ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ

Date:

ಜೀವನದಲ್ಲಿ ತನ್ನ ಕನಸನ್ನು ಯಾವುದೋ ಅನಿವಾರ್ಯ ಕಾರಣಕ್ಕಾಗಿ ತ್ಯಾಗ ಮಾಡೋ ಪರಿಸ್ಥಿತಿ ಬಂದಾಗ ಸೋತು ಹೋದವರೆಷ್ಟೋ ಮಂದಿ! ಯಾವುದೋ ಒಂದು ದುರ್ಬಲ ಕ್ಷಣ ನಮ್ಮ ಕನಸನ್ನು ಕೆಲವೇ ಕೆಲವು ಸೆಕೆಂಡುಗಳಲ್ಲಿ ನುಚ್ಚು ನೂರಾಗಿಸುತ್ತದೆ, ನಮ್ಮನ್ನು ಹತಾಶೆಯತ್ತ ತಳ್ಳುತ್ತದೆ. ಆದ್ರೆ,ಇದು ಕೇವಲ ಅಂಜುಬುರುಕರಿಗೆ ಹಾಗೂ ದುರ್ಬಲ ಮನಸ್ಸಿನೋರಿಗೆ ಮಾತ್ರ ಅನ್ವಯಿಸೋ ಮಾತುಗಳು, ಡಾ! ಸೀಮಾ ರಾವ್ ತರಹದ ವ್ಯಕ್ತಿಗಳಿಗಲ್ಲ.
ತನ್ನ ತಂದೆ, ಪ್ರೊಫೆಸರ್.ರಮಾಕಾಂತ್ ಸಿನಾರಿ, ಒಬ್ಬರಾಜಕೀಯ ಕಾರ್ಯಕರ್ತ ಇವರ ಜೊತೆಯಲ್ಲಿ ಹಾಗೂ ದೇಶ ಭಕ್ತಿಯ ವಾತಾವರಣದಲ್ಲಿ ಬೆಳೆದ ಈಕೆಗೆ ಮೊದಲಿನಿಂದಲೂ ದೇಶ ಸೇವೆಯ ಕಡೆಗೆ ವಿಶೇಷ ಒಲವು. ದೇಶದ ಹಿತಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಉತ್ಕಟ ಇಚ್ಚೆ. ಪೋರ್ಚುಗಲ್ ನ ದಬ್ಬಾಳಿಕೆಯಿಂದ ಗೋವಾವನ್ನು ಮುಕ್ತಗೊಳಿಸುವಲ್ಲಿ ಈಕೆಯ ತಂದೆ ಸಿನಾರಿಯವರ ಪಾತ್ರ ಮಹತ್ತರವಾದದ್ದು. ದೊಡ್ಡವಳಾಗುತ್ತಿದ್ದಂತೆ, ದೇಶದ ಸ್ವಾತಂತ್ರ್ಯ ಹೋರಾಟ ಸಂಬಂಧಿ ಕಥೆಗಳನ್ನು ಕೇಳುತ್ತಾ ಬೆಳೆದಾಕೆ ಈ ಸೀಮಾ.
ಸೀಮಾ 16 ವರುಷದಲ್ಲೇ ತನ್ನ ಭಾವೀ ಪತಿಯನ್ನು ಭೇಟಿ ಮಾಡಿದ್ದಳಂತೆ. ಮೇಜರ್ ದೀಪಕ್ ರಾವ್ ತನ್ನ 12 ನೇ ವಯಸ್ಸಿನಲ್ಲೇ ಮಾರ್ಷಿಯಲ್ ಆರ್ಟ್ಸ್ ನಲ್ಲಿ ತರಭೇತಿ ಪಡೆಯುತ್ತಿದ್ದು, ಆಕೆಯ ರಾಷ್ಟ್ರ ಪ್ರೇಮವನ್ನು ನೋಡಿ,ಈತನೇ ಆಕೆಯನ್ನು ಸೇನೆಯ ಕಡೆಗೆ ಸೆಳೆದನಂತೆ. ತುಂಬು ವಿದ್ಯಾರ್ಹತೆ ಹೊಂದಿದ ಇಬ್ಬರೂ ಡಾಕ್ಟರ್, ಈಗ ಸೈನಿಕರಿಗೆ ತರಭೇತಿ ನೀಡುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಈಕೆಯ ಜೀವನ ಯಾನ ತುಂಬಾ ಪ್ರಯಾಸದ್ದಾಗಿತ್ತು. ನಿಜ!ಯಾವುದೇ ಯಶಸ್ಸು ಸುಲಭವಾಗಿ ಮನುಷ್ಯನಿಗೆ ಲಭಿಸುವಂತದ್ದಲ್ಲ ಅಲ್ಲವೇ? ಇದನ್ನು ನಾವು ಸೀಮಾಳನ್ನು ನೋಡಿಯೋ ತಿಳಿಯಬಹುದು. ಅವರ ಮದುವೆಯ ಆರಂಭದ ದಿನಗಳಲ್ಲಿ ಅವರಿಗೆ ಅನೇಕ ತರಹದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತಂತೆ. ಅವುಗಳಲ್ಲಿ ಆರ್ಥಿಕ ಹಾಗೂ ದೈಹಿಕ ಸಮಸ್ಯೆಯನ್ನು ತೀರಾ ಅನುಭವಿಸಬೇಕಾಗಿ ಬಂತು ಅನ್ನುತ್ತಾರೆ ಸೀಮಾ.ಹತ್ತು ಹಲವು ಬೇರೆ ಬೇರೆ ಜಾಗಗಳಿಗೆ ಪ್ರಯಾಣಿಸಬೇಕಾಗಿ ಬಂದಾಗ,ಅಕೆಗೆ ತನ್ನ ತಂದೆಯವರ ಅಂತ್ಯ ಕ್ರಿಯೆಯಲ್ಲೂ ಭಾಗವಹಿಸಲಾಗಲಿಲ್ಲವಂತೆ, ದುರಾದೃಷ್ಟವೇ ಸರಿ!