ಸಚಿನ್-ಸೌರವ್ ದಾಖಲೆ ಮುರಿದ ಧವನ್-ಶರ್ಮಾ

Date:

ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ರೆಕಾರ್ಡ್ ಮುರಿದಿದ್ದಾರೆ.

ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ನ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಈ‌ ಆರಂಭಿಕ ಆಟಗಾರರು ದಾಖಲೆ ಬರೆದರು.
ಪಾಕಿಸ್ತಾನದ ವಿರುದ್ಧ ಗರಿಷ್ಠ ಜೊತೆಯಾಟ ಆಡಿದ ಜೋಡಿ ಎಂಬ ಖ್ಯಾತಿ ರೋಹಿತ್-ಧವನ್ ಅವರದ್ದಾಯಿತು.

ಪಾಕ್ ನೀಡಿದ 238 ರನ್ ಗುರಿ ಬೆನ್ನಟ್ಟಿತು. ಈ ವೇಳೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ರನ್ ಶಿಖರ ಕಟ್ಟಿದರು. ಈ ಜೋಡಿ‌ 210 ರನ್ ಜೊತೆಯಾಟ ಆಡಿ ದಾಖಲೆ ಬರೆಯಿತು.
ಪಾಕಿಸ್ತಾನ ವಿರುದ್ಧ ಸಚಿನ್ ಮತ್ತು ಗಂಗೂಲಿ ಈ‌ ಹಿಂದೆ‌ 159ರನ್ ಜೊತೆ ಆಟ ಆಡಿದ್ದೇ ಇಲ್ಲಿಯವರೆಗಿನ ದಾಖಲೆ ಆಗಿತ್ತು.

ಢಾಕಾದಲ್ಲಿ 1998 ರಲ್ಲಿ ಸಚಿನ್ -ಸೌರವ್ ಪಾಕ್ ವಿರುದ್ಧ 159ರನ್ ಜೊತೆ ಆಟ ಆಡಿದ್ದರು.
2008ರಲ್ಲಿ ಢಾಕಾದಲ್ಲಿ ಪಾಕ್ ವಿರುದ್ಧ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ 155ರನ್ ಜೊತೆಯಾಟ ಆಡಿದ್ದರು.
ರೋಹಿತ್, ಧವನ್ ಆಟದ ಬಲದಿಂದ ಟೀಂ ಇಂಡಿಯಾ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಧವನ್ 114ರನ್ ಗಳಿಸಿದರು.‌ ರೋಹಿತ್ ಶರ್ಮಾ ಅಜೇಯ 111 ರನ್ ಮಾಡಿದರು.

Share post:

Subscribe

spot_imgspot_img

Popular

More like this
Related

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...