ಮಾಜಿ ಕ್ರಿಕೆಟಿಗ , ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಇತ್ತೀಚೆಗೆ ಮುಗಿದಿದ್ದು, ಅವರು ತಮ್ಮ ಸಂಪೂರ್ಣ ವೇತನ ಮತ್ತು ಭತ್ಯೆಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
nu
ಕಳೆದ ಆರು ವರ್ಷಗಳಲ್ಲಿ ಸಚಿನ್ ಅವರು ಸುಮಾರು 90ಲಕ್ಷ ವೇತನ ಹಾಗೂ ಇತರೆ ಮಾಸಿಕ ಭತ್ಯೆಗಳನ್ನು ಪಡೆದುಕೊಂಡಿದ್ದರು.
ಇದೀಗ ಅಷ್ಟು ವೇತನ ಮತ್ತು ಭತ್ಯೆಯನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಸಚಿನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.