ಕೊನೆಗಾಲದಲ್ಲಿ ತಂದೆಯ ಮುಖ ದರ್ಶನವೂ ಆಕೆಗೆ ಲಭಿಸಲಿಲ್ಲ. ಅವಳ ಕಠಿಣ ಕೆಲಸದ ಸಂದರ್ಭದಲ್ಲಿ ಎರಡು ಬಾರಿ ನಡೆದ ಅವಘಡ ದಿಂದ ಆಕೆಗೆ ಬೆನ್ನು ಮೂಳೆ ಮುರಿತ(Vertebral Fracture)ಸಂಭವಿಸಿದ ಕಾರಣದಿಂದ, ಹಲವಾರು ತಿಂಗಳುಗಳ ವರೆಗೆ ಆಕೆ ತನ್ನ ನೆನಪಿನ ಶಕ್ತಿಯನ್ನೇ ಕಳಕೊಂಡಿದ್ದಳಂತೆ. ದಂಪತಿಗಳು ಈ ಕಾರಣಕ್ಕೆ ತಮಗೆ ಮಕ್ಕಳಾಗುವುದು ಬೇಡವೆಂದು ನಿರ್ಧರಿಸಿ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದಾರಂತೆ.
ಛಳಿಗಾಲ ಬರುತ್ತಿದ್ದಂತೆ, ವಸಂತ ಮಾಸ ದೂರವಾಗಲು ಸಾಧ್ಯವೇ ಎಂಬಂತೆ,ಯಾವ ಸೋಲುಗಳೂ ಸೀಮಾಳ ಉತ್ಸಾಹವ ‍ನ್ನಾಗಲೀ ಹಾಗೂ ಅವಳ ಪತಿಯ ನಿರಂತರ ಸಹಾಕಾರವನ್ನಾಗಲೀ ಹಿಮ್ಮೆಟ್ಟಿಸಲಿಲ್ಲ.ಸೀಮಾ ಮಹತ್ತರವಾದ ಯಶಸ್ಸನ್ನು ಸಾಧಿಸಿಯೇ ಬಿಟ್ಟಳು.
ಅವಳು ಮಿಲಿಟರಿ ಮಾರ್ಷಿಯಲ್ ಆರ್ಟ್ಸ್ ನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದು 7ನೇ ರ್ಯಾಂಕ್ ಗಿಟ್ಟಿಸಿದ್ದಲ್ಲದೆ, ಭಾರತದ ಏಕೈಕ ಮಹಿಳಾ ಕಮಾಂಡರ್ ಟ್ರೈನರ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಪತಿಯ ಜೊತೆಗೂಡಿ ಆಕೆ,ಕಳೆದ 20 ವರುಷದಿಂದೀಚೆಗೆ ಯಾವುದೇ ಶುಲ್ಕವಿಲ್ಲದೆ ಕ್ಲೋಸ್ ಕ್ವಾರ್ಟರ್ ಕಂಬಾಟ್(CQC) ಸೈನಿಕರಿಗೆ ತರಬೇತಿ ನೀಡುತ್ತಿದ್ದಾರೆ.Close Quarters Combat ಇದೊಂದು ವಿಧವಾದ ಯುದ್ದವಾಗಿದ್ದು ಇಲ್ಲಿ ಅತೀ ಸಣ್ಣ ಸೇನೆಯು ತಮ್ಮ ಕೈಗಳಿಂದ ಅಥವಾ ಖಾಸಗಿ ಆಯುಧಗಳಾದ ಕತ್ತಿ, ಖಡ್ಡ್ಗ ಮೊದಲಾದವುಗಳಿಂದ ಮಿಂಚಿನ ವೇಗದಲ್ಲಿ ಶತ್ರುಗಳ ಜೊತೆಗೆ ಹೋರಾಡುವುದಾಗಿದೆ. ಈ ವಿಧಾನವನ್ನು ಇವರು ನವೀಕರಿಸಿ ಇದನ್ನು Advanced Commando Combato System ಎಂದು ಹೆಸರಿಸಲಾಗಿದೆ. ಬ್ರೂಸ್ ಲೀ ಇಂದ ಸ್ಥಾಪಿಸಲ್ಪಟ್ಟ ಜೀತ್ ಕುನ್ ಡೋ(Jeet Kune Do)ದಿಂದ ಅರ್ಹತೆ ಹೊಂದಿದ ಈ ವಿಧದ ಮಾರ್ಷಿಯಲ್ ಆರ್ಟ್ನಲ್ಲಿ ಪ್ರಪಂಚದಲ್ಲೇ ಕೇವಲ 10 ಮಹಿಳೆಯರು ಮಾತ್ರ ಇದ್ದಾರೆ.ಇವರಲ್ಲಿ ಸೀಮಾಳೂ ಒಬ್ಬಳು ಎಂದು ಹೇಳಲು ನಮಗೆ ಹೆಮ್ಮೆ ಎನ್ನಿಸುತ್ತದೆ.ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುವುದನ್ನು ಗಮನಿಸಿದ ಸೀಮಾ ಡೇರ್ (Defence Against Rape and Eve Teasing),ಅನ್ನೋ ಹೊಸ ಕ್ರೈಮ್ ಯೋಜನೆಯನ್ನು ,ಮಹಿಳೆಯರಿಗಾಗಿ ಆಯೋಜಿಸಿದರು.ಇದು ಹೆಣ್ಣು ಮಕ್ಕಳಿಗೆ ದೈಹಿಕವಾಗಿಯೂ,ಮಾನಸಿಕವಾಗಿಯೂ ಪ್ರಭಲತೆಯನ್ನು ನೀಡುವುದಲ್ಲದೆ,ಸಮಾಜದ ಕೆಟ್ಟ ಹುಳಗಳನ್ನು ಸದೆಬಡಿಯಲು ಸಹಾಯ ಮಾಡುತ್ತದೆ.

