ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಗಲುವಿಕೆಯಿಂದ ಅವರ ಸಾಕು ನಾಯಿ ರೂಬಿ ದುಃಖದ ಮಡುವಿನಲ್ಲಿ ಕಾಲ ಕಳೆಯುತ್ತಿದೆ.
ಶ್ರೀಗಳನ್ನು ಹುಡುಕುತ್ತಾ ರೂಬಿ ರೋಧಿಸುತ್ತಿದೆ.
ರೂಬಿಯ ರೋಧನೆ ಮುಗಿಲು ಮುಟ್ಟಿದೆ. ಅದು ಮಠದ ಹತ್ತಿರ ಯಾರನ್ನೂ ಸುಳಿಯಲು ಬಿಡದೆ , ಕೋಪ ಹಾಗೂ ದುಃಖ ವ್ಯಕ್ತಪಡಿಸ್ತಿದೆ.
ರೂಬಿಯನ್ನು 10 ಸಾವಿರ ರೂ ನೀಡಿ ಶ್ರೀಗಳೇ ತಂದು ಸಾಕಿದ್ದರೆಂದು ತಿಳಿದುಬಂದಿದೆ. ರೂಬಿಯ ಮೇಲೆ ಶ್ರೀಗಳಿಗೆ ತುಂಬಾ ಪ್ರೀತಿಯಿತ್ತು . ರೂಬಿಗೂ ಸ್ವಾಮೀಜಿ ಅಂದರೆ ಪ್ರಾಣವಾಗಿದ್ದರು. ಈಗ ಅಗಲಿದೆ ಅವರ ನೆನಪಲ್ಲಿ ರೂಬಿ ಬೇಸರದಿಂದಿದೆ.