ವಯಸ್ಸು 58…ಮಕ್ಕಳ ಆಶ್ರಯದಲ್ಲಿ ಸುಖವಾಗಿ ಜೀವನ ಕಳೆಯುವ ವಯಸ್ಸಿದು. ಆದರೆ, ಈಕೆ ಯಾರ ಹಂಗು ಇಲ್ಲದೇ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದರೆ. ಆಟೋ ಓಡಿಸಿ ಬದುಕು ಸವೆಸುತ್ತಿದ್ದಾರೆ.
ಇವರ ಹೆಸರು ಶಾಂತಿ. ಇವರ ಇಬ್ಬರು ಮಕ್ಕಳಲ್ಲಿ ಮಗಳು ಸಾವನ್ನಪ್ಪಿದ್ದಾರೆ. ಮಗ ಬೇರೆಡೆ ವಾಸವಿದ್ದಾನೆ. ಪತಿ ಟೈಲರ್.
ಶಾಂತಿ ಅವರು 25 ವರ್ಷಗಳಿಂದ ಯಾರ ಆಶ್ರಯ ಬಯಸದೇ ಆಟೋ ಓಡಿಸಿ ಜೀವನ ಸಾಗಿಸ್ತಾ ಎಲ್ಲರಿಗೂ ಮಾದರಿ ಆಗಿದ್ದಾರೆ.
ಮೊದಲು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ದ ಶಾಂತಿ 1993 ರಿಂದ ಆಟೋ ಓಡಿಸ್ತಿದ್ದಾರೆ.