ಸೆಹ್ವಾಗ್ ರಿಟೈರ್ಡ್ ಆದ್ರು… ಆಗಿಲ್ಲ.. ಆದ್ರು…! ಜಗಮೆಚ್ಚಿದ ಕ್ರಿಕೆಟಿಗನಿಗೆ ಇದೆಂಥಾ ಅವಮಾನ..!?

admin
4 Min Read

ಅವರು ಬ್ಯಾಟ್ ಹಿಡಿದು ಅಂಗಣದತ್ತ ಬರ್ತಾ ಇದ್ದಾರೆಂದರೇ ಎದುರಾಳಿ ತಂಡದ ಬೌಲರ್ ಗಳಿಗೆ ಚಳಿ-ಜ್ವರ ಶುರುವಾಗಿ ಬಿಡ್ತಿತ್ತು..! ಏಕದಿನ, ಟೆಸ್ಟ್, ಟಿ20 ಅಂತೆಲ್ಲಾ ಅವರಿಗೆ ಬೇಧವಿರ್ಲಿಲ್ಲ..! ಕ್ರಿಕೆಟಿನ ಎಲ್ಲಾ ಪ್ರಕಾರಗಳೂ ಒಂದೇ ಅನ್ನೋ ಮನೋಭಾವ ಅವರದ್ದು..! ಬ್ಯಾಟ್ ಇರುವುದೇ ಚೆಂಡನ್ನು ದಂಡಿಸಿ ಬೌಂಡರಿ ಗೆರೆ ದಾಟಿಸಲು..! ಬೌಲರ್ ಎಸೆದ ಎಸೆತ ನೇರವಾಗಿ ಬೌಂಡರಿ ತಲುಪಲೇ ಬೇಕು…! ಚೆಂಡನ್ನು ಬೌಂಡರಿ ಗೆರೆ ದಾಟಿಸು… ಅದು ಸಾಧ್ಯವಿಲ್ಲವೆಂದಾದರೆ ನೀ ಫೆವಿಲಿಯನ್ನತ್ತ ಮುಖಮಾಡು ಅನ್ನೋ ಸಿದ್ಧಾಂತ ಅವರದ್ದು..! ಇವರು ಬ್ಯಾಟ್ ಹಿಡಿದು ಅಂಗಣದಲ್ಲಿದ್ದಷ್ಟು ಸಮಯವಂತೂ ಅಭಿಮಾನಿಗಳಿಗೆ ಹೊಡೆಬಡೆಯ ಆಟದ ಸವಿ ಉಣಬಡಿಸ್ತಾ ಇದ್ರು…! ಅತೀ ನಿಧಾನವಾಗಿ ಎಸೆದ ಚೆಂಡನ್ನೂ ಬೌಂಡರಿಗೆ ಅಟ್ಟುತ್ತಿದ್ದ ಇವರಿಗೆ ಅತೀ ವೇಗದ ಎಸತವನ್ನೂ ಅಷ್ಟೇ ವೇಗವಾಗಿ ಬೌಂಡರಿಗೆ ಅಟ್ಟುವುದು ಗೊತ್ತಿತ್ತು..! ಯಾರ್ಕರ್ ಆಗಿರಲಿ.., ಬೌನ್ಸರ್ರೇ ಆಗಿರಲಿ ಎಲ್ಲಾ ರೀತಿಯ ಎಸೆತಗಳನ್ನು ಲೀಲಾಜಾಲವಾಗಿ ಸಿಕ್ಸರ್ ಎತ್ತುವುದು ಈ ಆಟಗಾರನಿಗೆ ಮಾತ್ರ ಗೊತ್ತಿರೋದು..! ಈ ಆಟಗಾರನನ್ನು ಹೀಗೇ ಔಟ್ ಮಾಡಬಹುದೆಂದು ವಿಶ್ವದ ಯಾವ ಒಬ್ಬ ಬೌಲರ್ಗಳಿಗೂ ಕಂಡು ಕೊಳ್ಳಲು ಸಾಧ್ಯವಾಗಿಲ್ಲ..! ಯಾರ್ಕರ್ ಗೆ ಸಿಕ್ಸ್ ಎತ್ತುತ್ತಿದ್ದ ಈ ಆಟಗಾರ ಎಲ್ಲರೂ ಸಿಕ್ಸ್ ಎತ್ತುವಂತಹ ಫುಲ್ಟಾಸ್ ಎಸತಕ್ಕೆ ಔಟ್ ಆಗಿದ್ದೂ ಇದೆ..! ಸೋ.., ಇವರು ಎಂಥಾ ಎಸೆತಕ್ಕೆ ಔಟ್ ಆಗ್ತಾರೆ ಅನ್ನೋದು ಯಾರಿಗೂ ತಿಳಿದುಕೊಳ್ಳಲು ಇಂದಿಗೂ ಆಗಿಲ್ಲ..! ಈ ಆಟಗಾರ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಆಗುವ ಸಮಯ ಬಂದಿದ್ದರೂ ಈ ಆಟಗಾರನ ವೀಕ್ನೆಸ್ ಇದೇ ಎಂದು ಯಾವ ಒಬ್ಬ ಕ್ರಿಕೆಟ್ ಪಂಡಿತರೂ ಹೇಳಲು ಸಾಧ್ಯವಾಗಿಲ್ಲ..!

