ಬೆಂಗಳೂರಿನ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಇಂದು ಪುಟಾಣಿ ಇನ್ಸ್ ಪೆಕ್ಟರ್ ಒಬ್ಬರು ಅಧಿಕಾರಿ ಸ್ವೀಕರಿಸಿದ್ದಾರೆ…! ಠಾಣೆಯ ಸಿಬ್ಬಂದಿ ಪ್ರೀತಿ , ಗೌರವದಿಂದ ಅವರನ್ನು ಸ್ವಾಗತಿಸಿದ್ದು, ಸ್ವಲ್ಪ ಹೊತ್ತು ಮಾತ್ರ ಅವರು ಅಧಿಕಾರದಲ್ಲಿರುತ್ತಾರೆ…!
12 ವರ್ಷದ ಪೋರ ಶಶಾಂಕ್ ಪುಟಾಣಿ ಇನ್ಸ್ ಪೆಕ್ಟರ್.
ತಲಸ್ಸೇಮಿಯಾ ಹಾಗೂ ಮಧುಮೇಹದಿಂದ ಈತ ಬಳಲುತ್ತಿದ್ದು, ವಾಣಿ ವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಚಿಂತಾಮಣಿ ಮೂಲದ ಈತನಿಗೆ ಪೊಲೀಸ್ ಆಗಬೇಕೆಂಬ ಆಸೆ. ಆದರೆ, ಅನಾರೋಗ್ಯವು ಈತನಿಗೆ ವಿದ್ಯಾಭ್ಯಾಸ ಮಾಡಲು ಅಡ್ಡಿಯಾಗಿದೆ. ಆದ್ದರಿಂದ ‘ಮೇಕ್ ಎ ವಿಶ್’ ಫೌಂಡೇಶನ್ ಮತ್ತು ವಾಣಿ ವಿಲಾಸ ಆಸ್ಪತ್ರೆ ಪೊಲೀಸ್ ಇಲಾಖೆ ಸಹಾಯದಿಂದ ಶಶಾಂಕ್ ನ ಕನಸನ್ನು ನನಸು ಮಾಡಿದ್ದಾರೆ. ಒಂದು ಗಂಟೆ ಮಟ್ಟಿಗೆ ಶಶಾಂಕ್ ಪೊಲೀಸ್ ಆಗಿ ಸೇವೆ ಮಾಡಿದ್ದಾನೆ.
ಕಡತಗಳನ್ನಪರಿಶೀಲನೆ ಮಾಡಿದ್ದಾನೆ. ಕುಡುಕರ ಬಗ್ಗೆ ಮಾಹಿತಿ ಪಡೆದು ಅವರಿಗೆ ಬುದ್ಧಿ ಹೇಳುವಂತೆ ಸಹೋದ್ಯೋಗಿಗಳಿಗೆ ಸೂಚಿಸಿದ್ದಾನೆ. ಮದ್ಯಪಾನ ನಿಷೇಧಿಸ ಬೇಕೆಂಬುದು ಈತನ ಬಯಕೆ .