತ ಅಂಧರ ತಂಡ ಫೈನಲ್ ನಲ್ಲಿ ಪಾಕಿಸ್ತಾನವನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು. ಇದು ಭಾರತಕ್ಕೆ ಒಲಿದ 4ನೇ ಅಂಧರ ವಿಶ್ವಕಪ್. ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಹೆಮ್ಮೆಯ ಕ್ರಿಕೆಟಿಗರಿಗೆ ಸಲಕ ಸೌಲಭ್ಯ ಸಿಗಬೇಕು ಎಂಬುದು ಸಚಿನ್ ಆಶಯ.