Seema_Rao_training_the_forces_on_Rao_System_of_Reflex_Shooting
ಇಲ್ಲಿಯವರೆಗೆ ಇವರು 1,500 ಸೈನಿಕರನ್ನು ತರಭೇತಿಗೊಳಿಸಿದ್ದಾರೆ. ಮಲೇಷ್ಯಾದ ವರ್ಲ್ಡ್ ಪೀಸ್ ಅವಾರ್ಡ್ ಹಾಗೂ ಅಮೇರಿಕಾದ ಅಧ್ಯಕ್ಷರ ವಾಲಂಟಿಯರ್ಸ್ ಸರ್ವಿಸ್ ಅವಾರ್ಡ್ ಲಭಿಸಿದೆ. ಆಕೆಯ ಸಾಹಸ ಕೇವಲ ಇಷ್ಟಕ್ಕೇ ಸೀಮಿತವಾಗದೆ ಆಕೆ ಒಬ್ಬ ಸ್ಕೂಬಾ ಡ್ರೈವರ್, ಯುದ್ದ ಸೇನೆಯ ಶೂಟಿಂಗ್ ಇನ್ಸ್ ಟ್ರಕ್ಟರ್,ಫೈಯರ್ ಫೈಟರ್,ರೋಕ್ ಕ್ಲೈಂಬರ್ ಮೆಡಲಿಸ್ಟ್ ಹಾಗೂ ಯುದ್ದ ಸಂಬಂದಿ ಬರೆದ ಅನೇಕಪುಸ್ತಕಗಳ ಲೇಖಕಿ ಯೂ ಆಗಿದ್ದಾಳೆ.
“ಒಬ್ಬನ ತಲೆಯ ಮೇಲಿಟ್ಟ ಸೇಬನ್ನು ನಾನು ಆ ವ್ಯಕ್ತಿಗೆ ಯಾವುದೇ ಹಾನಿಯೂ ಸಂಭವಿಸದಂತೆ ಶೂಟ್ ಮಾಡಬಲ್ಲೆ ಹಾಗೂ ನನ್ನ ತಲೆಗೇ ನೇರವಾಗಿ ಗುರಿ ಇಟ್ಟ ಮಿಂಚಿನ ವೇಗದಲ್ಲಿ ಬರೋ ಬುಲೆಟ್ ನ ನಾನು ‍ಯಾವುದೇ ಪ್ರಯಾಸವೇ ಇಲ್ಲದೆ ಸುರಕ್ಷಿತವಾಗಿ ತಪ್ಪಿಸಿಕೊಳ್ಳಬಲ್ಲೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ಸೀಮಾ.

