ಹಳ್ಳಿಗಳಲ್ಲಿ ಸರ್ಕಾರಿ ಅಥವಾ ಖಾಸಗೀ ಶಾಲೆಗಳನ್ನು ಸಮಾನ್ಯವಾಗಿ ಎಲ್ಲಿ ನಿರ್ಮಾಣ ಮಾಡಿರ್ತಾರೆ..? ಒಂದು ಊರಿನ ಹೃದಯ ಭಾಗದಲ್ಲೋ, ಅಥವಾ ಪೊಲೀಸ್ ಠಾಣೆ ಸಮೀಪದಲ್ಲೋ, ಅಥವಾ ಇನ್ಯಾವುದೋ ಉತ್ತಮ ಪರಿಸರವಿರುವ ಸ್ಥಳದಲ್ಲೋ ನಿರ್ಮಾಣ ಮಾಡಿರ್ತಾರೆ. ಆದ್ರೆ ಸ್ಮಶಾನದಲ್ಲಿ ಶಾಲೆ ನಡೆಸೋದನ್ನ ನೀವೆಲ್ಲಾದ್ರೂ ಕೇಳಿದ್ದೀರಾ..? ಅಂತಹದೊಂದು ಶಾಲೆ ದಶಕಗಳಿಂದಲೂ ಇದೆ ಅಂದ್ರೆ ನೀವು ನಂಬ್ತೀರಾ..? ನಂಬ್ಲೇ ಬೇಕು ನೋಡಿ..!
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಗದ್ಗೀ ಸವಾಯಿರಾಮ್ ಎಂಬ ಗ್ರಾಮದಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯಲಿಕ್ಕೆ ಹೋಗೋದು ಸ್ಮಶಾನಕ್ಕೆ..! ಆ ಸ್ಮಶಾನಕ್ಕೆ ಒಂದು ಹೆಣ ಬಂದರೂ ಶಾಲೆಗೆ ಮೂರು ದಿನ ರಜೆ..! ಪ್ರತೀ ದಿನ ಒಬ್ಬೋಬ್ಬರು ಸತ್ತರೆ..? ಮಕ್ಕಳಿಗಂತು ಖುಷಿನೋ ಖುಷಿ..! ಆದ್ರೆ ಈ ಬಗ್ಗೆ ಇಲ್ಲಿನ ಶಿಕ್ಷಣ ಇಲಾಖೆ ಕಣ್ಣಿದ್ದೂ ಕುರುಡನಂತಾಗಿದೆ…! ಅದೆಷ್ಟೋ ಬಾರಿ ಶಾಲೆಯನ್ನು ಸ್ಥಳಾಂತರಿಸುವಂತೆ ಮುಖ್ಯ ಶಿಕ್ಷಕರಿಂದ ಹಿಡಿದು ಊರಿನ ಗ್ರಾಮಸ್ಥರೂ ಕೂಡ ಮನವಿ ಪತ್ರ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗ್ಲಿಲ್ಲ ನೋಡಿ..!
ಇಲ್ಲಿರುವ ಸ್ಮಶಾನ ರಜಪೂತರ ವಂಶಕ್ಕೆ ಸೇರಿದ್ದು, ನಾನು ಸಹ ಈ ಶಾಲೆಯಲ್ಲಿಯೇ ಓದಿದ್ದು. ಇದಿಗ ನನ್ನ ಮೊಮ್ಮಗನೂ ಕೂಡ ಇಲ್ಲಿಯೇ ಓದುತ್ತಿದ್ದಾನೆ. ನಾನು ಓದುತ್ತರುವಾಗ ಇದ್ದ ನಿಯಮ ಈಗಲೂ ಪಾಲಿಸ್ತಿರೋದು ನನಗೆ ಆಶ್ಚರ್ಯ ಉಂಟು ಮಾಡ್ತಾ ಇದೆ. ಯಾರಾದ್ರು ಸತ್ತರೆ ಶಾಲೆಗೆ 3 ದಿನಗಳ ಕಾಲ ರಜೆ ಕೊಡ್ತಾರೆ ಅಂತ ಶಾಲೆಯ ಮಕ್ಕಳು ತುಂಬಾ ಸಂತೋಷ ಪಡ್ತಾರೆ ಎಂದು 75 ವರ್ಷದ ಪ್ರಭು ದಯಾಳ್ ಮೀನಾ ಹೇಳುತ್ತಾರೆ.
ಈ ಶಾಲೆಗೆ ಉತ್ತಮ ಫಲಿತಾಂಶ ಬರುತ್ತಿದ್ದು, ಶಾಲೆಯನ್ನು ಬೇರೆಡೆಗೆ ವರ್ಗಾವಣೆ ಮಾಡಿದರೆ ಇನ್ನು ಉತ್ತಮ ಶ್ರೇಣಿಯಲ್ಲಿ ಫಲಿತಾಂಶ ಹೊರ ಬೀಳುವುದರಲ್ಲಿ ಅನುಮಾನವೇ ಇಲ್ಲ. ಆದ್ರೆ ಅದು ನಡೆಯುತ್ತಿಲ್ಲ ಎಂದು ಅದೇ ಶಾಲೆಯಲ್ಲಿ ವ್ಯಾಸಾಂಗ ಮಾಡಿ ಅಲ್ಲೆ ಶಿಕ್ಷಕಿಯಾಗಿರುವ ಆನಂದಿ ಲಾಲ್ ಬಾ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಹಿಂದೆ ಈ ಶಾಲೆ ಗುರುಕುಲ ಮಾದರಿಯಲ್ಲಿತ್ತು. ತದ ನಂತರ 1950ರಲ್ಲಿ ಇದು ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿತು. ಇದೀಗ ಪೌಢ ಶಾಲೆಯೂ ಆರಂಭಗೊಂಡಿದೆ. ಇದನ್ನು ಸ್ಥಳಾಂತರಿಸುವಂತೆ ಸಂಬಂಧಿಸಿದವರಿಗೆಲ್ಲ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಪ್ರಿನ್ಸಿಪಾಲ್ ಬಾಬು ಲಾಲ್ ಬೇಸರ ವ್ಯಕ್ತ ಪಡಿಸಿದ್ದಾರೆ. ಆಶ್ಚರ್ಯಕರ ವಿಷಯ ಅಂದ್ರೆ ರಾಜಸ್ಥಾನದ ಮಾಜೀ ಸ್ಪೀಕರ್ ಸಮರ್ಥ್ ಲಾಲ್ ಮೀನಾ ಅವರು ಈ ಶಾಲೆಯ ಹಳೇಯ ವಿದ್ಯಾರ್ಥಿಯಂತೆ…!
POPULAR STORIES :
ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!
ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!
ಈ ವೃದ್ದ ಸನ್ಯಾಸಿಯ ದೀರ್ಘಾಯುಷ್ಯದ ಸೀಕ್ರೇಟ್ ಏನು ಗೊತ್ತಾ…?
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು