ಏಲಿಯೆನ್ಸ್ ಗಳನ್ನು ಹುಡುಕಲು ಹೊರಟ ವಿಜ್ಞಾನಿಗಳು.

Date:

ವಿಶ್ವದಲ್ಲೇ ಇದೇ ಪ್ರಥಮ ಬಾರಿಗೆ ವಿಜ್ಞಾನಿಗಳು ಅನ್ಯಗ್ರಹಗಳನ್ನು (ಏಲಿಯೆನ್) ಹುಡುಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್, ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್ ಬರ್ಗ್ ಹಾಗೂ ರಷ್ಯಾ ಮೂಲದ ಉದ್ಯಮಿ ಯೂರಿ ಮಿಲ್ನರ್ ಜತೆಗೂಡಿ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಯೋಜನೆಗೆ ಸುಮಾರು 100 ದಶಲಕ್ಷ ಬಂಡವಾಳವನ್ನು ಇವರು ಹೂಡಿದ್ದು, ಯಶಸ್ವಿಯಾದಲ್ಲಿ ವಿಜ್ಞಾನದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಲಿದೆ.
ನಮ್ಮ ಪೃಥ್ವಿ ಬಿಟ್ಟು ಬೇರೆ ಗ್ರಹಗಳಲ್ಲಿ ಬೇರೆ ಯಾವುದೇ ರೀತಿಯಾದ ಜೀವಿಗಳು ವಾಸಿಸುತ್ತಿವೆಯಾ ಎಂಬ ಪ್ರಶ್ನೆ ವಿಜ್ಞಾನಿಗಳಿಗೆ ಹಲವಾರು ದಶಕಗಳಿಂದ ಕಾಡುತ್ತಲೇ ಇದೆ. ಆಗಾಗ್ಗೆ ಈ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅನ್ಯ ಗ್ರಹಗಳಲ್ಲಿ ನಮಗಿಂತ ಬಲಶಾಲಿಯಾದ ಏಲಿಯನ್ಗಳು ಜೀವಿಸುತ್ತಿವೆ ಎಂದು ಕೆಲವರ ವಾದವಾದರೆ, ಇನ್ನು ಕೆಲವರು ಇಂತಹ ಯಾವುದೇ ಜೀವಿಗಳು ಇರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ವಿಜ್ಞಾನಿಗಳ ಪಾಲಿಗಂತೂ ಇದು ಒಂದು ಚರ್ಚಾಸ್ಪದ ವಿಷಯ ಎಂಬುದಕ್ಕೆ ಎರಡು ಮಾತಿಲ್ಲ.
80ರ ದಶಕಗಳಲ್ಲಿ ಹಲವು ಜನರು ಆಗಸದಲ್ಲಿ ಹಲವು ಹಾರುವ ತಟ್ಟೆಗಳನ್ನು ಕಂಡಿದ್ದೇವೆ ಎಂದು ಹೇಳಿದ್ದರು. ಇದೇ ಏಲಿಯನ್ ಇರುವಿಕೆಗೆ ಹಾಗೂ ಸಂಶೋಧನೆಗೆ ಮಾರ್ಗ ಮಾಡಿಕೊಟ್ಟಿತು ಎಂದು ವಿಜ್ಞಾನಿಗಳ ಅಭಿಪ್ರಾಯ. ಇವುಗಳ ಮೇಲೆಯೇ ಅನೇಕ ಸಿನಿಮಾಗಳೂ ತೆರೆಯ ಮೇಲೆ ಬಂದಿದ್ದು, ಬಾಲಿವುಡ್ನಲ್ಲೂ ಇದರ ಮೋಡಿ ಮಾಡಿದ್ದು ನಿಮಗೇ ಗೊತ್ತೇ ಇದೆ. ಜಾದೂ ಎಂಬ ಕಾಲ್ಪನಿಕ ಪಾತ್ರದ ಮೂಲಕ ಏಲಿಯೆನ್ಗೆ ಜೀವ ತುಂಬಿದವರು ಖ್ಯಾತ ನಿರ್ದೇಶಕ ರಾಕೇಶ್ ರೋಷನ್. ಸಿನಿಮಾ ತೆರೆಗೆ ಬಂದು ಹಲವಾರು ವರ್ಷಗಳೇ ಸಂದರೂ ಈ ಸಿನಿಮಾ ಇನ್ನೂ ಜನಮನದಲ್ಲಿ ಹಚ್ಚ ಹಸಿರಾಗಿಯೇ ಇದೆ. ಇನ್ನೂ ನಿಜವಾಗಿಯೂ ಇಂಥಹ ಏಲಿಯನ್ಗಳನ್ನು ಪತ್ತೆ ಹಚ್ಚಿವುದಕ್ಕೆ ವಿಜ್ಞಾನಿಗಳು ಸಫಲವಾಗಿದ್ದಲ್ಲಿ ಏನಾಗಬಹುದು ಎಂದು ಯೋಚಿಸುವುದಕ್ಕೂ ಒಮ್ಮೆ ಎದೆ ಝಲ್ ಎನ್ನುತ್ತದೆ.
ಹಲವು ದಶಕಗಳ ಹಿಂದೆ ಜನರು ಕೇವಲ ಆಗಸದಲ್ಲಿ ಚಂದಿರ , ಮಿಂಚುವ ನಕ್ಷತ್ರಗಳನ್ನು ನೋಡಿ ಸಂಭ್ರಮಿಸುತ್ತಿದ್ದ ಕಾಲ, ನಾವು ಚಿಕ್ಕವರಿದ್ದಾಗ ಅತ್ತರೆ ಕನ್ನಡಿಯಲ್ಲಿ ಚಂದಿರನನ್ನು ತೋರಿಸಿ ಚಂದಾಮಾಮಾ ಬಂದಿದ್ದಾನೆ ನೋಡು ಎಂದು ನಮ್ಮನ್ನು ಸಮಾಧಾನ ಪಡಿಸುತ್ತಿದ್ದ ತಾಯಿಯ ಪ್ರೀತಿ ಯಾರು ತಾನೆ ಮರೆಯುವುದಕ್ಕೆ ಸಾಧ್ಯ? ಆದರೆ, ಆ ಚಂದಿರ ಕೇವಲ ಕನ್ನಡಿಯಲ್ಲಿ ಕಾಣದ ಬಿಂಬವಾಗಿರದೇ ಈಗ ಅಲ್ಲಿಯೇ ಹೋಗಿ ಸೈಟುಗಳನ್ನು ಕೊಳ್ಳುವಷ್ಟು ವಿಜ್ಞಾನ ಮುಂದುವರೆದಿದೆ. ಯಾರಿಗೆ ಗೊತ್ತು ಮುಂದಿನ ಹಲವು ವರ್ಷಗಳಲ್ಲಿ ಏಲಿಯೆನ್ ಗಳನ್ನೇ ನಮ್ಮ ಅಕ್ಕ ಪಕ್ಕದ ಅತಿಥಿಗಳಾಗಬಹುದು.
ಇನ್ನು ಏಲಿಯನ್ ಗಳನ್ನು ಕಂಡು ಹಿಡಿಯಲು ಹೊರಟ ಆ ಯೋಜನೆಯ ಕುರಿತು ಚರ್ಚಿಸೋಣ. `ಸ್ಟಾರ್ ಶಾಟ್’ ಹೆಸರಿನ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿಜ್ಞಾನಿಗಳು ಈಗಾಗಲೇ ನೀಲಿ ನಕ್ಷೆಯನ್ನು ತಯಾರಿಸಿದ್ದಾರೆ. ನಮ್ಮ ಭೂಮಿಯಿಂದ ಸುಮಾರು 25 ತ್ರಿಶತಕ ಮೈಲಿ ದೂರದಲ್ಲಿರುವ `ಆಲ್ಫಾ ಸೆಂಟೋರಿ’ ಎಂಬ ನಕ್ಷತ್ರ ಮಂಡಳಕ್ಕೆ ರೋಬೋಟ್ ಗಳನ್ನು ಕಳುಹಿಸಿ ಅಲ್ಲಿನ ನಡೆಗಳನ್ನು ಗಮನಿಸುವ ಇರಾದೆ ವಿಜ್ಞಾನಿಗಳು ವ್ಯಕ್ತ ಪಡಿಸಿದ್ದಾರೆ. ಈ ಮಂಡಳಕ್ಕೆ ಯಾವ ರಾಕೆಟ್ ಗಳೂ ತಲುಪಲು ಅಸಾಧ್ಯ. ಹಾಗೊಮ್ಮೆ ತಯಾರಿಸಿದರೂ ಅಲ್ಲಿಗೆ ತಲುಪಲು ಸುಮಾರು ಮೂವತ್ತು ಸಾವಿರ ವರ್ಷಗಳು ಬೇಕಾಗುತ್ತವೆ. ಹೀಗಾಗಿ ವಾಸ್ತವಿಕವಾಗಿ ಇದು ಅಸಾಧ್ಯದ ಮಾತು. ಆದರೆ, ಅದನ್ನೂ ಸಾಧಿಸುವುದಕ್ಕೆ ವಿಜ್ಞಾನಿ ಸ್ಟೀಫನ್ ಹಾಕಿಂಗ್ ತಂಡ ತಯಾರಾಗಿದ್ದು, ಇಲ್ಲಿಗೆ ಮಾನವ ನಿರ್ಮಿತ ಯಂತ್ರ (ರೋಬೋಟ್) ಕಳುಹಿಸಲು ಕಣ್ಣಿಗೆ ಕಾಣದಷ್ಟು ಅತೀ ಸೂಕ್ಷ್ಮವಾದ ವಾಹನವನ್ನು (ಟೈನಿ ನ್ಯಾನೋ ಕ್ರಾಫ್ಟ್) ತಯಾರಿಸಿದ್ದಾರೆ.
ಈ ನ್ಯಾನೋ ಕ್ರಾಫ್ಟ್ ನಲ್ಲಿ `ಇಂಟರ್ಸ್ಟೆಲ್ಲಾರ್ ಸೇಲ್ಬೋಟ್ಸ್’ ಎಂಬ ಚಿಕ್ಕ ರೋಬೋಟ್ ಅಳವಡಿಸಲಾಗಿದ್ದು, ಇವುಗಳಲ್ಲಿ ಸೂಕ್ಷ್ಮವಾದ ಕ್ಯಾಮೆರಾ, ಹಾಗೂ ಮಾರ್ಗ ಅನ್ವೇಷಣದ ಜಿಪಿಎಸ್ ಅನ್ನು ಅಳವಡಿಸಲಾಗಿದೆ. ಇವುಗಳ ಸಹಾಯದಿಂದ ನಕ್ಷತ್ರ ಮಂಡಳದ ಪ್ರತಿಯೊಂದು ಪ್ರದೇಶವನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದು, ಅನ್ಯ ಗ್ರಹಗಳ ಹುಡುಕಾಟದಲ್ಲಿ ತೊಡಗಿಸಿಕೊಳ್ಳಲಿದೆ.

1
ಈ ನ್ಯಾನೋ ಕ್ರಾಫ್ಟ್ ನಲ್ಲಿ ಎರಡು ಮುಖ್ಯ ಭಾಗಗಳಿರುತ್ತವೆ. ಒಂದು ಸ್ಟಾರ್ ಚಿಪ್ ಹಾಗೂ ಮತ್ತೊಂದು ಲೈಟ್ ಚಿಪ್. ಸ್ಟಾರ್ ಚಿಪ್ ಒಂದು ಚಿಕ್ಕ ಸ್ಟ್ಯಾಂಪಿನ ಗಾತ್ರವಿದ್ದು, ಸ್ಟ್ಯಾಂಪಿಗಿಂತ ಸ್ವಲ್ಪ ದಪ್ಪ ಪ್ರಮಾಣದಲ್ಲಿರುತ್ತದೆ. ಕೇವಲ ಒಂದು ಐ ಫೋನ್ ತಯಾರಿಸುವ ಖರ್ಚಿನಲ್ಲಿ ಈ ಈ ಸ್ಟಾರ್ ಚಿಪ್ ಅನ್ನು ನಾವು ನಿರ್ಮಿಸಿದ್ದೇವೆ ಎಂದು ಮಿಲ್ನರ್ ತಿಳಿಸಿದ್ದಾರೆ. ಲೈಟ್ ಚಿಪ್ ನಲ್ಲಿ ಬೆಳಕು ಹೊರಸೂಸುವ ಬೀಮರ್ ಅನ್ನು ಅಳವಡಿಸಲಾಗಿದೆ. ಇದು ಸತತವಾಗಿ ಬೆಳಕನ್ನು ಹೊರಸೂಸುತ್ತದೆ. ಇವರೆಡರನ್ನೂ ಒಂದೂಗೂಡಿಸಿ ಸಿದ್ಧಪಡಿಸುವ ಸಾಧನವೇ ನ್ಯಾನೋಕ್ರಾಫ್ಟ್ಸ್ ಅಥವಾ ಇಂಟರ್ಸ್ಟೆಲ್ಲಾರ್ ಸೇಲ್ಬೋಟ್ಸ್.
ವಿಜ್ಞಾನಿಗಳು ಇಂತಹ ಅನೇಕ ನ್ಯಾನೋ ಕ್ರಾಪ್ಟ್ ಗಳನ್ನು ತಯಾರಿಸಿ ಹತ್ತಿರದ ನಕ್ಷತ್ರ ಮಂಡಳಕ್ಕೆ ಬಿಡುವ ಯೋಜನೆಯಿದ್ದು ಇವುಗಳ ಸಹಾಯದಿಂದ ಅಲ್ಲಿನ ದೃಶ್ಯಾವಳಿಗಳನ್ನು ಗಮನಿಸುವ ಗುರಿಯನ್ನು ವಿಜ್ಞಾನಿಗಳು ಹೊಂದಿದ್ದಾರೆ. ಅಲ್ಫಾಸೆಂಟೂರಿಯಲ್ಲಿ ಭೂಮಿ ರೀತಿಯಾದ ಗ್ರಹ ಇದೆ ಎಂದು ಹಲವರ ನಂಬಿಕೆಯಾಗಿದೆ. ಈ ಯೋಜನೆ ಯಶಸ್ವಿಯಾದಲ್ಲಿ, ಅಲ್ಲಿ ಈ ಗ್ರಹ ಇದೆ ಅಥವಾ ಇಲ್ಲ ಎಂಬುದನ್ನು ಪತ್ತೆ ಹಚ್ಚುತ್ತದೆ. ಆದರೆ, ಈ ಸಾಧನವನ್ನು ತಯಾರಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಇದನ್ನು ತಯಾರಿಸಿದರೂ ಅದು ಯಶಸ್ವಿಯಾಗುತ್ತದೆ ಎಂದು ಖಾತರಿಯಿಂದ ಹೇಳಲು ಸಾಧ್ಯವಿಲ್ಲ. ಆದರೂ ವಿಜ್ಞಾನಿಗಳು ಒಂದು ಚಿಕ್ಕ ಆಸೆಯೊಂದನ್ನು ಇಟ್ಟುಕೊಂಡಿದ್ದು, ಈ ನ್ಯಾನೋ ಕ್ರಾಫ್ಟ್ ಗಳು ಕನಿಷ್ಟ ಶೇ.20ರಷ್ಟು ಬೆಳಕಿನ ವೇಗದಲ್ಲಿ ಚಲಿಸುತ್ತವೆ ಎಂದು ಅಂದಾಜಿಸಿದ್ದಾರೆ. ಈ ಚಿಕ್ಕ ಸಾಧನ ಒಂದು ಪುಟ್ಟ ಮೊಬೈಲ್ ಚಿಪ್ ನಂತಿದ್ದು, 10-12 ಅಡಿ ಗಾತ್ರವಿದೆ. ಈ ನ್ಯಾನೋ ಕ್ರಾಫ್ಟ್ ಗಳು ನಕ್ಷತ್ರ ಮಂಡಲಕ್ಕೆ ತಲುಪಲು ಸಾಧ್ಯವಾಗಿದ್ದಲ್ಲಿ, ಅಲ್ಲಿ ಸೆರೆಹಿಡಿಯಲಾದ ಚಿತ್ರಗಳನ್ನು ಮರಳಿ ಭೂಮಿಗೆ ಕಳುಹಿಸಲು ಕನಿಷ್ಠ ನಾಲ್ಕು ವರ್ಷಗಳಾದರೂ ತಗುಲುತ್ತದೆ.

