ಸಾಧನೆಗೆ ವಯಸ್ಸಿನ ಹಂಗಿಲ್ಲ. ಸಾಧಿಸುವ ಛಲವಿರುವವರು ಇಳಿವಯಸ್ಸಲ್ಲೂ ಏನಾದರೊಂದನ್ನು ಸಾಧಿಸಿ ನಮಗೆಲ್ಲಾ ಪ್ರೇರಣೆ ಆಗಿದ್ದಿದೆ..! ಈಗ ಸೈಯದ್ ಸಜ್ಜನ್ ಅಹಮ್ಮದ್ ಸರದಿ. 63 ವರ್ಷದ ಸಜ್ಜನ್ರ ಯಶೋಗಾಥೆ ನಮಗೆಲ್ಲಾ ಪ್ರೇರಣೆ..!
ಸೈಯದ್ ಸಜ್ಜನ್ ಅಹಮ್ಮದ್ ಹುಟ್ಟಿದ್ದು ಕೋಲಾರದಲ್ಲಿ. ನೆಲೆಸಿರೋದು ಬೆಂಗಳೂರಲ್ಲಿ. ದ್ವಿತೀಯ ಪಿಯುಸಿಯನ್ನು ಅರ್ಧಕ್ಕೆ ಬಿಟ್ಟ ಇವರು ಹಣ್ಣು ಮಾರುವವನಾಗಿ ತನ್ನ ವೃತ್ತಿ ಬದುಕನ್ನು ಆರಂಭಿಸ್ತಾರೆ..! ನಂತರ ಎಲಕ್ಟ್ರಾನಿಕ್ಸ್ ವಸ್ತುಗಳ ರಿಪೇರಿ ಅಂಗಡಿಯನ್ನು ತೆರೆಯುತ್ತಾರೆ. ಟ್ರಾನ್ಸ್ಮೀಟರ್, ಟೇಪ್ ಕಾರ್ಡರ್, ಟೆಲಿವಿಷನ್ ಸೆಟ್ಸ್ ಮತ್ತು ಆ್ಯಂಟೆನಾಗಳನ್ನು ರಿಪೇರಿ ಮಾಡ್ತಾ ಇದ್ದರು. ನಂತರದಲ್ಲಿ ಕಂಪ್ಯೂಟರನ್ನೂ ರಿಪೇರಿ ಮಾಡಲು ಶುರುಮಾಡ್ತಾರೆ.
2002ರ ಹೊತ್ತಿಗೆ ಇವರಿಗೆ 50 ತುಂಬಿದಾಗ “ನಾನು ಏನಾದರೊಂದನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡ್ಬೇಕು.. ಇನ್ನೂ ವಯಸ್ಸಾಗುವ ಮೊದಲು ಅದನ್ನು ಸಾಧಿಸಬೇಕೆಂದು ನಿರ್ಧಾರ ಮಾಡಿದ್ರು..!
ಅಹಮ್ಮದ್ ಆರಂಭದಲ್ಲಿ ದ್ವಿಚಕ್ರವಾಹನವೊಂದನ್ನು ಎಲಕ್ಟ್ರಾನಿಕ್ ಪವರ್ನಿಂದ ಚಲಿಸುವಂತೆ ಮಾಡ್ತಾರೆ..! ಅದರ ಯಶಸ್ಸಿನ ನಂತರ ಕ್ರಮವಾಗಿ ತ್ರಿ-ವೀಲರ್, ಫೋರ್-ವೀಲರ್ ವಾಹನವನ್ನು ಎಲಕ್ಟ್ರಾನಿಕ್ ಪವರ್ನಿಂದ ಚಲಿಸುವುದನ್ನು ಸಾಧ್ಯವಾಗಿಸ್ತಾರೆ..! ಇವರಿಗೆ 2006ರಲ್ಲಿ ಪರಿಸರ ರಕ್ಷಣೆಗಾಗಿ ನೀಡುವ ಪ್ರಶಸ್ತಿಯೂ ಕರ್ನಾಟಕ ಸರ್ಕಾರದಿಂದ ಇವರಿಗೆ ದೊರೆತಿದೆ.
ಈಗ ಇವರು ಮತ್ತೊಂದು ಹೊಸ ವಾಹನದೊಂದಿಗೆ ಬಂದಿದ್ದಾರೆ..! 63 ವರ್ಷದ ಇವರು ಸ್ವತಃ ಸೋಲರ್ ಕಾರೊಂದನ್ನು ತಯಾರಿಸಿದ್ದಾರೆ..! ಈ ಕಾರಿನಲ್ಲಿ ಬೆಮಗಳೂರಿನಿಂದ ದಹಲಿಗೆ ಹೋಗಿದ್ದಾರೆ..! 3000 ಕಿಲೋಮೀಟರ್ ದೂರ ತನ್ನ ಸೋಲರ್ ಕಾರಿನಲ್ಲಿ ಪ್ರಯಾಣಿಸಲು ಬರೊಬ್ಬರಿ 30 ದಿನವನ್ನು ತೆಗೆದುಕೊಂಡಿದ್ದಾರೆ..! ಇವರ ತಮ್ಮ ಕಾರಿನಲ್ಲಿ ಇಲ್ಲಿಯವರೆಗೆ ದೇಶದಾದ್ಯಂತ 1.1 ಲಕ್ಷ ಕಿಲೋಮೀಟರ್ ದೂರ ಪ್ರಯಾಣಿಸಿದ್ದಾಗಿ ಹೆಳುತ್ತಾರೆ..! ನಾಡಿದ್ದು ಸೋಮವಾರ `ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೇರ್ನಲ್ಲಿ ಭಾಗವಹಿಸಲಿದ್ದಾರೆ..! 63 ವರ್ಷದಲ್ಲೂ ಉತ್ಸಾಹ ಕುಂದದದ ಇವರು ಯುವಕರಿಗೆ ಪ್ರೇರಣಾಶಕ್ತಿ
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!
ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?
ಇವರಿಗೆ 25 ವರ್ಷಗಳ ನಂತರ ಅಮ್ಮ ಸಿಕ್ಕಳು..! ಗೂಗಲ್ ಅರ್ಥ್ ಸಹಾಯದಿಂದ ತಾಯಿಯನ್ನು ಹುಡುಕಿದ ಮಗ..!
ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!
ಬರೀ ಪೈರಸಿ ಸಿನಿಮಾಗಳನ್ನು ನೋಡ್ಕೊಂಡು ಕನ್ನಡ ಸಿನಿಮಾಗಳ ವಿರುದ್ಧವೇ ಮಾತಾಡಿದ್ರೆ ಹೇಗೆ ಸ್ವಾಮಿ..
ಇವರು ಎಂಬಿಬಿಎಸ್ ಸ್ಟೂಡೆಂಟ್, ಆಟೋ ಡ್ರೈವರ್..! ಇವರು ಉಚಿತ ಆಟೋ ಸೇವೆ ಕೊಡ್ತಾರೆ ಯಾಕೆ ಗೊತ್ತಾ..?