SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ
ವಿಜಯಪುರ:- SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆಯಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 1 ಕೋಟಿ ರೂ. ನಗದು, 20 ಕೆಜಿ ಚಿನ್ನಾಭರಣ ಸೇರಿ ಒಟ್ಟು 21 ಕೋಟಿ ದರೋಡೆಯಾಗಿದೆ. ಬ್ಯಾಂಕ್ ದರೋಡೆಗೆ 5 ಜನರು ಬಂದಿದ್ದರು. 6 ಜನ ಬ್ಯಾಂಕ್ ಸಿಬ್ಬಂದಿ ಹಾಗೂ 4 ಜನ ಗ್ರಾಹಕರನ್ನು ದರೋಡೆಕೋರರು ಲಾಕ್ ಮಾಡಿದ್ದಾರೆ. ಕೋಣೆಯಲ್ಲಿ ಕೂಡಿ ಹಾಕಿ, ಪ್ಲಾಸ್ಟಿಕ್ ಬ್ಯಾಂಡ್‌ಗಳಿಂದ ಕೈ, ಕಾಲು ಕಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಪಂಡರಾಪುರ ಕಡೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ 1 ಕೋಟಿ ರೂ. ನಗದು, ಅಂದಾಜು 20 ಕೆಜಿ ಚಿನ್ನಾಭರಣ ಸೇರಿದಂತೆ 21 ಕೋಟಿ ರೂ. ಮೌಲ್ಯದ ನಗದು ಚಿನ್ನಾಭರಣ ದರೋಡೆಯಾಗಿದೆ ಎಂದು ತಿಳಿಸಿದ್ದಾರೆ.
ಮಂಗಳವಾರ ಸಂಜೆ 6:30 ರಿಂದ 7:30ರ ನಡುವೆ ಬ್ಯಾಂಕ್ ಕ್ಲೋಸಿಂಗ್ ಟೈಂನಲ್ಲಿ ದರೋಡೆ ನಡೆದಿದೆ. ದರೋಡೆಕೋರರ ಪೈಕಿ ಒಬ್ಬ ವ್ಯಕ್ತಿ ಮೊದಲೇ ಒಳಗೆ ಬಂದು ಕುಳಿತಿದ್ದ. ಬ್ಯಾಂಕ್ ಕ್ಲೋಸಿಂಗ್ ಟೈಂನಲ್ಲಿ ಲಾಕರ್ ಓಪನ್ ಇತ್ತು. ಆಗ ಬಂದೂಕಿನಿಂದ ಬೆದರಿಸಿ, ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ಒಟ್ಟು 398 ಪ್ಯಾಕ್ ಚಿನ್ನ ಅಂದರೆ 21 ಕೋಟಿ ರೂ. ಮೌಲ್ಯದ ಚಿನ್ನ, ನಗದು ದರೋಡೆಯಾಗಿದೆ ಎಂದಿದ್ದಾರೆ.