Contents
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಕೆಲವರು ಈ ಆಟಗಾರನ ವೀಕ್ನೆಸ್ ಅಂದ್ರೆ ಸ್ಕ್ರೀಸ್ನಲ್ಲಿ ಹೆಚ್ಚುಹೊತ್ತು ನಿಲ್ಲದೇ ಇರುವುದೆಂದು ಹೇಳ್ತಾರೆ…! ಆದ್ರೆ ಹಾಗೆಂದು ಟೀಕೆ ಮಾಡುವವರೇ ಈ ಆಟಗಾರ ಹೊಡೆ ಬಡೆ ಆಟ ಆಡ್ದೇ ಆಮೆಗತಿಯಲ್ಲಿ ರನ್ ಗಳಿಸಿದ್ರೆ ಒಪ್ಪಲ್ಲ..! ಯಾಕಂದ್ರೆ ಎಲ್ಲರಿಗೂ ಆತ ಹಾಗೇ ವೇಗವಾಗಿ ರನ್ ಗಳಿಸುವುದೇ ಇಷ್ಟವಾಗಿತ್ತು..! ಎಲ್ಲದಕ್ಕೂ ಒಂದು ಕಾಲ ಬಂದೇ ಬರುತ್ತೆ..! ಒಂದು ಕಾಲದಲ್ಲಿ ಸದ್ದು ಮಾಡಿದ್ದ ಈ ಆಟಗಾರನ ಬ್ಯಾಟ್ ನಿಶಬ್ಧವಾದಾಗ ತಂಡದಿಂದಲೂ ಹೊರಗುಳಿದಿದ್ದು ಇತಿಹಾಸ..! ತಂಡದಿಂದ ಹೊರಗುಳಿಯುವುದು, ದೇಶಿಯ ಟೂರ್ನಿಯಲ್ಲಿ ಅಬ್ಬರಸಿ ಮತ್ತೆ ತಂಡಕ್ಕೆ ವಾಪಸ್ಸು ಬರುವುದು ಈ ಆಟಗಾರನಿಗೆ, ನಾವು ಫೇಸ್ ಬುಕ್ ಲಾಗ್ ಇನ್, ಲಾಗ್ ಔಟ್ ಮಾಡಿದಷ್ಟೇ ಸುಲಭವಾಗಿತ್ತು..! ಇವರು ತಂಡದಲ್ಲಿದ್ದರೆ ಆಡಿಯೇ ಆಡುತ್ತಾನೆಂದು ನಂಬಿಕೊಂಡು ಇರಲು ಸಾಧ್ಯ ಆಗ್ತಾ ಇರ್ಲಿಲ್ಲ..! ಆದ್ರೆ ಆಡಿದರೆಂದರೆ ಮುಗಿದೇ ಹೋಯಿತು.. ಎದುರಾಳಿ ತಂಡದ ಎದೆಬಡಿತ ನಿಂತೇ ಹೋಗ್ತಾ ಇತ್ತು..! ಎನಿವೇ, ಇವತ್ತು ಆ ಆಟಾಗರ ನಿವೃತ್ತಿ ಘೋಷಿಸಿ ಬಿಟ್ಟಿದ್ದಾರೆ..! ಇನ್ನು ಇವರ ಆಟ ನೋಡಲು ಹಳೆಯ ಕ್ರಿಕೆಟ್ ಪಂದ್ಯಗಳನ್ನು ನೋಡಬೇಕಷ್ಟೇ..! ಒನ್ ಅಂಡ್ ಓನ್ಲಿ “ನಜಾಫಗಡದ ನವಾಬ”.., ಎಲ್ಲರ ನೆಚ್ಚಿನ ವೀರೂ ಅಲಿಯಾಸ್ ವೀರೆಂದ್ರ ಸೆಹ್ವಾಗ್..! ನಮ್ಮೆಲ್ಲರ ನೆಚ್ಚಿನ ಕ್ರಿಕೆಟ್ ಆಟಗಾರ ಎಲ್ಲಾಪ್ರಕಾರದ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ..! ಹರಿಯಾಣದ ರೈತರೊಬ್ಬರ ಮಗನಾಗಿ ಹುಟ್ಟಿ ಇಡೀ ವಿಶ್ವವೇ ಹೆಮ್ಮೆಪಡುವ ಕ್ರಿಕೆಟಿಗನಾಗಿ ಬೆಳೆದ ಸೆಹ್ವಾಗ್ ನಿಮ್ಮನ್ನು ನಾವೆಲ್ಲಾ ಮಿಸ್ ಮಾಡಿಕೊಳ್ತಾ ಇದ್ದೀವಿ..! ವಿ ಮಿಸ್ ಯೂ ಸೆಹ್ವಾಗ್.. ಬೆಳಿಗ್ಗೆಯಷ್ಟೇ ನಿವೃತ್ತಿ ಆಗಲ್ಲ ಎಂದಿದ್ದ ನೀವು ನಮ್ಮಲ್ಲಿ ಸಂತೋಷ ಮನೆ ಮಾಡಿಸಿದ್ರಿ.. ಈಗ ನೀವೇ ನಿವೃತ್ತಿ ಹೇಳೋ ಮೂಲಕ ನಮ್ಮಲ್ಲೊಂದು ಶೂನ್ಯಭಾವವನ್ನು ಮೂಡಿಸಿದ್ದೀರಿ,..! ನಿಮ್ಮ ಹುಟ್ಟುಹಬ್ಬದ ದಿನವೇ ಈ ನಿರ್ಧಾರವೇಕೋ ಗೊತ್ತಾಗ್ತಾ ಇಲ್ಲ..! ಒಂದಂತೂ ತುಂಬಾ ಬೇಜಾರ್ ಆಗ್ತಾ ಇದೆ.. ಸೆಹ್ವಾಗ್ ಎಂಥಹಾ ಅದ್ಭುತ ಆಟಗಾರ…! ಇವರಿಗೆ ಬಿಸಿಸಿಐ ಕೊನೇಪಕ್ಷ ಒಂದೇ ಒಂದು ವಿದಾಯದ ಪಂದ್ಯವನ್ನು ಆಡಿಸಬೇಕಿತ್ತು..! ನಿನ್ನೆಯೇ ಇವರ ನಿವೃತ್ತಿ ಸೂಚನೆ ಗೊತ್ತಾಗಿತ್ತು..! ಆಗಲೇ ಬಿಸಿಸಿಐ ಸೆಹ್ವಾಗ್ ಜೊತೆ ಮಾತುಕತೆ ನಡೆಸಬೇಕಿತ್ತು…! ಬೀಳ್ಕೊಡಗೆ ಪಂದ್ಯ ಆಡಿಸದೇ ಇವರಿಗೆ ಅವಮಾನ ಮಾಡಿದಂತಾಗಿದೆ..! ಛೇ.. ಕೊನೆಗೂ ಸೆಹ್ವಾಗ್ ರಿಟೈರ್ಡ್ ಆದ್ರು..ಆಗಿಲ್ಲ.. ಆದ್ರು..! ರಿಟೈರ್ಡ್ ಆಗಿಯೇ ಬಿಟ್ಟರು..!
ಎನಿವೇ.. ಸೆಹ್ವಾಗ್ ನಿಮ್ಮನ್ನೆಂದೂ ನಾವು ಮರೆಯುವುದಿಲ್ಲ…! ಯುವ ಕ್ರಿಕೆಟಿಗರಿಗೆ ನೀವೆಂದೂ ದಾರಿದೀಪ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

ಈ ನಮ್ಮ ಕನ್ನಡದ ಆಟೋಡ್ರೈವರ್ “ಪ್ರಾಮಾಣಿಕ” ಶ್ರೀಮಂತ..! ಕನ್ನಡದ ಈ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!

ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!

`ಫೋರ್ಬ್ಸ್’ ನಿಯತಕಾಲಿಕೆ ಬಿಡುಗಡೆ ಮಾಡಿರೋ “ಯೂಟ್ಯೂಬ್” ಶ್ರೀಮಂತರು..!

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

Share This Article
Leave a Comment