ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮಿಗಳ ಸಾವಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮರಣೋತ್ತರ ವರದಿ ಪೊಲೀಸರ ಕೈ ಸೇರಿದ್ದು , ಶ್ರೀಗಳ ಹೊಟ್ಟೆಯಲ್ಲಿ ವಿಷ ಇರಲಿಲ್ಲ ಎಂದು ತಿಳಿದುಬಂದಿದೆ.
ಪೊಲೀರ ಕೈ ಸೇರಿರುವ ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಶ್ರೀಗಳ ಲಿವರ್ ಸಂಪೂರ್ಣ ಹಾನಿಯಾಗಿದ್ದು, ಎರಡೂ ಮೂತ್ರಕೋಶಗಳು ಕಾರ್ಯ ನಿರ್ವಹಿಸುತ್ತಿಲ್ಲವಂತೆ.
ಅಷ್ಟೇ ಅಲ್ಲದೆ ಅನ್ನನಾಳದಲ್ಲಿ ಹಲವು ರಂಧ್ರಗಳಿದ್ದವು. ಹೊಟ್ಟೆಯಲ್ಲಿ ರಕ್ತನಾಳಗಳು ಒಡೆದು ರಕ್ತಸ್ರಾವವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.