ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಬೇಕೇ ಅಥವಾ ಬೇಡವೇ ಎಂಬ ವಿಚಾರದ ಕುರಿತು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ.
1997 ರಲ್ಲಿ ಪೌರಾಣಿಕ ಕಾರಣ ಮತ್ತು ಋತುಸ್ರಾವ ಕಾರಣದಿಂದ ನಿಷೇಧ ಹೇರಲಾಗಿತ್ತು. ಈ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಬಗ್ಗೆ ಚರ್ಚೆಗಳಾಗುತ್ತಲೇ ಇದ್ದು, ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಋತುಸ್ರಾವಕ್ಕೆ ಸಂಬಂಧಿಸಿದಂತೆ ಅವರನ್ನ ಹೊರಗಿಡುವ ಪ್ರಕ್ರಿಯೆ ತಾರತಮ್ಯವಲ್ಲವೇ? ಇದು ಆರ್ಟಿಕಲ್ 14,15,17 ರ ಸ್ಪಷ್ಟ ಉಲ್ಲಂಘನೆಯಾಗುತ್ತದೆಯೇ?
ಆರ್ಟಿಕಲ್ 25, 26 ರಲ್ಲಿ ಬಳಸಿರುವಂತೆ ನೈತಿಕತೆಯ ದೃಷ್ಟಿಯಿಂದ ಬೆಂಬಲಿತವಾಗಿಲ್ಲವೆ? ಆರ್ಟಿಕಲ್ 25 ರ ಅಡಿಯಲ್ಲಿ ಮಹಿಳೆಯನ್ನ ಧಾರ್ಮಿಕ ಆಚರಣೆಗಳಿಂದ ಹೊರಗಿಡಬಹುದಾ? ಧಾರ್ಮಿಕ ಸಂಸ್ಥೆಯೊಂದು ತನ್ನ ನಡಾವಳಿಗಳ ಅಡಿಯಲ್ಲಿ ಇಂತಹದ್ದೊಂದು ನಿಷೇಧವನ್ನು ಹೇರಬಹುದಾ?ಶಾಸನಾತ್ಮಕ ಆಡಳಿತ ಯಂತ್ರಗಳ ನಿರ್ವಹಣೆ ಹಾಗೂ ಆರ್ಥಿಕತೆಯನ್ನ ಬಳಸಿಕೊಂಡ ದೇವಾಲಯವೂ ಸಾಂವಿಧಾನಿಕ ನಿಯಮಾವಳಿಗಳನ್ನ ಉಲ್ಲಂಘಿಸುವ ನಡಾವಳಿಗಳನ್ನ ಅಳವಡಿಸಿಕೊಳ್ಳಬಹುದೆ?ಕೇರಳ ಹಿಂದೂ ಧಾರ್ಮಿಕ ಕ್ಷೇತ್ರ ಪ್ರವೇಶ ನಿಯಮ 3ರ ಪ್ರಕರಣ ಧಾರ್ಮಿಕ ಸಂಸ್ಥೆಗಳು 10-50 ವರ್ಷದ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಬಹುದೇ? ಹಾಗಿದ್ದಲ್ಲಿ ಅದು ಸಂವಿಧಾನದ ಆರ್ಟಿಕಲ್ಗಳ ಪ್ರಕಾರ ಲಿಂಗಭೇದ ಮಾಡಿದಂತಾಗುವುದಿಲ್ಲವೇ?ಕೇರಳ ಹಿಂದೂ ಧಾರ್ಮಿಕ ಕ್ಷೇತ್ರ ಪ್ರವೇಶ ನಿಯಮ 3ಬಿ ಆಡಳಿತಾಂಗದ ಅಧಿಕಾರವನ್ನು ಮೀರಿದ ನಿಯಮವೇ? ಒಂದು ವೇಳೆ ಈ ನಿಯಮ ಅಧಿಕಾರದ ಆವರಣದಲ್ಲೇ ಇರುವುದಾದರೇ, ಆ ನಿಯಮ ಸಂವಿಧಾನದ ಮೂರನೇ ಭಾಗದಲ್ಲಿ ನೀಡಲಾಗಿರುವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲವೇ?ಎಂಬ ಬಗ್ಗೆ ತೀರ್ಪು ಬರಲಿದೆ.