2
ಇಂತಹ ಈ ಯೋಜನೆ ನಿನ್ನೆ ಮೊನ್ನೆಯದಲ್ಲ. ಇಂತಹ ಅನೇಕ ಸಾಧನಗಳನ್ನು ತಯಾರಿಸಲು ಹಲವಾರು ದಶಕಗಳ ಹಿಂದೆಯೇ ವಿಜ್ಞಾನಿಗಳು ಪ್ರಯತ್ನಿಸಿದ್ದರು ಎಂದರೆ ನೀವು ನಂಬಲೇ ಬೇಕು. ನಲ್ವತ್ತು ವರ್ಷಗಳ ಹಿಂದೆ ಕಾರ್ಲ್ ಸಾಗನ್ ಎಂಬ ವಿಜ್ಞಾನಿ ಇಂತಹದ ಸಾಧನವೊಂದನ್ನು ತಯಾರಿಸಿ ಸೌರ ಪಟದ (ಸೋಲಾರ್ ಸೇಲ್) ಹಾಗೂ ಸೌರ ಮಾರುತಗಳ ನೆರವಿನಿಂದ ಅದನ್ನು ಚಲಿಸುವಂತೆ ಯೋಜನೆಯನ್ನು ಹಾಕಿಕೊಂಡಿದ್ದರು. ಸೌರ ಪಟದ ಸಹಾಯದಿಂದ ಸ್ಪೇಸ್ಕ್ರಾಫ್ಟ್ ಅನ್ನು ಮಾಮೂಲಿ ರಾಕೆಟ್ ವೇಗಕ್ಕಿಂತ ಇನ್ನೂ ಹೆಚ್ಚಿನ ವೇಗದಲ್ಲಿ ಚಲಿಸುವಂತೆ ಮಾಡಬಹುದು ಎಂದು ವಿಜ್ಞಾನಿಗಳ ನಂಬುಗೆಯಾಗಿತ್ತು. ಇತ್ತೀಚಿನ ತಂತ್ರಜ್ಞಾನವುಳ್ಳ ಸ್ಪೇಸ್ ಕ್ರಾಫ್ಟ್ ನಲ್ಲಿ ಪಾಲಿಸ್ಟರ್ ಪದರ ಅಥವಾ ತೆಳುವಾದ ಪ್ಲಾಸ್ಟಿಕ್ ಪದರದಿಂದ ತಯಾರಿಸಲಾದ ಆಯುತಾಕೃತಿಯ ಸಾಧನದಿಂದ ಒಂದು ಚಿಕ್ಕದಾದ ಉಪಗ್ರಹವನ್ನು (ಅದಕ್ಕೆ ವಿಜ್ಞಾನಿಗಳು ಕ್ಯೂಬ್ ಸ್ಯಾಟ್ ಎಂದು ಹೆಸರಿಟ್ಟಿದ್ದಾರೆ) ಕಳುಹಿಸಬಹುದಾಗಿದೆ. ಈ ಕ್ಯೂಬ್ ಸ್ಯಾಟ್ ಸುಮಾರು 800 ಕಿಲೋ ಮೀಟರ್ ಗಳಷ್ಟು ದೂರ ಚಲಿಸಿ ನಂತರ ಉಪಗ್ರಹದಂತೆ ಕಕ್ಷೆಯ ಸುತ್ತು ಹಾಕುತ್ತದೆ. ಎರಡು ವರ್ಷಗಳ ಹಿಂದೆ ಕಾರ್ನಲ್ ವಿಶ್ವವಿದ್ಯಾಲಯದಲ್ಲಿ `ಕಿಕ್ ಸ್ಯಾಟ್’ ಎಂಬ ಸಾಧನ ತಯಾರಿಸಿದ್ದರು. ಇದರಲ್ಲಿ ಸುಮಾರು 104 ಚಿಕ್ಕ ಕ್ಯಾಮೆರಾಗಳನ್ನು ಅಳವಡಿಸಿ ಕಕ್ಷೆಯಲ್ಲಿ ಹಲವಾರು ವಾರಗಳವರೆಗೆ ತೇಲಿ ಬಿಟ್ಟು, ಸೂಕ್ತವಾದ ಮಾಹಿತಿಗಳನ್ನು ಕಲೆಹಾಕುವ ಯೋಜನೆಯೊಂದನ್ನು ನಿರೂಪಿಸಿಕೊಂಡಿದ್ದರು. ಆದರೆ, ಈ ಪ್ರಯತ್ನವು ವಿಫಲವಾಗಿದೆ. ಇದೇ ಮಾದರಿಯ ಕಾನ್ಸೆಪ್ಟ್ ಅನ್ನು ಈಗ ನಿರ್ಮಿಸಲು ಹೊರಟಿರುವ ಟೈನಿ ಕ್ರಾಫ್ಟ್ ನಲ್ಲಿ ಉಪಯೋಗಿಸಲಾಗಿದೆ.