Dr. Seema Rao Giving Commando training the Indian forces ARMY SPECIAL FORCES NAVY AIRFORCE ARMY (4)
ನಮ್ಮ ದೇಶ ಕಂಡ ಅದ್ಭುತ ಮಹಿಳೆ ಈ ಸೀಮಾ ರಾವ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.ನಮ್ಮ ಹೆಣ್ಣು ಮಕ್ಕಳಿಗೆ ಇವರಿಗಿಂತ ಸ್ಪೂರ್ಥಿ ಬೇಕೇ???

 

  • ಸ್ವರ್ಣಲತ ಭಟ್

POPULAR  STORIES :

ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.

ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!

ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???

ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!

ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.

ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!

ತಿಮ್ಮಪ್ಪನ ಉರುಳು ಸೇವೆಗೆ ಆಧಾರ್ ಕಡ್ಡಾಯ..!

ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!

Share post:

Subscribe

spot_imgspot_img

Popular

More like this
Related

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...

ನವರಾತ್ರಿ ಎಂಟನೇ ದಿನ – ಮಹಾಗೌರಿ !

ನವರಾತ್ರಿ ಎಂಟನೇ ದಿನ – ಮಹಾಗೌರಿ ! ದೇವಿಯ ಹಿನ್ನಲೆ ನವರಾತ್ರಿಯ ಎಂಟನೇ ದಿನ...

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...