3
2010ರಲ್ಲಿ ಜಪಾನ್ ನಲ್ಲಿ `ಇಕಾರೋಸ್’ ಎಂಬ ಕ್ರಾಫ್ಟ್ ಅನ್ನು ತಯಾರಿಸಿದ್ದು, ಇದನ್ನು ಯಶಸ್ವಿಯಾಗಿ ಶುಕ್ರ ಗ್ರಹಕ್ಕೆ ಕಳುಹಿಸಲಾಗಿತ್ತು. ಈ ಸಾಧನವು 2,000 ಚದುರ ಅಡಿ (185 ಚದುರ ಮೀಟರ್ಗಳು) ಗಾತ್ರ ಹೊಂದಿತ್ತು. ಅಮೆರಿಕದ ನಾಸಾ ಬಾಹ್ಯಾಕಾಶ ಕೇಂದ್ರವೂ ಸಹ 2011ರಲ್ಲಿ 110 ಚದುರ ಅಡಿ (10 ಚದರ ಮೀಟರ್) ಗಾತ್ರದ `ನ್ಯಾನೋ ಸೇಲ್- ಡಿ2′ ಎಂಬ ಸೋಲಾರ್ ಸೇಲ್ ಅನ್ನು ಪರೀಕ್ಷೆಗೊಳಪಡಿಸಿತ್ತು. ಆದರೆ, ಈ ಪ್ರಯತ್ನವು ಯಶಸ್ವಿಯಾಗದೇ ಭೂ ವಾತಾವರಣದಲ್ಲೇ ಸುಟ್ಟು ಬೂದಿಯಾಯಿತು.
ಆದರೆ ಈ ಯೋಜನೆಯಲ್ಲಿ ಮುಂದಾಗುವ ಎಲ್ಲಾ ಸವಾಲುಗಳನ್ನು ಗಮನಿಸಿಯೇ ಎಚ್ಚರಿಕೆಯ ಹೆಜ್ಜೆಯನ್ನು ವಿಜ್ಞಾನಿಗಳು ಇಡುತ್ತಿದ್ದಾರೆ. ಯೋಜನೆಯ ಕುರಿತು ಪ್ರತಿಕ್ರಿಯಿಸಿರುವ ವಿಜ್ಞಾನಿ ಹಾಕಿಂಗ್, `ಭೂಮಿ ಒಂದು ಸುಂದರವಾದ ಗ್ರಹ. ಆದರೆ, ಇದು ಶಾಶ್ವತವಾಗಿ ಉಳಿಯುವುದಿಲ್ಲ. ಇಂದು ಅಥವಾ ನಾಳೆ ನಾವು ಬೇರೆ ಪ್ರದೇಶಗಳಿಗೆ ವಲಸೆ ಹೋಗಲೆ ಬೇಕು. ಇದಕ್ಕಾಗಿಯೇ ನಾವು ಈ ಯೋಜನೆಯ ಮೂಲಕ ಮಹತ್ವವಾದ ಹೆಜ್ಜೆಯನ್ನಿಡುತ್ತಿದ್ದೇವೆ’ ಆ ಹೆಜ್ಜೆಗೆ ಸ್ಟಾರ್ಶಾಟ್ ಮುನ್ನುಡಿ ಬರೆಯಲಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಯೋಜನೆ ಸಫಲವಾಗುತ್ತದೋ ಇಲ್ಲವೋ ಎಂದು ಇನ್ನು ಸ್ವಲ್ಪ ವರ್ಷಗಳ ಕಾಲ ಕಾದು ನೋಡಬೇಕು. ಆದರೆ, ಈ ಯೋಜನೆಯು ಸಫಲಗೊಂಡು ವಿಜ್ಞಾನಕ್ಕೆ ಹೊಸ ಮುನ್ನುಡಿ ಬರೆಯಲಿ ಎಂಬುದೇ ನಮ್ಮೆಲ್ಲರ ಆಶಯ.

  • ವಿಶ್ವನಾಥ್ ಶೇರಿಕಾರ್.

POPULAR  STORIES :

ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video

ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?

ಕಾಮನ್ ಮ್ಯಾನ್ ಅಮಾಂಗ್ ದ ಅನ್ ಕಾಮನೆಸ್ಟ್..!

ಹೆಚ್ ಎಂ ರೇವಣ್ಣನಿಗೆ ಹತ್ತು ಕೋಟಿ ಕೇಳ್ದಾ..!? ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದು ಯಾರು..!?

ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?

6-5=2 ಚಿತ್ರತಂಡದಿಂದ ಮತ್ತೊಂದು ಪ್ರಯತ್ನ, ಕನ್ನಡದ ಬಹುನಿರೀಕ್ಷಿತ ಹಾರರ್ ಥ್ರಿಲ್ಲರ್ ಮೂವಿ.

ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!

ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!

ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...